ನಗ್ನ ಫೋಟೋ ಹಾಕಿದರೆ ಅದನ್ನು ಅಶ್ಲೀಲವೆಂದು ಪರಿಗಣಿಸುವಂತಿಲ್ಲ: ಸುಪ್ರೀಂ
ನವದೆಹಲಿ: ಮಹಿಳೆಯ ಬೆತ್ತಲೆ ಅಥವಾ ಅರೆಬೆತ್ತಲೆ ಫೋಟೋ ಹಾಕಿದಾಕ್ಷಣ ಅದನ್ನು ಅಶ್ಲೀಲ ಎಂದು ಪರಿಗಣಿಸಲಾಗುವುದಿಲ್ಲ. ಫೋಟೋ ನೋಡುಗನನ್ನು ಉದ್ರೇಕಿಸುವ ರೀತಿಯಲ್ಲಿದ್ದರೆ ಮಾತ್ರ ಅದು ಅಶ್ಲೀಲವೆನಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
1993ರಲ್ಲಿ ಟೆನಿಸ್ ದಂತಕತೆ ಬೋರಿಸ್ ಬೆಕೆರ್ ಮತ್ತು ಆತನ ಗರ್ಲ್ಫ್ರೆಂಡ್ ಬರ್ಬಾರಾ ಫೆಲ್ಟಸ್ ಬೆತ್ತಲೆಯಾಗಿರುವ ಫೋಟೋವೊಂದನ್ನು ಪತ್ರಿಕೆಯೊಂದು ಪ್ರಕಟಿಸಿದ್ದು. ಈ ಸಂಬಂಧ ಪತ್ರಿಕೆಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಸ್ತುತ ಪ್ರಕರಣದ ತೀರ್ಪು ಪ್ರಕಟಿಸಿದ ನ್ಯಾ. ಕೆ.ಎಸ್. ರಾಧಾಕೃಷ್ಣನ್ ಮತ್ತು ನ್ಯಾ. ಎ.ಕೆ ಸಿಕ್ರಿ ನೇತೃತ್ವದ ನ್ಯಾಯಪೀಠವು ಈ ಪ್ರಕರಣವನ್ನು ವಜಾಗೊಳಿಸಿ ತೀರ್ಪು ನೀಡಿದೆ.
ಬೆತ್ತಲೆಯಾಗಿರುವ ಅಥವಾ ಅರೆಬೆತ್ತಲೆಯಾಗಿರುವ ಮಹಿಳೆಯ ಫೋಟೋವನ್ನು ಸುಮ್ಮನೆ ಅಶ್ಲೀಲ ಎಂದು ಕರೆಯವಂತಿಲ್ಲ. ನೋಡುಗನ ಮನಸ್ಸಿನಲ್ಲಿ ಆ ಚಿತ್ರ ಕಾಮೋದ್ರೇಕನ್ನುಂಟು ಮಾಡುತ್ತಿದ್ದರೆ ಅಥವಾ ಫೋಟೋದಲ್ಲಿರುವ ಮಹಿಳೆಯ ಭಂಗಿ, ಹಿನ್ನೆಲೆ ಇವೆಲ್ಲದ ಆಧಾರದ ಮೇಲೆ ಅಶ್ಲೀಲತೆಯನ್ನು ಮಾಪನ ಮಾಡಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

