ಈಗಿನ ಸುದ್ದಿ

ಕಾಂಗ್ರೆಸ್ ಅಥವಾ ಬಿಜೆಪಿಯಾದರೇನು? ಭ್ರಷ್ಟ ನಾಯಕರಿಗೆ ಸ್ಥಾನವಿಲ್ಲ: ಮೋದಿ

ಕಾಂಗ್ರೆಸ್ ಅಥವಾ ಬಿಜೆಪಿಯಾದರೇನು? ಭ್ರಷ್ಟ ನಾಯಕರಿಗೆ ಸ್ಥಾನವಿಲ್ಲ: ಮೋದಿ
Published On :

ಹರ್ದೋಯಿ: ಇಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ನಾನು ಭ್ರಷ್ಟ ನಾಯಕ ರಹಿತ ಸಂಸತ್‌ನ್ನು ಬಯಸುತ್ತೇನೆ. ನಾನ್ಯಾವುದೇ ಭ್ರಷ್ಟ ರಾಜಕಾರಣಿ ಸಂಸತ್‌ನಲ್ಲಿರಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಭ್ರಷ್ಟ ರಾಜಕಾರಣಿಗಳು ಬಿಜೆಪಿ, ಎನ್‌ಡಿಎ ಅಥವಾ ಇನ್ಯಾವುದೇ ಪಕ್ಷದಲ್ಲಿರಲಿ ನಾನದನ್ನು ಸಹಿಸುವುದಿಲ್ಲ. ತಪ್ಪು ಮಾಡಿದವರು ಯಾರೇ ಆಗಲಿ ಅವರಿಗೆ ಶಿಕ್ಷೆಯಾಗಲೇಬೇಕೆಂದು ಮೋದಿ ಗುಡುಗಿದ್ದಾರೆ.

ನಾವು ಸರ್ಕಾರ ರಚಿಸಿದರೆ, ಯಾವುದೇ ಕ್ರಿಮಿನಲ್ ರಾಜಕಾರಣಿ ಸಂಸತ್‌ಗೆ ಪ್ರವೇಶಿಸದಂತೆ ತಡೆಯುತ್ತೇನೆ. ಬಿಜೆಪಿ ಅಥವಾ ಎನ್‌ಡಿಎ ಅಥವಾ ಇನ್ಯಾವುದೇ ಪಕ್ಷಕ್ಕೆ ಸೇರಿದ ಕ್ರಿಮಿನಲ್ ರಾಜಕಾರಣಿಗಳಿದ್ದರೆ ಅವರ ವಿರುದ್ಧ ಕ್ರಮ ತೆಗೆದುಕೊಂಡು ಸಂಸತ್ ಪ್ರವೇಶಿಸದಂತೆ ತಡೆಯಲಾಗುವುದು.

ನಾನು ಜಯ ಪರಾಜಯದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ನಾನ್ಯಾವತ್ತೂ ನನ್ನ ಸಿದ್ಧಾಂತಗಳ ಜತೆಗೆ ರಾಜಿ ಮಾಡಿಕೊಂಡಿಲ್ಲ. ಕ್ರಿಮಿನಲ್ ರಾಜಕಾರಣಿಗಳಿದ್ದರೆ ಅವರ ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ತಾನು ಸಮಿತಿಯನ್ನು ರೂಪಿಸುತ್ತೇನೆ ಎಂದು ಮೋದಿ ಹೇಳಿದ್ದಾರೆ.

ಹರ್ದೋಯಿಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಸೋಮವಾರ ಇತಾ, ಹರ್ತಾಸ್, ಫಿರೋಜಾಬಾದ್ ಮತ್ತು ಮಥುರಾದಲ್ಲಿ ನಡೆಯುವ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.