ಜಮ್ಮು ಕಾಶ್ಮೀರದ ಸಚಿವರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ; ಬಂಧನ ಸಾಧ್ಯತೆ
ಶ್ರೀನಗರ: ಜಮ್ಮು ಕಾಶ್ಮೀರದ ಆರೋಗ್ಯ ಸಚಿವ ಶಬೀರ್ ಖಾನ್ ಅವರ ವಿರುದ್ಧ ವೈದ್ಯೆಯೊಬ್ಬರು ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿದ್ದು, ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ.
ಕಾಂಗ್ರೆಸ್ ಶಾಸಕರಾಗಿರುವ ಖಾನ್ ಆವರು ರಜೌರಿ ಕ್ಷೇತ್ರವನ್ನು ಪ್ರತಿನಿಧೀಕರಿಸಿದ್ದರು.
ತಾನು ಕಾರ್ಯ ನಿರ್ವಹಿಸುತ್ತಿರುವ ಆಸ್ಪತ್ರೆಗೆ ಕೇಂದ್ರ ಸಚಿವ ಗುಲಾಂ ನಬೀ ಆಜಾದ್ ಅವರು ಭೇಟಿಯಿತ್ತಾಗ ಅವರು ಮಾಡಿದ ಘೋಷಣೆಗಳ ಬಗ್ಗೆ ಹೇಳಬೇಕೆಂದು ಖಾನ್ ಅವರ ಕಚೇರಿಯಿಂದ ನನಗೆ ಒತ್ತಾಯದ ಫೋನ್ ಕರೆಗಳು ಬರುತ್ತಿದ್ದವು. ಮಾತ್ರವಲ್ಲದೆ ಜನವರಿ 28ರಂದು ತಾನು ಖಾನ್ ಅವರ ಕಚೇರಿಗೆ ಬರಬೇಕೆಂದು ನನಗೆ ಒತ್ತಾಯಿಸಲಾಗಿತ್ತು.
ಹಾಗಂತ ನಾನು ವಿಧಾನಸೌಧದಲ್ಲಿರುವ ಖಾನ್ ಅವರ ಕಚೇರಿಗೆ ಹೋದಾಗ, ಅಲ್ಲಿ ಆಗಲೇ 10-15 ಮಂದಿ ಉಪಸ್ಥಿತರಿದ್ದರು. ನನ್ನನ್ನು ಪುಟ್ಟ ಕ್ಯಾಬಿನ್ನಲ್ಲಿ ಕುಳಿತುಕೊಳ್ಳಲು ನಿರ್ದೇಶಿಸಲಾಯಿತು. ನಾನು ಅಲ್ಲಿಂದ ಹೋಗಲು ಮುಂದಾದಾಗ ಸಚಿವರು ಕ್ಯಾಬಿನ್ ಒಳಗಡೆ ಕೂರುವಂತೆ ನನಗೆ ಹೇಳಿದರು.
ಆಮೇಲೆ ಸಚಿವರು ನನ್ನನ್ನು ಭೇಟಿ ಮಾಡಲೆಂದು ಕ್ಯಾಬಿನ್ಗೆ ಬಂದಾಗ ಅವರೊಬ್ಬ 'ಕಾಮುಕ'ನಂತೆ ಮುಗಿಬಿದ್ದರು. ದೈಹಿಕವಾಗಿಯೂ, ವಾಚ್ಯವಾಗಿಯೂ ಅವರು ನನ್ನ ಮೇಲೆ ದೌರ್ಜನ್ಯವೆಸಗಲು ಯತ್ನಿಸಿದರು. ನನ್ನ ನಿರಾಕರಣೆಯ ನಡುವೆಯೂ ಅವರು ನನ್ನನ್ನು ಪುಸಲಾಯಿಸಲು ಯತ್ನಿಸಿದರು. ನಮ್ಮಿಬ್ಬರ ಭೇಟಿ 10-15 ನಿಮಿಷಗಳ ಕಾಲ ನಡೆಯಿತು ಎಂದು ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಖಾನ್ ವಿರುದ್ಧ ಆರೋಪಿಸಿರುವ ವೈದ್ಯೆ ತಮ್ಮ ದೂರಲ್ಲಿ ಹೇಳಿದ್ದಾರೆ.
ವೈದ್ಯೆಯ ಆರೋಪದ ಪ್ರಕಾರ ಸಚಿವ ಖಾನ್ರ ವಿರುದ್ಧ ಜಾಮೀನು ರಹಿತ ಕೇಸು ದಾಖಲಿಸಲಾಗಿದೆ. ರಣ್ಬೀರ್ ಪೀನಲ್ ಕೋಡ್ ಅಥವಾ ಆರ್ಪಿಸಿ ಸೆಕ್ಷನ್ 354 ಮತ್ತು 509ರಡಿಯಲ್ಲಿ ಖಾನ್ ವಿರುದ್ಧ ಕೇಸು ದಾಖಲಿಸಿದ್ದು, ಬಂಧನ ಸಾಧ್ಯತೆಯಿದೆ ಎಂದು ಕಾಶ್ಮೀರದ ಪೊಲೀಸರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

