ಈಗಿನ ಸುದ್ದಿ

4ನೇ ಟೆಸ್ಟ್: ಭಾರತದ ಮೇಲೆ ಆಂಗ್ಲರ ಪ್ರಾಬಲ್ಯ

4ನೇ ಟೆಸ್ಟ್: ಭಾರತದ ಮೇಲೆ ಆಂಗ್ಲರ ಪ್ರಾಬಲ್ಯ
Published On :

ಮ್ಯಾಂಚೆಸ್ಟರ್: ಆಂಗ್ಲರ ವಿರುದ್ಧದ 4ನೇ ಟೆಸ್ಟ್ ಕ್ರಿಕೆಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಭಾರತ ಭೋಜನ ವೇಳೆ ಕೇವಲ 63 ರನ್ ಗಳಿಗೆ ತನ್ನ ಪ್ರಮುಖ 5 ವಿಕೆಟ್ ಕಳೆದುಕೊಂಡಿದೆ.

ಟಾಸ್ ಗೆದ್ದು ಇನಿಂಗ್ಸ್ ಪ್ರಾರಂಭಿಸಿದ ಭಾರತದ ಬ್ಯಾಟ್ಸ್ ಮನ್ ಗಳು ಆಂಗ್ಲರ ಮಾರಕ ಬೌಲಿಂಗ್ ದಾಳಿಗೆ ಪೆವಿಲಿಯನ್ ಪೇರೆಡ್ ನಡೆಸಿದರು. ಐದು ಓವರ್ಗಳಲ್ಲಿ ಭಾರತ ಕೇವಲ 8 ರನ್ಗೆ 3 ವಿಕೆಟ್ ಕಳೆದುಕೊಂಡಿತು.

ಆರಂಭಿಕ ಆಟಗಾರರಾದ ಗೌಮತ್ ಗಂಭೀರ್ ಕೇವಲ 4 ರನ್ ಗಳಿಸಿ ಬ್ರಾಡ್ ಬೌಲಿಂಗ್ಗೆ ರೂಟ್ಗೆ ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರಿದರು. ಬಳಿಕ ಮುರಳಿ ವಿಜಯ್, ವಿರಾಟ್ ಕೊಹ್ಲಿ ಹಾಗೂ ಪೂಜಾರಾ ಶೂನ್ಯ ಸುತ್ತಿ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದರು.

ಆನಂತರ ಬಂದ ರಹಾನೆ ಉತ್ತಮ ಮೊತ್ತ ಕಲೆ ಹಾಕುವ ಭರವಸೆ ಮೂಡಿಸಿದರು. ಆದರೆ ಜೋರ್ಡನ್ ಎಸೆತಕ್ಕೆ ಬೆಲ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಭೋಜನ ವೇಳೆಗೆ ಭಾರತ 63 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡಿತು.

ವಿರಾಮ ನಂತರ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ರವೀಂದ್ರ ಜಡೇಜಾ ಬ್ಯಾಟಿಂಗ್ ಆರಂಭಿಸಿದರು. ಆದರೆ ಕೇವಲ 7 ಎಸೆತಗಳನ್ನು ಎದುರಿಸಿದ ಜಡೇಜಾ ಅವರು ಶೂನ್ಯ ಸುತ್ತಿ ಪೆವಿಲಿಯನ್ ದಾರಿ ಹಿಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.