ಕ್ಯೂನಲ್ಲಿ ಬರುವಂತೆ ನಟ ಚಿರುಗೆ ಯುವಕನ ಉಪದೇಶ

ಹೈದರಾಬಾದ್: ಮತದಾನದ ವೇಳೆ ಸರತಿ ಸಾಲಿನಲ್ಲಿ ಬರದೇ ಏಕಾಏಕಿ ಮತಕಟ್ಟೆಗೆ ಹೋಗಲು ಯತ್ನಿಸಿದ ನಟ ಹಾಗು ಕೇಂದ್ರ ಸಚಿವ ಚಿರಂಜೀವಿ ಅವರನ್ನು ಸರತಿ ಸಾಲಿನಲ್ಲಿ ಬರುವಂತೆ ಯುವಕನೋರ್ವ ಉಪದೇಶ ಮಾಡಿರುವ ಘಟನೆ ನಡೆದಿದೆ.
ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾಗಿರುವ ಕೇಂದ್ರ ಸಚಿವ ಕೆ. ಚಿರಂಜೀವಿ ಪತ್ನಿ, ಪುತ್ರ ರಾಮ್ ಚರಣ್ ತೇಜಾ ಹಾಗೂ ಮಗಳೊಂದಿಗೆ ಹೈದರಾಬಾದ್ನ ಖೈರತಬಾದ್ ವಿಧಾನಸಭೆಗೆ ಮತದಾನದ ಮಾಡಲು ಬಂದಿದ್ದರು. ಈ ವೇಳೆಗಾಗಲೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಬಂದಿದ್ದು ಸರತಿ ಸಾಲು ಉದ್ದವಾಗಿತ್ತು. ಇದನ್ನು ಕಡೆಗಣಿಸಿ ಏಕಾಏಕಿ ಮತಗಟ್ಟೆಯೊಳಗೆ ಹೋಗಲು ಮುಂದಾದ ವೇಳೆ ಯುವಕ ರಾಜು ಕಾರ್ತಿಕ್ ತಡೆದು ಸಾಲಿನಲ್ಲಿ ಬರುವಂತೆ ಹೇಳಿದ್ದಾರೆ.
ಸರತಿ ಸಾಲಿನಲ್ಲಿ ನಿಂತಿದ್ದ ರಾಜು ಕಾರ್ತಿಕ್ ,'ನಾವೆಲ್ಲ ಇಲ್ಲಿ ಒಂದೂವರೆ ಗಂಟೆಯಿಂದ ಕ್ಯೂನಲ್ಲಿ ನಿಂತಿರುವಾಗ ನೀವು ಹೀಗೆ ಮಾಡುವುದು ಸರಿಯಲ್ಲ' ಎಂದು ಚಿರಂಜೀವಿಯನ್ನು ತರಾಟೆಗೆ ತೆಗೆದುಕೊಂಡ. ಮತದಾನದ ದಿನ ಕೂಡ ನೀವು ಹೀಗೆ ವಿಶೇಷ ಉಪಚಾರವನ್ನು ಬಯಸುವಿರಾ ಎಂದು ಪ್ರಶ್ನಿಸಿದ. ಇದೇ ವೇಳೆ ಸರತಿ ಸಾಲಿನಲ್ಲಿ ನಿಂತಿದ್ದ ಹಿರಿಯ ವಯಸ್ಕರೊಬ್ಬರು ಜೋರಾಗಿ ನೀವು ಹೀಗೆ ಮಾಡುವುದು ನಿಜಕ್ಕೂ ಅನ್ಯಾಯ ಎಂದರು. ಈ ಅನಿರೀಕ್ಷಿತ ಘಟನೆಯಿಂದ ತೀವ್ರ ಮುಜುಗರಕ್ಕೆ ಒಳಗಾದ ಚಿರಜೀವಿ ನಂತರ ಕುಟುಂಬ ಸಮೇತರಾಗಿ ಸರತಿ ಸಾಲಿನ ಕೊನೆಯಲ್ಲಿ ನಿಂತು ಮತದಾನ ಮಾಡಿದರು.
ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಚಿರಜೀವಿ, ನಾನು ಕ್ಯೂ ಜಂಪ್ ಮಾಡಿ ಕಾನೂನು ಮುರಿಯುವ ವ್ಯಕ್ತಿಯಲ್ಲ. ನನ್ನ ಹೆಸರು ಮತದಾನ ಪಟ್ಟಿಯಲ್ಲಿ ಇದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ನೇರವಾಗಿ ಒಳಗೆ ಹೋಗಲು ಮುಂದಾಗಿದ್ದೆ. ನಾನು ಪ್ರಜಾಸತ್ತೆಯನ್ನು ಗೌರವಿಸುವ ವ್ಯಕ್ತಿ ಎಂದು ಹೇಳಿದ್ದಾರೆ.
ಚಿರಂಜೀವಿ ಅವರು ನಿಜವಾದ ನಾಯಕ ಎಂದು ಶ್ಲಾಘಿಸಿದ ರಾಜು ಕಾತೀಕ್, ನಾನು ಅವರನ್ನು ಗೌರವಿಸುತ್ತೇನೆ. ಆದರೆ ಅವರು ಸಾಲನ್ನು ಪಾಲಿಸಬೇಕು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


