ಟೀವಿ ನಿರೂಪಕಿ ಅಮೃತಾ ಕೈ ಹಿಡಿಯಲಿದ್ದಾರೆ ದಿಗ್ವಿಜಯ್ ಸಿಂಗ್

ನವದೆಹಲಿ: ಕಾಂಗ್ರೆಸ್ ಹಿರಿಯ ನೇತಾರ ದಿಗ್ವಿಜಯ್ ಸಿಂಗ್ ಮತ್ತೆ ಮದುವೆಯಾಗಲು ಹೊರಟಿದ್ದಾರೆ. ಕಳೆದ ವರ್ಷ ತನ್ನ ಪತ್ನಿಯನ್ನು ಕಳೆದುಕೊಂಡಿದ್ದ 67ರ ಹರೆಯದ ದಿಗ್ವಿಜಯ್ ಸಿಂಗ್ ಮದುವೆಯಾಗುತ್ತಿರುವುದು ಯಾರನ್ನು ಗೊತ್ತೆ? ಖಾಸಗಿ ವಾಹಿನಿಯೊಂದರ ನಿರೂಪಕಿ ಅಮೃತಾ ರೈ ಅವರನ್ನು!
ಅಮೃತಾ ಜತೆಗೆ ದಿಗ್ವಿಜಯ್ ಸಂಬಂಧ ಹೊಂದಿದ್ದಾರೆ ಎಂಬುದಕ್ಕೆ ಪುರಾವೆ ಎಂಬಂತೆ ಕಳೆದ ಕೆಲವು ದಿನಗಳ ಹಿಂದೆ ಇವರಿಬ್ಬರ ಫೋಟೋಗಳು ಇಂಟರ್ನೆಟ್ನಲ್ಲಿ ಹರಿದಾಡಿದ್ದವು.
ಬುಧವಾರ ಅಮೃತಾ ಜತೆಗಿನ ಸಂಬಂಧವನ್ನು ಒಪ್ಪಿಕೊಂಡ ದಿಗ್ವಿಜಯ್ ಸಿಂಗ್ " ನಾನು ಮತ್ತು ಅಮೃತಾ ನಡುವಿನ ಸಂಬಂಧವನ್ನು ಒಪ್ಪಿಕೊಳ್ಳಲು ನಾನು ಹಿಂಜರಿಯುವುದಿಲ್ಲ. ಆಕೆ ಮತ್ತು ಆಕೆಯ ಪತಿ ಈಗಾಗಲೇ ವಿಚ್ಛೇದನಕ್ಕೆ ತೀರ್ಮಾನಿಸಿದ್ದಾರೆ. ನನ್ನ ಬಗ್ಗೆ ಇರುವ ಸತ್ಯವನ್ನು ನಾನು ಒಪ್ಪಿಕೊಂಡಿದ್ದೇನೆ. ಆದರೆ ನನ್ನ ಖಾಸಗಿ ಜೀವನದ ಬಗ್ಗೆ ಹೆಚ್ಚಿಗೆ ಮಾತನಾಡುವುದನ್ನು ನಾನು ಖಂಡಿಸುತ್ತೇನೆ "ಎಂದು ಟ್ವೀಟ್ ಮಾಡಿದ್ದಾರೆ.
ಅದೇ ವೇಳೆ ಅಮೃತಾ ರೈ, ತಾನು ಮತ್ತು ತನ್ನ ಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ವಿಚ್ಛೇದನ ಸಿಕ್ಕಿದ ಕೂಡಲೇ ನಾನು ದಿಗ್ವಿಜಯ್ ಸಿಂಗ್ ಅವರನ್ನು ಮದುವೆಯಾಗಲಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ವಿರೋಧಿಗಳ ವಿರುದ್ಧ ರಾಜಕೀಯ ವಾಗ್ದಾಳಿ ಮಾಡುವಲ್ಲಿ ಖ್ಯಾತರಾಗಿರುವ ದಿಗ್ವಿಜಯ್ ಸಿಂಗ್, ಮೋದಿ ವಿವಾಹವಾಗಿರುವ ಸುದ್ದಿ ಸತ್ಯವೆಂದು ತಿಳಿದಾಗ, ಹೆಣ್ಣೊಬ್ಬಳಿಗೆ ದ್ರೋಹವೆಸಗಿದ ವ್ಯಕ್ತಿಯನ್ನು ದೇಶ ನಂಬಲು ಸಾಧ್ಯವೆ? ಮೋದಿಗೆ ಮತ ನೀಡಬೇಡಿ ಎಂದು ಬೊಬ್ಬಿರಿದಿದ್ದರು.
ಇದೀಗ ಅಮೃತಾ ಮತ್ತು ದಿಗ್ವಿಜಯ್ ಸಿಂಗ್ ನಡುವಿನ ಸಂಬಂಧ ಅಧಿಕೃತವಾಗಿದ್ದು, ದಿಗ್ವಿಜಯ್ ಸಿಂಗ್ನ ಮದುವೆ ಯಾವಾಗ ನಡೆಯಲಿದೆ ಎಂಬುದು ಸದ್ಯ ಕುತೂಹಲದ ಸುದ್ದಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


