6ನೇ ಹಂತದ ಚುನಾವಣೆ: ದೇಶಾದ್ಯಂತ 117 ಕ್ಷೇತ್ರಗಳಲ್ಲಿ ಬಿರುಸಿನ ಮತದಾನ

ನವದೆಹಲಿ: ದೇಶಾದ್ಯಂತ 117 ಲೋಕಸಭಾ ಕ್ಷೇತ್ರಗಳಲ್ಲಿ ಆರನೇ ಹಂತದ ಮತದಾನ ಇಂದು ಬೆಳಗ್ಗೆ 7ಗಂಟೆಯಿಂದ ಆರಂಭಗೊಂಡಿದ್ದು, 11 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ.
ಒಟ್ಟು 9 ಹಂತಗಳ ಮತದಾನದ ಪೈಕಿ ಈ ಹಂತ ಮೂರನೇ ಅತಿದೊಡ್ಡ ಹಂತವಾಗಿದೆ. ಕೇಂದ್ರ ಮಾಜಿ ಸಚಿವ ದಯಾನಿಧಿ ಮಾರನ್, ವೈಕೋ, ವಿತ್ತ ಸಚಿವ ಚಿದಂಬರಂ ಪುತ್ರ ಕಾರ್ತಿ ಚಿದಂಬರಂ, ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಹಾಗೂ ಅಜಿತ್ ಸಿಂಗ್ ಸೇರಿದಂತೆ ಹಲವು ಪ್ರಮುಖ ನಾಯಕರು ಕಣದಲ್ಲಿದ್ದಾರೆ.
ತಮಿಳುನಾಡಿನ 39, ಮಹಾರಾಷ್ಟ್ರದ 19, ಉತ್ತರಪ್ರದೇಶದ 12, ಬಿಹಾರದ 7, ಅಸ್ಸಾಂನ 6, ಜಾರ್ಖಂಡ್ನ4, ಕಾಶ್ಮೀರದ 1 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ.
ಅಸ್ಸಾಂನ ಗುವಾಹಟಿಯಲ್ಲಿ ಪ್ರಧಾನಿ ಸಿಂಗ್ ಮತದಾನ
ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಅಸ್ಸಾಂನ ಗುವಾಹಟಿಯಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಮತದಾನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲೆಲ್ಲೂ ಮೋದಿ ಅಲೆ ಇಲ್ಲ. ಇದು ಕೇವಲ ಮಾಧ್ಯಮ ಸೃಷ್ಟಿ ಎಂದರು.
ಹಕ್ಕು ಚಲಾಯಿಸಿದ ಪ್ರಮುಖರು
ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ, ಕೇಂದ್ರ ಸಚಿವ ಪಿ.ಚಿದಂಬರಂ, ಖ್ಯಾತ ನಟರಾದ ರಜನಿಕಾಂತ್, ಕಮಲ್ಹಾಸನ್, ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕರುನಾಣಾನಿಧಿ ಪುತ್ರಿ ಕನಿಮೋಳಿ ಅವರು ಚೆನ್ನೈನಲ್ಲಿ ಇಂದು ಬೆಳಗ್ಗೆ ತಮ್ಮ ಹಕ್ಕು ಚಲಾಯಿಸಿದರು.
ಇನ್ನು ಮುಂಬೈನಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ ಅವರ ಪತ್ನಿ ಅಂಜಲಿ ತೆಂಡೂಲ್ಕರ್, ಖ್ಯಾತ ನಟಿ ವಿದ್ಯಾಬಾಲನ್ ಹಾಗೂ ನಟ ಅಮಿರ್ ಖಾನ್, ಲಖನೌನಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಗೂ ಮುಲಾಯಂ ಸಿಂಗ್ ಯಾದವ್ ಅವರು ತಮ್ಮ ಮತ ಚಲಾಯಿಸಿದರು.
4 ಗಂಟೆಯವರೆಗೆ ಶೇಕಡಾವಾರು ಮತದಾನ
ಮಧ್ಯಪ್ರದೇಶದಲ್ಲಿ ಶೇ. 51ರಷ್ಟು ಮತದಾನ
ಪಶ್ಚಿಮ ಬಂಗಾಳ ಶೇ. 64ರಷ್ಟು ಮತದಾನ
ರಾಜಸ್ತಾನದಲ್ಲಿ ಶೇ. 51.88ರಷ್ಟು ಮತದಾನ
ಬಿಹಾರದಲ್ಲಿ ಶೇ. 46ರಷ್ಟು
ತಮಿಳುನಾಡಿನಲ್ಲಿ ಶೇ.60ರಷ್ಟು
ಮಹಾರಾಷ್ಟ್ರದಲ್ಲಿ ಶೇ.26.90ರಷ್ಟು
ಉತ್ತರಪ್ರದೇಶದ ಶೇ.46 ರಷ್ಟು
ಅಸ್ಸಾಂನಲ್ಲಿ ಶೇ.64 ರಷ್ಟು
ಜಾರ್ಖಂಡ್ನ ಶೇ.56 ರಷ್ಟು
ಕಾಶ್ಮೀರದ ದಲ್ಲಿ ಶೇ.22 ರಷ್ಟು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


