ನಾಳೆ ಆಟೋ 'ಮಹಾಸಭಾ'ದಲ್ಲಿ ಕೇಜ್ರಿವಾಲ್ ಭಾಷಣ
ನವದೆಹಲಿ: ದೆಹಲಿ ಚುನಾವಣೆಯಲ್ಲಿ ಮಹತ್ತರ ಪಾತ್ರವಹಿಸಿದ ಆಟೋ ಚಾಲಕರನ್ನು ಉದ್ದೇಶಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶುಕ್ರವಾರ ಭಾಷಣ ಮಾಡಲಿದ್ದಾರೆ.
ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಬೆಂಬವಾಗಿ ಆಟೋ ಚಾಲಕರು ನಿಂತಿದ್ದಾರೆ. ನಾಳೆ ಬುರಾರಿಯಲ್ಲಿ ಆಟೋಚಾಲಕರ ಮಹಾಸಭೆಯನ್ನುದ್ದೇಶಿಸಿದ ಕೇಜ್ರಿವಾಲ್ ಭಾಷಣಗೈಯ್ಯಲಿದ್ದಾರೆ ಎಂದು ಆಪ್ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದೆ.
ಚುನಾವಣೆಯ ವೇಳೆ ತಮ್ಮ ವಾಹನದಲ್ಲಿ ಆಪ್ ಪಕ್ಷದ ಪೋಸ್ಟರ್ ಹೊತ್ತು ಪ್ರಚಾರ ಮಾಡುವ ಮೂಲಕ ಆಟೋ ಚಾಲಕರು ಆಪ್ಗೆ ಸಹಾಯ ಮಾಡಿದ್ದಾರೆ. ಪ್ರಸ್ತುತ ಸಭೆಯಲ್ಲಿ ಕೇಜ್ರಿವಾಲ್ ಆಟೋ ಚಾಲಕರ ಸಮಸ್ಯೆಗಳನ್ನು ಆಲಿಸಲಿದ್ದಾರೆ.
ಮಹಾಸಭೆಯಲ್ಲಿ ಆಟೋ ಚಾಲಕರ ಸಮಸ್ಯೆಯನ್ನು ಮುಖ್ಯಮಂತ್ರಿ ಆಲಿಸಲಿದ್ದು, ಅವರಿಗೆ ಸರ್ಕಾರದಿಂದ ಯಾವ ರೀತಿಯ ಸಹಾಯ ಮಾಡಲಾಗುತ್ತದೋ ಅದನ್ನು ಮಾಡಿಕೊಡಲಾಗುವುದು ಎಂದು ಆಪ್ ತಮ್ಮ ಫೇಸ್ಬುಕ್ ಪೋಸ್ಟ್ನಲ್ಲಿ ಉಲ್ಲೇಖಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

