ಮೋಹನ್ ಭಾಗ್ವತ್ ಅವರ ಮೇಲಿನ ಆರೋಪ ಸತ್ಯವಾಗಿರಬಹುದು: ಶಿಂಧೆ
ನವದೆಹಲಿ: 2007ರ ಸಂಜೋತಾ ಎಕ್ಸ್ಪ್ರೆಸ್, ಹೈದ್ರಾಬಾದ್ ಮೆಕ್ಕಾ ಮಸೀದಿ ಮತ್ತು ಅಜ್ಮೀರ್ ದರ್ಗಾ ಮೇಲಿನ ದಾಳಿಯಲ್ಲಿ ಆರೆಸ್ಸೆಸ್ಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರ ಕೈವಾಡವಿದೆ ಎಂಬ ಆರೋಪ ಸತ್ಯವಾಗಿರಬಹುದು ಎಂದು ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಹೇಳಿದ್ದಾರೆ.
ಪ್ರಸ್ತುತ ದಾಳಿಯಲ್ಲಿ ಭಾಗ್ವತ್ರ ಕೈವಾಡವಿದೆ ಎಂದು ದಾಳಿ ಪ್ರಕರಣದ ಆರೋಪಿ ಆಸೀಮಾನಂದ ಆರೋಪಿಸಿದ್ದರು.
ಮ್ಯಾಗಜಿನ್ವೊಂದಕ್ಕೆ ಆಸೀಮಾನಂದ ಅವರು ನೀಡಿದ ಸಂದರ್ಶನದಲ್ಲಿ ಆರೆಸ್ಸೆಸ್ಸ್ ಮುಖ್ಯಸ್ಥ ಈ ಉಗ್ರ ದಾಳಿಗಳಿಗೆ ಪ್ರೇರಣೆ ನೀಡಿದ್ದರು ಎಂದು ಹೇಳಿದ್ದರು.
ಪ್ರಸ್ತುತ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಆರೆಸ್ಸೆಸ್ಸ್, ಈ ಆರೋಪ ಸತ್ಯಕ್ಕೆ ದೂರವಾಗಿರುವುದು. ಮ್ಯಾಗಜೀನ್ನಲ್ಲಿ ನೀಡಿರುವ ಸಂದರ್ಶನ ಆಧಾರ ರಹಿತ ಮತ್ತು ಬೊಗಳೆ ಎಂದು ಹೇಳಿದೆ.
ಏತನ್ಮಧ್ಯೆ, ಭಾಗ್ವತ್ ಮೇಲಿನ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಶಿಂಧೆ ಆಸೀಮಾಮನಂದ ಅಂಥದೊಂದು ಆರೋಪ ಮಾಡಿದ್ದಾರೆ ಎಂದರೆ ಅದು ನಿಜವಾಗಿರಲೂ ಬಹುದು ಎಂದಿದ್ದಾರೆ.
ಅದೇ ವೇಳೆ ಆಸೀಮಾನಂದರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು ವಿದೇಶಾಂಗ ಖಾತೆ ಸಚಿವ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.
ಇದು ಗಂಭೀರವಾದ ಮಾಹಿತಿ. ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಸತ್ಯವನ್ನು ಅರಿಯಬೇಕಾಗಿದೆ ಎಂದು ಖುರ್ಷಿದ್ ಹೇಳಿದ್ದಾರೆ.
ಈ ಆರೋಪನ್ನು ಬಿಜೆಪಿ ತಳ್ಳಿಹಾಕಿದರೂ ಗೃಹ ಸಚಿವಾಲಯವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಿದೆ ಎಂದು ಕಾಂಗ್ರೆಸ್ ನೇತಾರ ರಾಜೀವ್ ಶುಕ್ಲಾ ಹೇಳಿದ್ದಾರೆ.
ಇದು ಅಚ್ಚರಿಯ ವಿಷಯವೇನಲ್ಲ. ಯಾಕೆಂದರೆ ಇದು ಆರೆಸ್ಸೆಸ್ಸ್ ಕೆಲಸ. ಸರ್ಕಾರ ಈ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಬೇಕು ಎಂದು ಜೆಡಿಯು ನಾಯಕ ಶಿವಾನಂದ ತಿವಾರಿ ಹೇಳಿದ್ದಾರೆ.
ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಹೇಳಿದರೆ, ಸಂಘ ಪರಿವಾರದವರಿಗೆ ನಾಚಿಕೆ ಆಗಬೇಕೆಂದು ಕಾಂಗ್ರೆಸ್ ನೇತಾರ ಬೆನಿ ಪ್ರಸಾದ್ ಹೇಳಿದ್ದಾರೆ.
ವೋಟಿಗಾಗಿ ಅವರು ದೇಶವನ್ನು ನಾಶ ಮಾಡಲು ಹೊರಟಿದ್ದಾರೆ. ಹಿಂದೂ -ಮುಸ್ಲಿಂ ನಡುವೆ ತಿಕ್ಕಾಟ ಮಾಡಲು ಇವರು ಏನು ಬೇಕಾದರೂ ಮಾಡುತ್ತಾರೆ ಎಂದು ಬೆನಿ ಪ್ರಸಾದ್ ಕಿಡಿ ಕಾರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

