ಆಸ್ತಿ ವಿವಾದ; ತೊಗಾಡಿಯಾ ವಿರುದ್ಧ ವ್ಯಥಾರೋಪ: ಆರೆಸ್ಸೆಸ್ಸ್

ನವದೆಹಲಿ: ಹಿಂದೂಗಳ ಆಸ್ತಿಯನ್ನು ಮುಸ್ಲಿಂ ಸಮುದಾಯದವರು ಖರೀದಿಸುವಂತಿಲ್ಲ ಎಂದು ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿರುವ ವಿಹಿಂಪ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರ ರಕ್ಷಣೆಗೆ ಆರೆಸ್ಸೆಸ್ಸ್ ಧಾವಿಸಿದೆ.
ತೊಗಾಡಿಯಾ ಅವರು ಈ ರೀತಿ ಹೇಳಲೇ ಇಲ್ಲ. ಅವರ ಹೇಳಿಕೆಯನ್ನು ತಿರುಚಲಾಗಿದೆ ಎಂದು ಆರೆಸ್ಸೆಸ್ನ ರಾಂ ಮಾಧವ್ ಹೇಳಿದ್ದಾರೆ.
ಗುಜರಾತ್ನ ಭಾವ್ನಗರ ಟೌನ್ ನಲ್ಲಿ ಶನಿವಾರ ವಿಹಿಂಪ ಮತ್ತು ಬಜರಂಗದಳದ ಸದಸ್ಯರ ಉಪಸ್ಥಿತಿಯಲ್ಲಿ ಹಿಂದೂ ಕುಟುಂಬದವರ ಆಸ್ತಿಯನ್ನು ಮುಸ್ಲಿಂ ಉದ್ಯಮಿಯೊಬ್ಬರು ಖರೀದಿಸುವುದಕ್ಕೆ ತೊಗಾಡಿಯಾ ತಡೆಯೊಡ್ಡಿದ್ದರು ಎಂದು ಹೇಳಲಾಗುತ್ತಿದೆ.
48 ಗಂಟೆಗಳ ಕಾಲಾವಧಿಯಲ್ಲಿ ಮನೆ ಖಾಲಿ ಮಾಡದೇ ಇದ್ದರೆ ತಾನು ಮನೆಯ ಮುಂದೆ ಭಜರಂಗದಳದ ಬೋರ್ಡ್ ಹಾಕಿ ಮನೆಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗುವುದು ಎಂಬುದಾಗಿ ತೊಗಾಡಿಯಾ ಬೆದರಿಕೆಯೊಡ್ಡಿದ್ದರು.
ತೊಗಾಡಿಯಾ ಅವರ ಈ ಹೇಳಿಕೆಗೆ ವ್ಯಾಪಕ ಟೀಕೆಗಳು ಎಲ್ಲೆಡೆಯಿಂದ ಕೇಳಿ ಬಂದಿದ್ದವು.
ಕಾಂಗ್ರೆಸ್ನ ಕೆ.ರೆಹಮಾನ್ ಖಾನ್, ಮೋದಿಯವರು ಕಾನೂನಿಗೆ ಬೆಲೆ ಕೊಡುತ್ತಿದ್ದರೆ, ಇಂಥಾ ವಿವಾದಾತ್ಮಕ ಹೇಳಿಕೆ ನೀಡಿದ ತೊಗಾಡಿಯಾ ಅವರನ್ನು ಬಂಧಿಸಲಿ ಎಂದು ಹೇಳಿದ್ದರು.
ಏತನ್ಮಧ್ಯೆ, ತೊಗಾಡಿಯಾ ಅವರು ವಿವಾದಾತ್ಮಕವಾಗಿ ಯಾವುದೇ ಹೇಳಿಕೆ ನೀಡಿಲ್ಲ ಎನ್ನುವ ಮೂಲಕ ಆರೆಸ್ಸೆಸ್ಸ್ ತೊಗಾಡಿಯಾ ಬೆಂಬಲಕ್ಕೆ ನಿಂತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


