ಎನ್‌ಡಿಎ ಗೆದ್ದರೆ ಮೋದಿಯೇ ಪ್ರಧಾನಿ: ರಾಜನಾಥ್ ಸಿಂಗ್

ನವದೆಹಲಿ: ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎಗೆ ಬಹುಮತ ಬಂದರೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯೇ ಪ್ರಧಾನಮಂತ್ರಿ, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಭಾನುವಾರ ಸ್ಪಷ್ಟಪಡಿಸಿದ್ದಾರೆ.
ಇಂದು ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದ ವೇಳೆ ರಾಜನಾಥ್ ಸಿಂಗ್ ಈ ವಿಷಯ ಸ್ಪಷ್ಟಪಡಿಸಿದ್ದಾರೆ. ನಾವು ಈಗಾಗಲೇ ಮೋದಿ ಅವರನ್ನು ಪ್ರಧಾನಿ ಎಂದು ತೀರ್ಮಾನ ಮಾಡಿದ್ದೇವೆ. ಈ ನಿರ್ಣಯದಿಂದ ಹಿಂದೆ ಸರಿಯುವ ಯಾವುದೇ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಒಂದು ವೇಳೆ ಎನ್‌ಡಿಎ ಮೈತ್ರಿಕೂಟಕ್ಕೆ ಬಹುಮತ ಕಡಿಮೆಯಾದರೂ ಈ ಬಗ್ಗೆ ನಾವು ಬೇರೆ ರೀತಿ ಆಲೋಚನೆ ಮಾಡುವುದಿಲ್ಲ ಎಂದರು. ಕೇವಲ ಕಾನೂನುಗಳಿಂದಲೇ ದೇಶದ ಆಡಳಿತವನ್ನು ಮಾಡಲು ಸಾಧ್ಯವಿಲ್ಲ. ದೇಶದ ಆಡಳಿತವನ್ನು ನಡೆಸುವ ವ್ಯಕ್ತಿಗೆ ಮನೋಸ್ಥೈಯ ಹಾಗು ನೈತಿಕ ಸ್ಥೈರ್ಯ ಇರಬೇಕು ಎಂದರು.
ಮೋದಿಯವರು ತಲೆಬುರುಡೆ ಹಾರವನ್ನು ಕುತ್ತಿಗೆಗೆ ಹಾಕಿಕೊಂಡಿದ್ದಾರೆ ಎಂಬ ಪ್ರತಿಪಕ್ಷಗಳ ಟೀಕೆಗಳು, ಆರೋಪಗಳು ನಿರಾಧರಾ. ಇದರಲ್ಲಿ ಯಾವುದೇ ರೀತಿ ಸತ್ಯಾಂಶವಿಲ್ಲ ಎಂದರು. ಅಲ್ಲದೆ ಯಾವುದೇ ಒಂದು ಸಮುದಾಯದ ಪರವಾಗಿ ನಾನು ಮತ ಕೇಳುವುದಿಲ್ಲ. ದೇಶದ ಪರವಾಗಿ ಮತ ಕೇಳುತ್ತೇನೆ ಎಂಬ ಮೋದಿಯವರ ಹೇಳಿಕೆಯನ್ನು ರಾಜನಾಥ್‌ಸಿಂಗ್ ಸಮರ್ಥಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


