ಈಗಿನ ಸುದ್ದಿ

ಕಲ್ಲಿದ್ದಲು ಹಗರಣ: ಕುಮಾರ ಮಂಗಲಂ ಬಿರ್ಲಾ ವಿಚಾರಣೆ ಸಾಧ್ಯತೆ

ಕಲ್ಲಿದ್ದಲು ಹಗರಣ: ಕುಮಾರ ಮಂಗಲಂ ಬಿರ್ಲಾ ವಿಚಾರಣೆ ಸಾಧ್ಯತೆ
Published On :

ನವದೆಹಲಿ: ಕಲ್ಲಿದ್ದಲು ಘಟಕ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಹಿಂಡಾಲ್ಕೋ ಚೇರ್‌ಮೆನ್ ಕುಮಾರ ಮಂಗಲಂ ಬಿರ್ಲಾ ಅವರನ್ನು ಈ ವಾರಾಂತ್ಯಕ್ಕೆ ವಿಚಾರಣೆಗೊಳಪಡಿಸುವ ಸಾಧ್ಯತೆಯಿದೆ.

9 ವರ್ಷಗಳ ಹಿಂದೆ ಎರಡು ಕಲ್ಲಿದ್ದಲು ಘಟಕಗಳ ಹಂಚಿಕೆ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸಿಬಿಐ ಕುಮಾರ ಮಂಗಲಂ ಬಿರ್ಲಾ, ಪಿ ಸಿ ಪರಾಖ್, ಹಿಂಡಾಲ್ಕೋ ಮತ್ತು ಕಲ್ಲಿದ್ದಲು ಸಚಿವಾಲಯದ ಕೆಲವು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿತ್ತು.

ಇವರ ವಿರುದ್ಧ ಎಫ್‌ಐಆರ್ ದಾಖಲಿಸಿದ ನಂತರ ದೇಶದ ವಿವಿಧ ಪ್ರದೇಶಗಳಲ್ಲಿ ಸಿಬಿಐ ದಾಳಿ ಕೂಡಾ ನಡೆಸಿತ್ತು.

ಕಳೆದ ತಿಂಗಳು ಸಿಬಿಐ ಪ್ರಧಾನಿ ಮನಮೋಹನ್ ಸಿಂಗ್ ಅವರ ಸಲಹೆಗಾರ ನಾಯರ್‌ಗೆ ಪ್ರಶ್ನಾವಳಿಗಳನ್ನು ಕಳುಹಿಸಿದ್ದು, ನಾಯರ್ ಅದಕ್ಕೆ ಉತ್ತರಿಸಿದ್ದರು.

ಆದಾಗ್ಯೂ, ಕಲ್ಲಿದ್ದಲು ಹಗರಣದ ಆರೋಪವನ್ನು ನಿರಾಕರಿಸಿದ ಹಿಂಡಾಲ್ಕೋ, ತಾವು ಕಲ್ಲಿದ್ದಲು ಘಟಕ ಹಂಚಿಕೆಯಲ್ಲಿ ಸರ್ಕಾರದ ಎಲ್ಲ ನೀತಿಗಳನ್ನು ಸರಿಯಾಗಿಯೇ ಪಾಲಿಸಿದ್ದೇವೆ ಎಂದು ಹೇಳಿದೆ.

ಏತನ್ಮಧ್ಯೆ, ಕಲ್ಲಿದ್ದಲು ಸಚಿವಾಲಯದ ಮಾಜಿ ರಾಜ್ಯ ಸಚಿವ ದಾಸರಿ ನಾರಾಯಣ ನಾರಾಯಣ ರಾವ್ ಅವರನ್ನು ಸಿಬಿಐ ಸೋಮವಾರ ವಿಚಾರಣೆಗೊಳಪಡಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.