ಈಗಿನ ಸುದ್ದಿ

ಮಹಾ ಮತದಾನ ಶಾಂತಿಯುತ ಅಂತ್ಯ, ರಾಜ್ಯದಲ್ಲಿ ಶೇ. 68ರಷ್ಟು ಮತದಾನ

ಮಹಾ ಮತದಾನ ಶಾಂತಿಯುತ ಅಂತ್ಯ, ರಾಜ್ಯದಲ್ಲಿ ಶೇ. 68ರಷ್ಟು ಮತದಾನ
Published On :

ಬೆಂಗಳೂರು: ಕರ್ನಾಟಕ ಸೇರಿದಂತೆ ದೇಶದ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ನಡೆದ ಐದನೇ ಹಂತದ ಮಹಾ ಮತದಾನ ಗುರುವಾರ ಬಹುತೇಕ ಶಾಂತಿಯುತವಾಗಿ ಅಂತ್ಯಗೊಂಡಿದ್ದು, ರಾಜ್ಯದಲ್ಲಿ ಶೇ.68ರಷ್ಟು ಮತದಾನವಾಗಿದೆ.

ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಬೆಳಗ್ಗೆ 7ಗಂಟೆಯಿಂದ ಆರಂಭವಾದ ಮತದಾನ ಸಂಜೆ 6ಗಂಟೆಯವರೆ ನಡೆಯಿತು. ಮತ ಚಲಾಯಿಸಲು ಮತದಾರರು ಮತಗಟ್ಟೆಗಳ ಬಳಿ ಸಾಲು ಕಟ್ಟಿ ನಿಂತಿರುವುದು ಸಾಮಾನ್ಯವಾಗಿತ್ತು. ಇನ್ನು ಕೆಲವು ಕಡೆ ಮತದಾನ ಬಹಿಷ್ಕಾರ ಹಾಗೂ ಸಣ್ಣಪುಟ್ಟ ಘರ್ಷಣೆಗಳು ಹೊರತು ಪಡಿಸಿದರೆ, ಮತದಾನ ಬಹುತೇಕ ಶಾಂತಿಯುತವಾಗಿತ್ತು.

ರಾಜ್ಯದಲ್ಲಿ ಘಟಾನುಘಟಿ ನಾಯಕರು ಕಣದಲ್ಲಿದ್ದು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಎಂ. ವೀರಪ್ಪ ಮೊಯ್ಲಿ, ಎಚ್.ಡಿ,ಕುಮಾರಸ್ವಾಮಿ, ಎನ್.ಧರ್ಮಸಿಂಗ್ ಹಾಗೂ ಡಿ.ವಿ.ಸದಾನಂದಗೌಡ ಸೇರಿದಂತೆ ಹಲವು ಪ್ರಮುಖರ ಭವಿಷ್ಯ ಇಂದು ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.

ಶೇಕಡಾವಾರು ಮತದಾನ
ರಾಜ್ಯಾದ್ಯಂತ ಶೇ.68, ಬೆಂಗಳೂರು ದಕ್ಷಿಣ ಶೇ.52, ಬೆಂಗಳೂರು ಕೇಂದ್ರ ಶೇ.52, ಬೆಂಗಳೂರು ಉತ್ತರ ಶೇ.51, ಬೆಂಗಳೂರು ಗ್ರಾಮಾಂತರ ಶೇ.65.29, ಕೋಲಾರ ಶೇ.65, ತುಮಕೂರು ಶೇ.65, ಚಿತ್ರದುರ್ಗ ಶೇ.60, ದಾವಣಗೆರೆ ಶೇ.71, ಬಿಜಾಪುರ ಶೇ.50, ರಾಯಚೂರು ಶೇ.50, ಬೆಳಗಾವಿ ಶೇ 61, ಬೀದರ್ ಶೇ.55, ಕೊಪ್ಪಳ ಶೇ.58, ಬಾಗಲಕೋಟೆ ಶೇ.64, ಉತ್ತರಕನ್ನಡ ಶೇ.61, ದಕ್ಷಿಣ ಕನ್ನಡ ಶೇ.73, ಹಾವೇರಿ ಶೇ.62, ಉಡುಪಿ ಶೇ.70, ಧಾರವಾಡ ಶೇ.61, ಹಾಸನ ಶೇ.69, ಗುಲ್ಬರ್ಗಾ ಶೇ.63, ಚಿಕ್ಕೋಡಿ ಶೇ.66, ಮೈಸೂರು ಶೇ.65,  ಬಳ್ಳಾರಿ ಶೇ.64, ಚಿಕ್ಕಬಳ್ಳಾಪುರ ಶೇ.75, ಮಂಡ್ಯ ಶೇ.65, ಚಾಮರಾಜನಗರ ಶೇ.66, ಶಿವಮೊಗ್ಗ ಶೇ.64

ಮತದಾನದ ವೇಳೆ ನಡೆದ ಕೆಲವು ಘಟನೆಗಳು...
1. ವಾಸ್ತುಗಾಗಿ ಮತಯಂತ್ರದ ದಿಕ್ಕು ಬದಲಿಸಿದ ಕೋಲಾರ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್ ಮುನಿಯಪ್ಪ, ಮತಗಟ್ಟೆ ಅಧಿಕಾರಿ ವರ್ಗ
2. ಹಳೇ ಹುಬ್ಬಳ್ಳಿ, ಗಂಗಾವತಿಯ ಜಂಗಮರ ಕಲ್ಗುಡಿ, ನರಗುಂದ ಸೇರಿದಂತೆ ಹಲವೆಡೆ ಕಾರ್ಯಕರ್ತರನ್ನು ಚದುರಿಸಲು ಲಘು ಲಾಠಿ ಪ್ರಹಾರ. ಶಿಗ್ಗಾಂವಿಯಲ್ಲಿ ಮತಗಟ್ಟೆ ಮುಂದೆ ವಾಮಾಚಾರ.
3. ಮತದಾನ ಮಾಡುವಾಗ ಕುಸಿದು ಬಿದ್ದು ಚಂದುಸಾಬ್ ಹೊಂಗಲ (45) ಸಾವು (ಧಾರವಾಡ); ಚಿಕ್ಕೋಡಿ ಲೋಕಸಭಾ ಮುಗಳಖೋಡ ಗ್ರಾಮದಲ್ಲಿ ಚುನಾವಣಾ ಸಿಬ್ಬಂದಿ ಬಶೀರ್ ಜಾರಿ(52) ಹೃದಯಾಘಾತದಿಂದ ಸಾವು (ಬೆಳಗಾವಿ); ಸತತ ಮತದಾನ ಮಾಡುತ್ತಿದ್ದ ವೃದ್ಧೆಯೊಬ್ಬರು ಗುರುವಾರ ಮತದಾನ ಮಾಡಿದ ನಂತರ ಸಾವು (ಮಂಗಳೂರು)
4. ಮತಗಟ್ಟೆಗಳಲ್ಲಿ ಸಾಹಿತಿಗಳ ಮುಖ ಮತ್ತು ಹೆಸರಿಗೆ ಲೇಬಲ್ (ಬಳ್ಳಾರಿ)
- ಕಾಂಗ್ರೆಸ್ ಪರವಾಗಿ ನಿಂತಿದ್ದ ಅನಂತಮೂರ್ತಿ, ಕಾರ್ನಾಡ್ ಫೋಟೋ, ಹೆಸರು ಮರೆ ಮಾಡಿದ ಆಯೋಗ
5. ಗೋಕಾಕ ತಾಲೂಕಿನ ಕೆಳಗಿನಹಟ್ಟಿ ಗ್ರಾಮದ 202ರ ಮತಗಟ್ಟೆ ಅಧಿಕಾರಿಯನ್ನು ಅಮಾನತು (ಬೆಳಗಾವಿ)
- ಈ ಅಧಿಕಾರಿ ಮತದಾರರಿಗೆ ಒಂದು ಪಕ್ಷದ ಪರವಾಗಿ ಮತ ಚಲಾಯಿಸುವಂತೆ ಹೇಳುತ್ತಿದ್ದರು ಎಂಬ ಆರೋಪ.

ಇತರೆ ರಾಜ್ಯಗಳ ಶೇಕಡಾವಾರು ಮತದಾನ
ಪಶ್ಚಿಮ ಬಂಗಾಳದಲ್ಲಿ ದಾಖಲೆಯ ಶೇ.79ರಷ್ಟು ಮತದಾನ
ಛತ್ತೀಸ್‌ಗಡದಲ್ಲಿ ಶೇ. 64ರಷ್ಟು ಮತದಾನ. ಯಾವುದೇ ರೀತಿಯ ಹಿಂಸಾಚಾರದ ಬಗ್ಗೆ ವರದಿಯಾಗಿಲ್ಲ.
ಮಹಾರಾಷ್ಟ್ರದಲ್ಲಿ ಶೇ.55 ರಷ್ಟು ಮತಾದನ
ಉತ್ತರಪ್ರದೇಶದಲ್ಲಿ ಶೇ.58
ಜಾರ್ಖಂಡ್‌ನಲ್ಲಿ ಶೇ.62
ಬಿಹಾರ ಶೇ.54
ಒಡಿಶಾ ಶೇ.70,
ರಾಜಸ್ಥಾನ ಶೇ.63
ಮಧ್ಯಪ್ರದೇಶ ಶೇ.54.2

ಒಡಿಶಾದ ಕೆಯೊಂಝಾರ್ ಜಿಲ್ಲೆಯಲ್ಲಿ ಸ್ಫೋಟಕಗಳ ವಶ.
ಮಣಿಪುರದಲ್ಲಿ ಇಯಾನ್ ಶರ್ಮಿಳಾಗೆ ಮತದಾನಕ್ಕೆ ಸಿಗದ ಅವಕಾಶ. ಇಂಫಾಲ್‌ನಲ್ಲಿ ಗೃಹ ಬಂಧನದಲ್ಲಿರುವ ಇಯಾನ್ ಶರ್ಮಿಳಾ. ಅವರು ಸಶಸ್ತ್ರ ಪಡೆಗಳ ವಿಶೇಷಾಧಿಕಾರ ರದ್ದು ಮಾಡುವಂತೆ ಹೋರಾಟ ಮಾಡುತ್ತಿರುವ ಮಹಿಳೆ.
ಉತ್ತರ ಪ್ರದೇಶದ ಅನೋಲಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತ ಹಾಕಲು ಅವಕಾಶ ಕೊಡದ್ದಕ್ಕೆ ಕಾರ್ಮಿಕನೊಬ್ಬನಿಂದ ಆತ್ಮಾಹುತಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.