ಆಪರೇಷನ್ ಬ್ಲೂಸ್ಟಾರ್‌ನಲ್ಲಿ ಬ್ರಿಟನ್ ಪಾತ್ರವಿಲ್ಲ: ಡೇವಿಡ್ ಕ್ಯಾಮೆರೂನ್
ಲಂಡನ್: 1984ರಲ್ಲಿ ಸ್ವರ್ಣ ಮಂದಿರದಲ್ಲಿ ನಡೆದ ಬ್ಲೂಸ್ಟಾರ್ ಆಪರೇಷನ್‌ನಲ್ಲಿ ಮಾರ್ಗರೆಟ್ ಥಾಚರ್ ಸರ್ಕಾರದ ಕೈವಾಡವೇನೂ ಇಲ್ಲ ಎಂದು ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮೆರೂನ್ ಹೇಳಿದ್ದಾರೆ.
ಪ್ರಸ್ತುತ ಕೃತ್ಯದಲ್ಲಿ ಬ್ರಿಟಿಷ್ ಸರ್ಕಾರ ಭಾಗಿಯಾಗಿಲ್ಲ. ಈ ಬಗ್ಗೆ ಸುಮಾರು 200 ಕಡತ ಮತ್ತು 23,000ಕ್ಕಿಂತಲೂ ಹೆಚ್ಚು ದಾಖಲೆಗಳನ್ನು ಪರಿಶೀಲಿಸಿದ ನಂತರ ಈ ವಿಷಯವನ್ನು ಹೇಳುತ್ತಿದ್ದೇನೆ ಎಂದು ಬ್ಲೂಸ್ಟಾರ್ ಆಪರೇಷನ್ ತನಿಖೆಯ ಬಗ್ಗೆ ಬ್ರಿಟನ್‌ನ ಸಿಖ್ ಸಮುದಾಯಕ್ಕೆ ಕಳುಹಿಸಿದ ವೀಡಿಯೋ ಸಂದೇಶದಲ್ಲಿ ಕ್ಯಾಮೆರೂನ್ ಸ್ಪಷ್ಟಪಡಿಸಿದ್ದಾರೆ.
30 ವರ್ಷಗಳ ಹಿಂದೆ ಅಮೃತಸರದ ಶ್ರೀ ಹರ್‌ಮಂದಿರ್ ಸಾಹಿಬ್ ಕ್ಷೇತ್ರದಲ್ಲಿ ನಡೆದ ಕಗ್ಗೊಲೆಯ ನೋವು ಇನ್ನೂ ಸಿಖ್‌ರ ಮನಸ್ಸಲ್ಲಿ ಇದೆ.
ಆದ್ದರಿಂದಲೇ ನಾವು ಬ್ಲೂಸ್ಟಾರ್ ಆಪರೇಷನ್ ಬಗ್ಗೆ ವಿಸ್ತೃತ ತನಿಖೆ ನಡೆಸಿ ಆ ಪ್ರಶ್ನೆಗಳಿಗೆ ಉತ್ತರ ನೀಡಲು ನಾವು ತುರ್ತು ನಿರ್ಧಾರ ಕೈಗೊಂಡಿದ್ದೆವು. ಈ ಬಗ್ಗೆ ಸತ್ಯಾಂಶ ಹೊರತರುವಂತೆ ನಾನು ಕ್ಯಾಬಿನೆಟ್ ಕಾರ್ಯದರ್ಶಿಯವರಿಗೆ ಆದೇಶಿಸಿದ್ದೆ ಎಂದು ಕ್ಯಾಮೆರೂನ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

