ಸಂದರ್ಶನದಲ್ಲಿ ಭಾಗ್ವತ್ ಹೆಸರು ಉಲ್ಲೇಖಿಸಿಲ್ಲ
ನವದೆಹಲಿ: ಹಿಂದೂ ಉಗ್ರ ದಾಳಿಯಲ್ಲಿ ಆರೆಸ್ಸೆಸ್ಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರ ಹೆಸರು ಕೇಳಿ ಬಂದು ವಿವಾದ ಸೃಷ್ಟಿಯಾಗಿರುವ ಬಗ್ಗೆ ಅಸೀಮಾನಂದ ಅವರ ಸಂದರ್ಶನವನ್ನು ಪ್ರಕಟಿಸಿರುವ ಪತ್ರಿಕೆ ಇದೀಗ ಪ್ರತಿಕ್ರಿಯೆ ನೀಡಿದೆ.
ತಮ್ಮ ಪತ್ರಿಕೆಯಲ್ಲಿ ಅಸೀಮಾನಂದ ಅವರ ಸಂದರ್ಶನ ಪ್ರಕಟವಾಗಿದ್ದರೂ, ಆ ಸಂದರ್ಶನದಲ್ಲಿ ಎಲ್ಲಿಯೂ ಮೋಹನ್ ಭಾಗ್ವತ್ ಅವರ ಹೆಸರನ್ನು ಉಲ್ಲೇಖಿಸಿಲ್ಲ ಎಂದು ಪತ್ರಿಕೆ ನ್ಯಾಯಾಲಯದಲ್ಲಿ ಹೇಳಿದೆ.
ಪತ್ರಿಕೆಯ ಪ್ರಕಾರ 2005, ಜುಲೈ ತಿಂಗಳಲ್ಲಿ ಗುಜರಾತ್ನ ದಂಗಾಸ್ ಜಿಲ್ಲೆಯಲ್ಲಿ ನಡೆದ ಸಭೆಯಲ್ಲಿ ಭಾಗ್ವತ್ ಅವರು ದಾಳಿ ಮಾಡುತ್ತಾ ಮುನ್ನುಗ್ಗಿ ಆದರೆ ಅಲ್ಲಿ ಆರೆಸ್ಸೆಸ್ಸ್ ಹೆಸರು ತಳುಕು ಹಾಕದಂತೆ ನೋಡಿಕೊಳ್ಳಿ ಎಂದು ಹೇಳಿದ್ದರು. ಈ ಆದೇಶವನ್ನು ಅವರು ಕೊಟ್ಟಿರುವುದು ಸುನಿಲ್ ಜೋಷಿ ಅವರಿಗೆ. ಹಿಂದೂ ಉಗ್ರವಾದಿಯಾಗಿರುವ ಸುನಿಲ್ ಜೋಷಿಗೆ ಸುಮಾರು 6 ಸ್ಫೋಟಗಳಲ್ಲಿ ಕೈವಾಡವಿದೆ ಎಂಬ ಆರೋಪವಿದೆ.
ಆದಾಗ್ಯೂ, ಅಸೀಮಾನಂದ ಅವರು ತಮ್ಮ ಸಂದರ್ಶನದಲ್ಲಿ ಈ ಸಭೆಯ ಬಗ್ಗೆಯೇ ಮಾತನಾಡಿದ್ದರು. ಆದರೆ ಅವರೆಲ್ಲಿಯೂ ಭಾಗ್ವತ್ ಅವರ ಹೆಸರನ್ನು ಉಲ್ಲೇಖಿಸಿಲ್ಲ. ಇದರ ಬದಲಾಗಿ ಅವರು ಭಾಗ್ವತ್ ಅವರ ಆರೆಸ್ಸೆಸ್ಸ್ ಸಹೋದ್ಯೋಗಿ ಇಂದ್ರೇಶ್ ಕುಮಾರ್ ಅವರ ಹೆಸರನ್ನು ಹೇಳಿದ್ದರು ಎಂದು ಪತ್ರಿಕೆಯು ನ್ಯಾಯಾಲಯದಲ್ಲಿ ಹೇಳಿಕೆ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

