ಈಗಿನ ಸುದ್ದಿ

ಪ್ರಧಾನಿ ಸಿಂಗ್‌ 'ಮೌನಿ'ಯಲ್ಲ: ಪಂಕಜ್ ಪಚೌರಿ

ಪ್ರಧಾನಿ ಸಿಂಗ್‌ 'ಮೌನಿ'ಯಲ್ಲ: ಪಂಕಜ್ ಪಚೌರಿ
Published On :

ನವದೆಹಲಿ: ಕಳೆದ 10 ವರ್ಷಗಳಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು 1000 ಭಾಷಣಗಳನ್ನು ಮಾಡಿದ್ದಾರೆ ಹೀಗಾಗಿ ಪ್ರಧಾನಿ ಸಿಂಗ್ 'ಮೌನಿ' ಅಲ್ಲ ಎಂದು ಪ್ರಧಾನಿ ಮಾಧ್ಯಮ ಸಲಹೆಗಾರ ಪಂಕಜ್ ಪಚೌರಿ ಶುಕ್ರವಾರ ಹೇಳಿದ್ದಾರೆ.

ನವದೆಹಲಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಚೌರಿ, ಪ್ರಧಾನಿಯವರು ಏಕಾಂಗಿಯಾಗಿರಲಿಲ್ಲ ಅವರು ಸಹ ಸಾವಿರಾರು ಭಾಷಣಗಳನ್ನು ಮಾಡಿದ್ದಾರೆ. ಆದರೆ ಮಾಧ್ಯಮಗಳು ಅವುಗಳನ್ನು ಜನರಿಗೆ ತಲುಪಿಸದೆ ಕಡೆಗಣನೆ ಮಾಡಿದೆ. ಹೀಗಾಗಿ ಪ್ರಧಾನಿ ಸಿಂಗ್ 'ಮೌನಿ' ಎಂದು ಬಿಂಬಿತವಾಗಿದೆ ಎಂದರು.

ದೇಶದ ಜನತೆಯೊಂದಿಗೆ ನಿಕಟವಾಗಿ ವರ್ತಿಸಿದ್ದಾರೆ ಆದರೆ ಅವರ ಭಾಷಣವನ್ನು ಪರಿಣಾರಿಯಾಗಿ ಜನರಲ್ಲಿಗೆ ತಲುಪಿಸುವಲ್ಲಿ ಮಾಧ್ಯಮಗಳು ಒಲವು ತೋರಿಸಿಲ್ಲ. ಆದರೆ ಟಿವಿ ಮಾಧ್ಯಮಗಳಿಗಿಂತ ಪತ್ರಿಕೆಗಳು ಹೆಚ್ಚು ಒಲವು ತೋರುತ್ತಿದ್ದವು ಎಂದರು. ಅಲ್ಲದೆ ಕಳೆದ ಐದು ವರ್ಷಗಳಲ್ಲಿ ಸಂಸತ್‌ನಲ್ಲಿ ಪ್ರತಿಪಕ್ಷಗಳ ಅಬ್ಬರದಿಂದಾಗಿ ಹೆಚ್ಚು ಮಾತನಾಡಲು ಪ್ರಧಾನಿ ಸಿಂಗ್ ಅವರಿಗೆ ಅವಕಾಶ ಸಿಕ್ಕಿರಲಿಲ್ಲ ಎಂದು ತಿಳಿಸಿದರು.  

ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಹೆಚ್ಚಾಗಿ ಸಿಂಗ್ ಅವರು ಕಾಣಿಸಿಕೊಂಡಿಲ್ಲ ಎಂಬ ಪ್ರಶ್ನೆಗೆ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ನಿರ್ಧಾರದಂತೆ ನಾಲ್ಕು ಚುನಾವಣಾ ಪ್ರಚಾರ ಸಮಾವೇಶದಲ್ಲಿ ಪ್ರಧಾನಿ ಸಿಂಗ್ ಭಾಗವಹಿಸಿದ್ದರು ಎಂದರು.

ಮಾಜಿ ಪ್ರಧಾನಿ ಮಾಧ್ಯಮ ಸಲಹೆಗಾರ ಸಂಜಯ್ ಬಾರು ಅವರ ಪುಸ್ತಕದಲ್ಲಿರುವ ಆರೋಪಗಳ ಕುರಿತಂತೆ ಮಾತನಾಡಿದ ಪಚೌರಿ, ಸಂಜಯ್ ಬಾರು ಅವರ ಪುಸ್ತಕದಲ್ಲಿ ನಮೂದಿಸಿರುವ ಅಂಶಗಳು ನಿರಾಧಾರ. ಪ್ರಧಾನಿ ಕಾರ್ಯಾಲಯದ ಯಾವುದೇ ಕಡತಗಳನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನೋಡಿ ಅನಂತರ ಪ್ರಧಾನಿ ಕಡತಗಳಿಗೆ ಸಹಿ ಹಾಕುತ್ತಿದ್ದರು ಎಂಬುದು ಸತ್ಯಕ್ಕೆ ದೂರ ಎಂದು ಸ್ಪಷ್ಟಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.