ಈಗಿನ ಸುದ್ದಿ

ಫಾರೂಕ್ ಕುಟುಂಬದವರು ಜಾತ್ಯಾತೀತ ವಿರೋಧಿಗಳು: ಮೋದಿ

ಫಾರೂಕ್ ಕುಟುಂಬದವರು ಜಾತ್ಯಾತೀತ ವಿರೋಧಿಗಳು: ಮೋದಿ
Published On :

ಅಹಮದಾಬಾದ್: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಗೆ ಮತ ಹಾಕುವವರು ಸಮುದ್ರಕ್ಕೆ ಬೀಳಬೇಕು ಎಂದು ಹೇಳಿದ್ದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥ ಹಾಗೂ ಕೇಂದ್ರ ಸಚಿವ ಫಾರುಕ್ ಅಬ್ದುಲ್ಲಾಗೆ ತಿರುಗೇಟು ನೀಡಿರುವ ಮೋದಿ ಫಾರೂಕ್ ಕುಟುಂಬದವರು ಜಾತ್ಯಾತೀತ ವಿರೋಧಿಗಳು ಎಂದು ಟೀಕಿಸಿದ್ದಾರೆ.

ಇಂದು ಫಾರೂಕ್ ಹೇಳಿಕೆ ವಿರುದ್ಧ ಹರಿಹಾಯ್ದಿರುವ ಮೋದಿ, ನನ್ನನ್ನು ಟೀಕಿಸುವ ಮೊದಲು ಫಾರೂಕ್ ತಮ್ಮನ್ನು ಹಾಗೂ ತಮ್ಮ ಕುಟುಂಬವನ್ನು ನೋಡಿಕೊಳ್ಳಲಿ. ಅಪ್ಪ ಮಗನ ಅಧಿಕಾರವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವೃದ್ಧಿ ಎಂಬುದುವುದು ಮರಿಚಿಕೆಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಟ್ವೀಟ್‌ನಲ್ಲಿ ಜಾತ್ಯಾತೀತತೆ ಕುರಿತಾಗಿ ಮಾತನಾಡುವ ಫಾರೂಕ್ ಕುಟುಂಬದವರು ಜಾತ್ಯಾತೀತ ವಿರೋಧಿಗಳು. ಇವರ ಕುಟುಂಬದಿಂದ ಜಾತ್ಯಾತೀತತೆಗೆ ಧಕ್ಕೆಯಾಗಿದೆ ಪಾಕಿಸ್ತಾನದ ಪಾಲಿಗೆ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದವರು ಪಾಪಿಗಳಾಗಿ ಪರಿಣಮಿಸಿದ್ದಾರೆ. ಅಲ್ಲದೆ ದೇಶದಲ್ಲಿ ಜಾತ್ಯಾತೀತತೆಗೆ ಧಕ್ಕೆಯಾಗುವಂತಾ ಯಾವುದೇ ಕೆಲಸಗಳನ್ನು ಬಿಜೆಪಿ ಇಲ್ಲಿಯವರೆಗೆ ಮಾಡಿಲ್ಲ. ಜಾತ್ಯಾತೀತತೆ ಎನ್ನುವುದು ನಮ್ಮ ರಕ್ತದಲ್ಲಿದೆ. ಎಲ್ಲಾ ಸಮುದಾಯದವರನ್ನು ಸಮಾನರಾಗಿ ಕಾಣುತ್ತೇವೆ ಮತ್ತು ಅವರ ಅಭಿವೃದ್ಧಿಗಾಗಿ ನಿರಂತರವಾಗಿ ದುಡಿಯುತ್ತಿದ್ದೇವೆ ಎಂದರು.

ನಿನ್ನೆ  ಜಮ್ಮು ಮತ್ತು ಕಾಶ್ಮೀರದಲ್ಲಿ ಪಕ್ಷದ ಚುನಾವಣಾ ಸಭೆಯಲ್ಲಿ ಮಾತನಾಡಿದ್ದ ಕೇಂದ್ರ ಸಚಿವ ಫಾರೂಕ್ ಅಬ್ದುಲ್ಲಾ ಹಾಗೂ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಮೋದಿಗೆ ಮತ ಹಾಕುವವರು ಸಮುದ್ರಕ್ಕೆ ಬೀಳಬೇಕು. ಅಲ್ಲದೆ ಭಾರತ ಕೋಮುವಾದಿಗಳ ಕೈವಶವಾದರೆ  ಜಮ್ಮು ಮತ್ತು ಕಾಶ್ಮೀರ ಭಾರತದಲ್ಲಿ ಉಳಿಯಲು ಸಾಧ್ಯವಿಲ್ಲ ಎಂದು ಹೇಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.