ಮೋದಿ ಅಲೆ ಮಾಧ್ಯಮ ಸೃಷ್ಟಿ: ಪ್ರಧಾನಿ ಸಿಂಗ್

ನವದೆಹಲಿ: ದೇಶದಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅಲೆ ಎಂಬುದಿಲ್ಲ, ಇದೆಲ್ಲ ಕೇವಲ ಮಾಧ್ಯಮಗಳ ಸೃಷ್ಟಿ ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಗುರುವಾರ ಹೇಳಿದ್ದಾರೆ.
ಇಂದು ದೇಶಾದ್ಯಂತ 6ನೇ ಹಂತದ ಮತದಾನ ನಡೆಯುತ್ತಿದ್ದು, ಅಸ್ಸಾಂನ 6 ಕ್ಷೇತ್ರಗಗಳು ಸೇರಿದಂತೆ 117 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಅಸ್ಸಾಂನ ಗುವಾಹತಿ ಲೋಕಸಭಾ ಕ್ಷೇತ್ರದ ದಿಸ್ಪುರ್ನಲ್ಲಿ ಇಂದು ಬೆಳಗ್ಗೆ ಮನಮೋಹನ್ ಸಿಂಗ್ ಪತ್ನಿ ಸಮೇತ ಮತದಾನ ಮಾಡಿದರು.
ಮತದಾನ ಬಳಿಕ ಮಾತನಾಡಿದ ಸಿಂಗ್, ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ದೇಶದ ಜನತೆ ಮೋದಿ ಜಪ ಮಾಡುತ್ತಿಲ್ಲ ಇದೆಲ್ಲ ಸುಳ್ಳು. ದೇಶದಲ್ಲಿ ಮೋದಿ ಅಲೆ ಎಂಬುದಿಲ್ಲ ಇದೆಲ್ಲ ಬರೀ ಮಾಧ್ಯಮಗಳ ಸೃಷ್ಟಿ ಎಂದು ಹೇಳಿದರು.
ಅಸ್ಸಾಂನಲ್ಲಿ 6 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ದುಬ್ರಿ, ಕೊಕ್ರಜಾರ್, ಗುವಾಹತಿ, ನೌವ್ಗೊಂಗ್, ಮಂಗಳದೈ ಮತ್ತು ಬರ್ಪೇಟದಲ್ಲಿ ಬೆಳಗಿನಿಂದಲೇ ಮತದಾನ ಬಿರಿಸಿನಿಂದ ನಡೆಯುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


