ಪ್ರಿಯಾಂಕರಿಂದ ಕೀಳು ಮಟ್ಟದ ಭಾಷಣ: ಅರುಣ್ ಜೇಟ್ಲಿ

ನವದೆಹಲಿ: ಭಾರತೀಯ ಜನತಾ ಪಕ್ಷದ ಮುಖಂಡರನ್ನು ಹೆದರಿದ ಇಲಿಗಳು ಎಂದು ಜರಿಯುವ ಮೂಲಕ ಪ್ರಿಯಾಂಕ ಗಾಂಧಿ ಅವರು ರಾಜಕೀಯ ಭಾಷಣವನ್ನು ಕೀಳು ಮಟ್ಟಕ್ಕೆ ಇಳಿಸಿದ್ದಾರೆ ಎಂದು ಬಿಜೆಪಿ ಮುಖಂಡ ಅರುಣ್ ಜೇಟ್ಲಿ ಅವರು ಸೋಮವಾರ ದೂರಿದ್ದಾರೆ.
ಬಿಜೆಪಿ ಮುಖಂಡರು ಬೆದರಿದ ಇಲಿಗಳಲ್ಲ ಎಂದಿರುವ ಜೇಟ್ಲಿ, ಪ್ರಿಯಾಂಕರ ಕೀಳು ಮಟ್ಟದ ಭಾಷಣದಿಂದಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಅವರ ಕುಟುಂಬ ಕಾನೂನಿಗೆ ಹೆದರಬೇಕಾಗಿದೆ ಎಂದರು. ಪ್ರಿಯಾಂಕ ಅವರು ತೀರ ಕೀಳು ಮಟ್ಟದ ಭಾಷೆ ಬಳಸುವ ಮೂಲಕ ರಾಜಕೀಯ ಪ್ರಚಾರದ ಬೆಲೆಯನ್ನು ಕುಗ್ಗಿಸಿದ್ದಾರೆ ಎಂದು ಜೇಟ್ಲಿ ತಮ್ಮ ಬ್ಲಾಗ್ನಲ್ಲಿ ಬರೆದುಕೊಂಡಿದ್ದಾರೆ.
ಒಂದು ವೇಳೆ ನನ್ನ ಕುಟುಂಬದ ಯಾರಾದರು ಎದುರಾಳಿ ಪಕ್ಷದವರನ್ನು ಇಲಿಗಳು ಎಂದು ಜರಿದಿದ್ದರೆ ನನಗೆ ಬೇರಸವಾಗುತ್ತಿತ್ತು. ಆದರೆ ಯಾವುದೇ ತಡೆ ಇಲ್ಲದೆ ಮಾತನಾಡುವ ಪ್ರಿಯಾಂಕ ರಾಜಕೀಯ ಭಾಷಣಕ್ಕೆ ಕಳಂಕ ತಂದಿದ್ದಾರೆ ಎಂದು ಕುಟುಕಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಭೂ ಅಕ್ರಮಗಳಿಗೆ ಸಂಬಂಧಿಸಿ ಬಿಜೆಪಿ ವಿಡಿಯೋ ಮತ್ತು ಕಿರು ಹೊತ್ತಗೆ ಬಿಡುಗಡೆ ಮಾಡಿತ್ತು. 'ರಾಬರ್ಟ್ ಅಭಿವೃದ್ಧಿ ಮಾದರಿ' ಯಶಸ್ವಿಯಾಗಲು ಗಾಂಧಿ ಕುಟುಂಬದ ಕೃಪಾಕಟಾಕ್ಷವೇ ಕಾರಣ ಎಂದು ಆರೋಪಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಪ್ರಿಯಾಂಕ ಗಾಂಧಿ, ಬಿಜೆಪಿ ಮುಖಂಡರು ಹೆದರಿದ ಇಲಿಗಳು ಎಂದು ಜರಿದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


