ಈಗಿನ ಸುದ್ದಿ

ಜ್ಞಾನಪೀಠ ಪ್ರಶಸ್ತಿಯೇ ಅರ್ಥಹೀನ: ಸಾಹಿತಿ ಕುಂ.ವೀ

ಜ್ಞಾನಪೀಠ ಪ್ರಶಸ್ತಿಯೇ ಅರ್ಥಹೀನ: ಸಾಹಿತಿ ಕುಂ.ವೀ
Published On :

ಕೊಪ್ಪಳ: ಜ್ಞಾನಪೀಠ ಪ್ರಶಸ್ತಿಯೇ ಅರ್ಥಹೀನ. ಕನ್ನಡದ ಇಬ್ಬರು ಅನರ್ಹರಿಗೆ ಜ್ಞಾನಪೀಠ ಪ್ರಶಸ್ತಿ ನೀಡಿದ್ದಾರೆ ಎಂದು ಕೊಪ್ಪಳದಲ್ಲಿ ಮಾತನಾಡಿದ ಸಾಹಿತಿ ಕುಂ. ವೀರಭದ್ರಪ್ಪ ಹೇಳಿದ್ದಾರೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಯು. ಆರ್. ಅನಂತಮೂರ್ತಿಯವರಿಗೆ ಕತೆ ಕಾದಂಬರಿ ಬಿಟ್ಟರೆ ಬೇರೇನೂ ಬರೆಯಲು ಬರಲ್ಲ. ಅದೇ ವೇಳೆ  ಗಿರೀಶ್  ಕಾರ್ನಾಡರ ಬರವಣಿಗೆಯಲ್ಲಿ ಸಾಹಿತ್ಯದ ಸೊಗಡೇ ಇಲ್ಲ, ಅವರ ನಾಟಕ ಯಾರಿಗೂ ಅರ್ಥವಾಗುವುದೇ ಇಲ್ಲ ಎಂದು ಹೇಳುವ ಮೂಲಕ ಕುಂವೀ ವಿವಾದಕ್ಕೆ ನಾಂದಿ ಹಾಡಿದ್ದಾರೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಮಾತ್ರ ಶ್ರೇಷ್ಠ  ಸಾಹಿತಿಗಳಲ್ಲ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ನಮ್ಮಲ್ಲಿದ್ದಾರೆ. ಜ್ಞಾನಪೀಠ ಪ್ರಶಸ್ತಿಗಿಂತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೇ ಹೆಚ್ಚು ಶ್ರೇಷ್ಠ ಎಂದು ಕುಂವೀ ಪ್ರತಿಪಾದಿಸಿದ್ದಾರೆ .

ಈ ಜ್ಞಾನಪೀಠ ಪ್ರಶಸ್ತಿಯೇ ಅರ್ಥಹೀನ ಎಂಬ ಕುಂವೀಯವರ ಈ ಹೇಳಿಕೆ ಸಾಹಿತ್ಯ ಲೋಕದಲ್ಲಿ ಭಾರೀ ಚರ್ಚೆಯನ್ನುಂಟು ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.