ಮತ್ತೆ ಪೆರೋಲ್ ವಿಸ್ತರಣೆಗೆ ಸಂಜಯ್ ದತ್ ಮನವಿ

ಮುಂಬೈ: ಪತ್ನಿ ಮಾನ್ಯತ ದತ್ ಅವರ ಅನಾರೊಗ್ಯದ ಹಿನ್ನಲೆಯಲ್ಲಿ ಮತ್ತೆ ಒಂದು ತಿಂಗಳವರೆಗೆ ಪೆರೋಲ್ ವಿಸ್ತರಿಸುವಂತೆ ಬಾಲಿವುಡ್ ನಟ ಸಂಜಯ್ ದತ್ ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ.
1993 ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಡಿ ಜೈಲು ಶಿಕ್ಷೆಗೆ ಗುರಿಯಾಗಿ, ಪೆರೋಲ್ ಮೇಲೆ ಹೊರಬಂದಿರುವ ಸಂಜಯ್ ದತ್ ಅವರು ತಮ್ಮ ಪೆರೋಲ್ ಅವಧಿ ವಿಸ್ತರಿಸುವಂತೆ ಕೋರಿದ್ದಾರೆಂದು ಮೂಲಗಳು ತಿಳಿಸಿವೆ.
ಕಳೆದ ಡಿಸೆಂಬರ್ನಲ್ಲಿ ಪುಣೆಯ ವಿಭಾಗೀಯ ಆಯುಕ್ತರು ಸಂಜಯ್ ದತ್ಗೆ 30 ದಿನಗಳ ಕಾಲ ಪೆರೋಲ್ ಮಂಡೂರು ಮಾಡಿದ್ದರು. ತದ ನಂತರ ಅವಧಿ ಮುಗಿಯುತ್ತಿದ್ದಂತೆ ಸಂಜಯ್ ದತ್ ಮತ್ತೆ ಪೆರೋಲ್ ವಿಸ್ತರಣಗೆ ಮನವಿ ಮಾಡಿದ ಹಿನ್ನಲೆಯಲ್ಲಿ, ಫೆಬ್ರವರಿ 21ರವರೆಗೆ ಪೆರೋಲ್ ಮಂಜೂರು ಮಾಡಲಾಗಿತ್ತು. ಆದರೆ ಈಗ ಮತ್ತೆ ಸಂಜಯ್ ಪೆರೋಲ್ ವಿಸ್ತರಣೆಗೆ ಮನವಿ ಮಾಡಿದ್ದಾರೆ.
ಭಾರತೀಯ ದಂಡ ಸಂಹಿತೆ ಅನ್ವಯ ಪ್ರತಿಯೊಬ್ಬ ಕೈದಿಗೂ ವರ್ಷದಲ್ಲಿ ಇಂತಿಷ್ಟು ದಿನ ಪೆರೋಲ್ ಮೂಲಕ ರಜೆ ನೀಡಲಾಗುತ್ತದೆ. ಕೆಲವೊಂದು ವಿಶೇಷ ಕಾರಣಗಳಿಂದಾಗಿ ಅಥವಾ ಸಂದರ್ಭಕ್ಕನುಗುಣವಾಗಿ ಪೆರೋಲ್ ನೀಡುವ ಪದ್ದತಿಯಿದೆ.
1993ರಲ್ಲಿ ಮುಂಬೈ ಸರಣಿ ಬಾಂಬ್ ಸ್ಫೋಟದ ವೇಳೆ ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ ಅಪರಾಧಕ್ಕಾಗಿ ಮಾರ್ಚ್ನಲ್ಲಿ ಸಂಜಯ್ ದತ್ಗೆ ಟಾಡಾ ಕೋರ್ಟ್ ಐದು ವರ್ಷಗಳ ಶಿಕ್ಷೆ ವಿಧಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


