ಉಗ್ರ ದಾಳಿಯಲ್ಲಿ ಭಾಗ್ವತ್ ಭಾಗಿಯಾಗಿಲ್ಲ: ಅಸೀಮಾನಂದ
ನವದೆಹಲಿ: ದೇಶದಲ್ಲಿ ನಡೆದ ಹಲವಾರು ಉಗ್ರದಾಳಿಯಲ್ಲಿ ಆರೆಸ್ಸೆಸ್ಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರು ಭಾಗಿಯಾಗಿದ್ದಾರೆ ಎಂದು ಹೇಳಿ ವಿವಾದವೆಬ್ಬಿಸಿದ ಸ್ವಾಮಿ ಅಸೀಮಾನಂದ ಹೇಳಿಕೆ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ.
ನಾನು ನಿಯತಕಾಲಿಕಕ್ಕೆ ಸಂದರ್ಶನ ನೀಡಲೇ ಇಲ್ಲ. ಮಾತ್ರವಲ್ಲದೆ ನಾನು ಎಲ್ಲಿಯೂ ಉಗ್ರ ದಾಳಿಯಲ್ಲಿ ಆರೆಸ್ಸೆಸ್ಸ್ ಅಥವಾ ಆರೆಸ್ಸೆಸ್ಸ್ ಮುಖ್ಯಸ್ಥರ ಕೈವಾಡವಿದೆ ಎಂದು ಹೇಳಿಲ್ಲ ಎಂದು ಉಲ್ಲೇಖಿಸಿ ಅಸೀಮಾನಂದ ಕೈಬರದಲ್ಲೇ ಬರೆದ ಪತ್ರವೊಂದನ್ನು ವಿವಿಧ ಸುದ್ದಿಪತ್ರಿಕೆಗಳಿಗೆ ರವಾಸಿನಿಸಿದ್ದಾರೆ.
ನಿಯತಕಾಲಿಕದಲ್ಲಿ ಪ್ರಕಟವಾದ ಸಂದರ್ಶನ ಸತ್ಯಕ್ಕೆ ದೂರವಾದುದು ಎಂದು ಹೇಳಿದ ಅಸೀಮಾನಂದ, ಪ್ರಸ್ತುತ ನಿಯತಕಾಲಿಕೆ ವಿರುದ್ಧ ಕಾನೂನು ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ.
ಆದರೆ ಸಂದರ್ಶನ ನಡೆಸಿದ ನಿಯತಕಾಲಿಕ ತನ್ನ ವರದಿ ಸರಿ ಎಂದು ವಾದಿಸಿದೆ,
2014 ಜನವರಿ 2014ರಂದು ನನ್ನನ್ನು ಸಂದರ್ಶಿಸಲು ಬಂದ ವರದಿಗಾರ್ತಿ ತಾನು ವಕೀಲೆ ಎಂದು ನನ್ನಲ್ಲಿ ಸುಳ್ಳು ಹೇಳಿದ್ದರು. ನಾನು ಆಕೆಯನ್ನು ಹಲವಾರು ಬಾರಿ ಪಂಚ್ಕುಲಾ ನ್ಯಾಯಾಲಯದಲ್ಲಿ ನೋಡಿರುವುದರಿಂದ ಆಕೆ ವರದಿಗಾರ್ತಿ ಎಂದು ನನಗೆ ಗೊತ್ತಿತ್ತು. ಆದ್ದರಿಂದಲೇ ಆಕೆಗೆ ಸಂದರ್ಶನ ನೀಡುವುದಿಲ್ಲ ಎಂದು ನಿರಾಕರಿಸಿದೆ ಎಂದು ಅಸೀಮಾನಂದ ತಮ್ಮ ಪತ್ರದಲ್ಲಿ ಹೇಳಿದ್ದಾರೆ.
2007ರಲ್ಲಿ ಸಂಜೋತಾ ಎಕ್ಸ್ಪ್ರೆಸ್, ಹೈದ್ರಾಬಾದ್ ಮೆಕ್ಕಾ ಮಸೀದಿ ಮತ್ತು ಅಜ್ಮೀರ್ ದರ್ಗಾದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದ ಆರೋಪಿಯಾಗಿದ್ದಾರೆ ಈ ಅಸೀಮಾನಂದ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

