ಮೋದಿಗೆ ಹವಾಲಾ ಏಜೆಂಟ್ಗಳ ಜತೆ ನಂಟು: ಕಾಂಗ್ರೆಸ್

ನವದೆಹಲಿ: ಗುಜರಾತ್ ಮುಖ್ಯಮಂತ್ರಿ ಹಾಗೂ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ವಿರುದ್ದದ ವಾಗ್ದಾಳಿಯನ್ನು ಮತ್ತುಷ್ಟು ತೀವ್ರಗೊಳಿಸಿರುವ ಕಾಂಗ್ರೆಸ್, ಸೂರತ್ ಮೂಲದ ಹವಾಲಾ ಕಿಂಗ್ಪಿನ್ ಅಫ್ರೊಜ್ ಪಟ್ಟಾ ಹಾಗೂ ನಿಮ್ಮ ನಡುವಿನ ಸಂಬಂಧ ಏನು ಎಂಬುದನ್ನು ಬಹಿರಂಗಪಡಿಸಿ ಎಂದು ಸೋಮವಾರ ಆಗ್ರಹಿಸಿದೆ.
ಕಳೆದ ತಿಂಗಳಷ್ಟೆ ಪಟ್ಟಾ ಮನೆ ಮೇಲೆ ಜಾರಿ ನಿರ್ದೇಶನಾಲಯ ದಾಳಿ ಮಾಡಿತ್ತು.
ಹವಾಲಾ ಆರೋಪ ಎದುರಿಸುತ್ತಿರುವ ಪಟ್ಟಾನನ್ನು ರಕ್ಷಿಸುತ್ತಿರುವುದು ಏಕೆ? ಆತನಿಗೂ ನಿಮಗೂ ಏನು ಸಂಬಂಧ? ಎಂಬುದನ್ನು ದೇಶದ ಜನತೆಯ ಮುಂದೆ ಮೋದಿ ಬಹಿರಂಗಪಡಿಸಬೇಕು ಎಂದು ಸಂದರ್ಶನವೊಂದರಲ್ಲಿ ಕಾಂಗ್ರೆಸ್ ವಕ್ತಾರ ರಣದೀಪ್ ಸುಜರ್ವಾಲಾ ಅವರು ಆಗ್ರಹಿಸಿದ್ದಾರೆ.
ಹವಾಲಾ ಹಗರಣದ ಪ್ರಮುಖ ಆರೋಪಿ ಪಟ್ಟಾನೊಂದಿಗೆ ನರೇಂದ್ರ ಮೋದಿ ಸಂಪರ್ಕ ಹೊಂದಿದ್ದಾರೆ ರಣದೀಪ್ ಆರೋಪಿಸಿದ್ದಾರೆ.
ಅಫ್ರೊಜ್ ಪಟ್ಟಾ ಹವಾಲಾ ಮೂಲಕ 1 ಸಾವಿರ ಕೋಟಿ ರುಪಾಯಿ ವರ್ಗಾವಣೆ ಮಾಡಿದ್ದಾರೆ ಆರೋಪ ಇದೆ. ಈ ಹಣ ಯಾರದ್ದು? ಮೋದಿ ಉತ್ತರಿಸಬೇಕು ಎಂದಿದ್ದಾರೆ ಕಾಂಗ್ರೆಸ್ ವಕ್ತಾರ.
ಈ ಮಧ್ಯೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಕಾಂಗ್ರೆಸ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಉಪಾಧ್ಯ ರಾಹುಲ್ ಗಾಂಧಿ ಅವರು, ಬಿಜೆಪಿ ಪ್ರಧಾನಿ ಅಭ್ಯರ್ಥಿಗೆ ಹವಾಲಾ ಏಜೆಂಟಗಳೊಂದಿಗೆ ಸಂಪರ್ಕ ಇದೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಉದ್ಯಮಿ ಅದಾನಿಗೆ ಮೋದಿ 40 ಸಾವಿರ ಕೋಟಿ ರುಪಾಯಿ ಮೌಲ್ಯದ ಭೂಮಿ ನೀಡಿದ್ದಾರೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


