ನಾನು ಟೀ ಮಾರಿದ್ದೇನೆ ಆದರೆ ಕಾಂಗ್ರೆಸ್ನಂತೆ ದೇಶವನ್ನೇ ಮಾರಿಲ್ಲ: ಮೋದಿ

ಹರ್ದೋಯಿ: ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ಮುಂದುವರಿಸಿದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ನಾನು ಟೀ ಮಾರಿದ್ದೇನೆ ನಿಜ, ಆದರೆ ಕೇಂದ್ರದಲ್ಲಿರುವ ಯುಪಿಎ ಸರ್ಕಾರದಂತೆ ಎಂದಿಗೂ ದೇಶವನ್ನು ಮಾರಿಲ್ಲ ಎಂದು ಹೇಳಿದ್ದಾರೆ.
ಹರ್ದೋಯಿಯಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ನಾನು ಟೀ ಮಾರಿದ್ದೇನೆ ಆದರೆ ಯುಪಿಎ ಒಕ್ಕೂಟಗಳಂತೆ ದೇಶವನ್ನು ಮಾರಿಲ್ಲ ಎಂದು ಹೇಳಲು ಹೆಮ್ಮೆಯಿದೆ ಎಂದಿದ್ದಾರೆ.
ಕಾಂಗ್ರೆಸ್ ಸರ್ಕಾರ ನಮ್ಮ ದೇಶವನ್ನು ಎಂಥಾ ಕೂಪಕ್ಕೆ ತಳ್ಳಿದೆಯೆಂದರೆ ಅದರಿಂದ ದೇಶವನ್ನು ಹೊರತರಲು ನನಗೆ ತುಂಬಾ ಜನರ ಬೆಂಬಲ ಬೇಕಾಗಿದೆ ಎಂದು ಮೋದಿ ಹೇಳಿದ್ದಾರೆ.
ಅದೇ ವೇಳೆ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸಭಿಕರನ್ನುದ್ದೇಶಿಸಿ ನಿಮಗೆ ದೆಹಲಿಯಲ್ಲಿರುವ ಅಮ್ಮ ಮತ್ತು ಮಗ ನೀಡುವ ಆಮ್ಲಜನಕದಿಂದ ನಡೆಸಲ್ಪಡುವ ಸರ್ಕಾರ ಬೇಕೇ? ಎಂದು ಕೇಳಿದ್ದಾರೆ.
ಮಾತ್ರವಲ್ಲದೆ, ಅಮೇಠಿಯಲ್ಲಿಯೇ ಅಧಿಕಾರ ಚಲಾಯಿಸಲು ಸಾಧ್ಯವಾಗದೇ ಇರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಕೇಂದ್ರದಲ್ಲಿ ಆಡಳಿತ ನಡೆಸಲು ಸಾಧ್ಯವೆ? ನಿಮಗೆಲ್ಲರಿಗೂ ಕೇಂದ್ರದಲ್ಲಿ ಸಶಕ್ತ ಸರ್ಕಾರ ಬೇಕೆಂದು ಅನಿಸುವುದಿಲ್ಲವೆ? ಎಂದು ಪ್ರಶ್ನಿಸಿದ್ದಾರೆ.
ದಲಿತ ಮತ್ತು ಬಡ ಕುಟುಂಬಗಳಿಗೆ ರಾಹುಲ್ ಗಾಂಧಿ ಭೇಟಿ ನೀಡಿರುವುದಕ್ಕೆ ಹೆಚ್ಚಿನ ಪ್ರಚಾರ ನೀಡುತ್ತಿರುವುದನ್ನು ವ್ಯಂಗ್ಯ ಮಾಡಿದ ಮೋದಿ, ರಾಹುಲ್ ಅವರ ಈ ಭೇಟಿ ತಾಜ್ ಮಹಲ್ ನ್ನು ನೋಡಲು ಪ್ರವಾಸಿಗರು ಬರುವ ರೀತಿಯಂತಿದೆ ಎಂದು ಲೇವಡಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


