ಐಒಸಿಗೆ ಮರಳಿದ ಐಒಎ

ನವದೆಹಲಿ: ಕಳೆದ 14 ತಿಂಗಳ ಹಿಂದೆ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ(ಐಒಸಿ)ಯಿಂದ ನಿಷೇಧಕ್ಕೆ ಒಳಗಾಗಿದ್ದ ಭಾರತೀಯ ಒಲಿಂಪಿಕ್ ಸಂಸ್ಥೆಗೆ (ಐಒಎ) ಮಂಗಳವಾರ ಮುಕ್ತಿ ಸಿಕ್ಕಿದೆ.
ಕಳಂಕಿತ ಅಧಿಕಾರಿಗಳನ್ನು ಹಾಗೂ ಸರ್ಕಾರದ ಹಸ್ತಕ್ಷೇಪದ ಆರೋಪದ ಹಿನ್ನಲೆಯಲ್ಲಿ ಐಒಸಿಯಿಂದ ಅಮಾನತುಗೊಂಡಿದ್ದ ಐಒಎ, ಮತ್ತೆ ಐಒಸಿಯಲ್ಲಿ ಮರು ಸೇರ್ಪಡೆಗೊಂಡಿದೆ.
ಕಳೆದ 14 ತಿಂಗಳಿನಿಂದ ಐಒಎ ಮೇಲೆ ಹೇರಿದ್ದ ನಿಷೇಧವನ್ನು ಐಒಸಿ ಹಿಂಪಡೆದಿದೆ. ಐಒಎ ಹೊಸದಾಗಿ ಚುನಾವಣೆ ನಡೆಸಿದ ಕೆಲ ದಿನಗಳಲ್ಲೇ ಐಒಸಿಯಿಂದ ಈ ನಿರ್ಧಾರ ಹೊರಬಿದ್ದಿದೆ.
ಸೋಚಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಭಾರತದ ರಾಷ್ಟ್ರೀಯ ಒಲಿಂಪಿಕ್ ಸಮಿತಿಯಾಗಿರುವ ಭಾರತೀಯ ಒಲಿಂಪಿಕ್ ಸಂಸ್ಥೆಯನ್ನು (ಐಒಸಿ) ಐಒಸಿ ಕಾರ್ಯಕಾರಿ ಮಂಡಳಿಯು ಮರು ಸೇರ್ಪಡೆಗೊಳಿಸಿದೆ ಎಂದು ಐಒಸಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಅಲ್ಲದೇ ಹೊಸ ಆಡಳಿತ ಮಂಡಳಿ ಆಯ್ಕೆಗಾಗಿ ಐಒಎ ನಡೆಸಿದ ಚುನಾವಣೆ ಹಾಗೂ ಸಾರ್ವತ್ರಿಕ ಸಭೆ ನಡೆದ ಬಗ್ಗೆ ವರದಿ ಆಧರಿಸಿ ಇಬಿ ಈ ನಿರ್ಧಾರ ಕೈಗೊಂಡಿದೆ ಎಂದೂ ಹೇಳಿದೆ.
ಹೊಸ ಮಂಡಳಿ ಆಯ್ಕೆಗಾಗಿ ಭಾರತೀಯ ಒಲಿಂಪಿಕ್ ಸಂಸ್ಥೆಯು 2014ರ ಫೆಬ್ರುವರಿ 9ರಂದು ಚುನಾವಣೆ ನಡೆಸಿತ್ತು. ಐಒಸಿ ಸದಸ್ಯ ರಾಬಿನ್ ಮಿಷೆಲ್ ಅವರ ನೇತೃತ್ವದ ಐಒಸಿ ಮೇಲ್ವಿಚಾರಣೆ ಚುನಾವಣೆ ನಡೆದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


