ಟೀ ಮಾರುವವರನ್ನು ಗೌರವಿಸಿ ಆದರೆ ಮೋಸ ಮಾಡುವವರನ್ನಲ್ಲ: ರಾಹುಲ್

ಬರ್ದೋಲಿ: ಗುಜರಾತ್ನ ಬರ್ದೋಲಿಯಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ , ಟೀ ಮಾರುವವರನ್ನು ಗೌರವಿಸಿ ಆದರೆ ಮೋಸ ಮಾಡುವವರನ್ನಲ್ಲ ಎಂದು ಮೋದಿ ವಿರುದ್ಧ ಕಿಡಿಕಾರಿದ್ದಾರೆ.
ಮೋದಿ ರಾಜ್ಯದಲ್ಲೇ ಮೋದಿ ವಿರುದ್ಧ ಗುಡುಗಿದ ರಾಹುಲ್ ಸರ್ದಾರ್ ವಲ್ಲಭಾಯಿ ಪಟೇಲ್ ಪ್ರತಿಮೆ ನಿರ್ಮಾಣ, ಆರೆಸ್ಸೆಸ್ಸ್ ಸಿದ್ಧಾಂತ ಮತ್ತು ಗುಜರಾತ್ನಲ್ಲಿನ ಭ್ರಷ್ಟಾಚಾರದ ಬಗ್ಗೆಯೂ ಟೀಕಾಪ್ರಹಾರ ಮಾಡಿದ್ದಾರೆ,
ರಾಹುಲ್ ಭಾಷಣದ ಮುಖ್ಯಾಂಶಗಳು
- ನೇತಾರರು ಸರ್ದಾರ್ ಪಟೇಲ್ರ ಬಗ್ಗೆ ಮಾತನಾಡಿ ಪ್ರತಿಮೆ ನಿರ್ಮಿಸುವುದಾಗಿ ಹೇಳುತ್ತಿದ್ದಾರೆ, ಆದರೆ ಅವರಿಗೆ ಐತಿಹಾಸ ಗೊತ್ತಿಲ್ಲ.
- ಅವರಿಗೆ ಸರ್ದಾರ್ ಪಟೇಲರ ಸಿದ್ಧಾಂತಗಳ ಬಗ್ಗೆ ಅರಿವಿಲ್ಲ, ಆದರೂ ಅವರ ಪ್ರತಿಮೆಯ ನಿರ್ಮಾಣಕ್ಕೆ ಹೊರಟಿದ್ದಾರೆ.
- ಆರೆಸ್ಸೆಸ್ಸ್ ವಿಷಕಾರಕ ಎಂದಿದ್ದರು ಸರ್ದಾರ್ ಪಟೇಲ್. ಮಹಾತ್ಮ ಗಾಂಧಿ ಹತ್ಯೆಯ ಹಿಂದೆ ಆರೆಸ್ಸೆಸ್ಸ್ ಸಿದ್ಧಾಂತಗಳಿವೆ
- ಪಟೇಲ್ರ ಸಿದ್ಧಾಂತಗಳ ಅರಿವಿಲ್ಲದೆಯೇ ಮೋದಿ ಪಟೇಲರ ಪ್ರತಿಮೆ ನಿರ್ಮಾಣ ಮಾಡುತ್ತಿದ್ದಾರೆ.
- ನಾವು ಕಾಂಗ್ರೆಸ್ ಪಕ್ಷದವರು ಬಡವರಿಗಾಗಿ ದುಡಿಯುತ್ತೇವೆ. ಗುಜರಾತ್ನಲ್ಲಿಯೇ ಭ್ರಷ್ಟಾಚಾರವಿದೆ. ಆದರೆ ಇದ್ಯಾವುದೂ ಅವರ ಕಣ್ಣಿಗೆ ಬಿದ್ದಿಲ್ಲ
- ಸತ್ಯ ಯಾವುದು ಎಂಬುದನ್ನು ಪರಾಂಬರಿಸಿ ನೋಡದೆಯೇ ಮೋದಿಯವರು ತಮ್ಮ ಮನಸ್ಸಿಗೆ ತೋಚಿದಂತೆ ಮಾತನಾಡುತ್ತಿದ್ದಾರೆ
- ದೇಶದಾದ್ಯಂತ ಆರ್ಟಿಐ ಜಾರಿಗೆ ತಂದಿರುವುದೇ ಕಾಂಗ್ರೆಸ್.
- ಗುಜರಾತ್ನಲ್ಲಿ 9 ವರ್ಷಗಳ ಕಾಲ ಲೋಕಾಯುಕ್ತ ಜಾರಿಯಾಗದಂತೆ ನೋಡಿಕೊಂಡಿದ್ದರು ಮೋದಿ.
- ಆರ್ಟಿಐ ಕಾಯ್ದೆ ಪ್ರಕಾರ , ಪ್ರತಿಯೊಂದು ರಾಜ್ಯದಲ್ಲೂ 10 ಮಾಹಿತಿ ಆಯ್ತುಕರು ಇರಬೇಕು. ಆದರೆ ಗುಜರಾತ್ನಲ್ಲಿ ಇರುವುದು ಒಂದೇ ಒಂದು. ಅದೂ ನ್ಯಾಯಾಲಯ ಆದೇಶ ನೀಡಿದ ನಂತರ ನೇಮಕ ಆಗಿರುವುದು.
- ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರ್ಯಾಲಿ ನಡೆಸುತ್ತಿದ್ದೆ ಆದರೆ ಸಂಸತ್ನಲ್ಲಿ ನೆನೆಗುದಿಗೆ ಬಿದ್ದಿರುವ 6 ಮಸೂದೆಗಳನ್ನು ಅಂಗೀಕರಿಸಲು ಬಿಜೆಪಿ ಕಾಂಗ್ರೆಸ್ಗೆ ಯಾಕೆ ಸಹಾಯ ಮಾಡುತ್ತಿಲ್ಲ?
- ಭೂಮಿ ಮತ್ತು ರೈತರಿಗಾಗಿ ಹೋರಾಡುತ್ತಿರುವುದು ಕಾಂಗ್ರೆಸ್ ಮಾತ್ರ.
- ಗುಜರಾತ್ ಸರ್ಕಾರ ಧನಿಕರಿಂದ ನಡೆಸಲ್ಪಡುತ್ತಿದೆ.
- ಗುಜರಾತ್ನಲ್ಲಿ 13000 ಸರ್ಕಾರಿ ಶಾಲೆಗಳು ಮುಚ್ಚಲ್ಪಟ್ಟಿವೆ ಆದರೆ ರಾಜ್ಯ ಸರ್ಕಾರ ಎಲ್ಲಿಯೂ ಈ ಬಗ್ಗೆ ಮಾತೆತ್ತಿಲ್ಲ.
- ಬಡವರನ್ನು ಮತ್ತು ಆದಿವಾಸಿಯರನ್ನು ಗಣನೆಗೆ ತೆಗೆದು
- ಕೊಳ್ಳದೆ ಅಭಿವೃದ್ಧಿ ಮಾಡಿ ಏನು ಪ್ರಯೋಜನ?
- ಕಾಂಗ್ರೆಸ್ ಜನರ ಕೈಗೆ ಅಧಿಕಾರ ನೀಡಲು ಬಯಸುತ್ತದೆ, ಆಯ್ಕೆ ಮಾಡಿದ ಜನರ ಕೈಗೆ ಅಲ್ಲ.
- ನಾವು ಬಡವರ ಕೈಗೆ ಅಧಿಕಾರ ನೀಡುತ್ತೇವೆ.
- 55,000 ಕೋಟಿಯ ಅನುದಾನಗಳಿವೆ. ಇದರಿಂದ ಯಾರಿಗಾದರೂ ಲಾಭವಾಗಿದೆಯೆ?
- ನಾವು ಬಡತನವನ್ನು ನಿರ್ಮೂಲನೆ ಮಾಡುವ ಬಗ್ಗೆ ಮಾತನಾಡುತ್ತೇವೆ. ಅವರು ಬಡವರನ್ನೇ ನಿರ್ಮೂಲನ ಮಾಡುತ್ತಿದ್ದಾರೆ.
- ಭಾರತದಲ್ಲಿರುವವರೆಲ್ಲರೂ ಒಂದಲ್ಲ ಒಂದು ಕೆಲಸವನ್ನು ಮಾಡುತ್ತಿರುತ್ತಾರೆ. ಕೆಲವರು ಟೀ ಮಾಡುತ್ತಾರೆ, ಕೆಲವರು ಟ್ಯಾಕ್ಸಿ ಚಾಲಕರಾಗಿದ್ದಾರೆ ಇನ್ನು ಕೆಲವರು ರೈತರಾಗಿದ್ದಾರೆ. ನಾವು ಎಲ್ಲರನ್ನೂ ಗೌರವಿಸಬೇಕು. ಆದರೆ ನಮ್ಮನ್ನು ಮೋಸ ಮಾಡುವವರನ್ನು ನಾವು ಗೌರವಿಸಲೇಬಾರದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


