ಈಗಿನ ಸುದ್ದಿ

6 ಸೀಮಾಂಧ್ರ ಸಂಸದರ ಉಚ್ಚಾಟನೆ

6 ಸೀಮಾಂಧ್ರ ಸಂಸದರ ಉಚ್ಚಾಟನೆ
ಸಬ್ಬಮ್ ಹರಿ, ಹರ್ಷಕುಮಾರ್, ಉಂಡವಲ್ಲಿ ಅರುಣ್ ಕುಮಾರ್, ಲಗಡಪಾಟಿ ರಾಜಗೋಪಾಲ್, ರಾಯಪಾಟಿ ಸಾಂಬಶಿವರಾವ್, ಸಾಯಿಪ್ರತಾಪ್
Published On :

ನವದೆಹಲಿ: ಅಖಂಡ ಆಂಧ್ರಪ್ರದೇಶಕ್ಕೆ ಆಗ್ರಹಿಸಿ ಕಾಂಗ್ರೆಸ್ನ 6 ಸೀಮಾಂಧ್ರ ಸಂಸದರು ಸ್ವಪಕ್ಷದ ವಿರುದ್ಧವೇ ಅವಿಶ್ವಾಸ ಗೊತ್ತುವಳಿ ಮಂಡಿಸುವ ಪ್ರಸ್ತಾಪ ಹಿನ್ನೆಲೆಯಲ್ಲಿ ಆರು  ಸಂಸದರನ್ನು ಯುಪಿಎ ಸರ್ಕಾರ ಮಂಗಳವಾರ ಅಮಾನತುಗೊಳಿಸಿದೆ.

ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆ ವಿರೋಧಿಸಿ ಸೀಮಾಂಧ್ರ ಸಂಸದರು ಉಭಯ ಸದನಗಳಲ್ಲಿ ವಿರೋಧಿಸುತ್ತಾ ಬಂದಿದ್ದರು. ಕಾಂಗ್ರೆಸ್ ವಿರುದ್ಧವೇ ಅವಿಶ್ವಾಸ ಗೊತ್ತುವಳಿ ಮಂಡಿಸಲು ಮುಂದಾಗಿದ್ದ ಹಿನ್ನೆಲೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವ ಆರೋಪದಡಿಯಲ್ಲಿ ಕಾಂಗ್ರೆಸ್ನ ಸೀಮಾಂಧ್ರ ಸಂಸದರಾದ ರಾಯಪಾಟಿ ಸಾಂಬಶಿವರಾವ್, ಸಬ್ಬಮ್ ಹರಿ, ಲಗಡಪಾಟಿ ರಾಜಗೋಪಾಲ್, ಉಂಡವಲ್ಲಿ ಅರುಣ್ ಕುಮಾರ್, ಹರ್ಷಕುಮಾರ್, ಸಾಯಿಪ್ರತಾಪ್ ಅವರನ್ನು ಪಕ್ಷದಿಂದಲೇ ಅಮಾನತು ಮಾಡಿದೆ.

ಸಂಸದರ ಅಮಾನತು ಕುರಿತಂತೆ ಇಂದು ನಡೆದ ಕಾಂಗ್ರೆಸ್ ಕೋರ್ ಕಮಿಟಿ ಸಭೆಯಲ್ಲಿ ಸೀಮಾಂಧ್ರ ಸಂಸದರನ್ನು ಅಮಾನತು ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ. ಅಖಂಡ ಆಂಧ್ರಪ್ರದೇಶಕ್ಕೆ ಆಗ್ರಹಿಸಿ ಸೀಮಾಂಧ್ರ ಸಂಸದರು ಯುಪಿಎ ಕಾರ್ಯವನ್ನು ಟೀಕಿಸುತ್ತಾ ಬಂದಿದ್ದರು. ಅಲ್ಲದೆ ಸ್ವಪಕ್ಷದ ವಿರುದ್ಧವೇ ಸೀಮಾಂಧ್ರದ ಆರು ಸಂಸದರು ಅವಿಶ್ವಾಸ ಗೊತ್ತುವಳಿ ಮಂಡಿಸಲು ಮುಂದಾಗಿದ್ದರು. ಹೀಗಾಗಿ ಆರು ಸಂಸದರ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಿದೆ ಎನ್ನಲಾಗಿದೆ.

ಕಾಂಗ್ರೆಸ್ ಕೋರ್ ಕಮಿಟಿ ಕೈಗೊಂಡಿರುವ ಸೀಮಾಂಧ್ರ ಸಂಸದರ ಉಚ್ಚಾಟನೆ ಕ್ರಮವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಮ್ಮ ಸಮ್ಮತಿಯನ್ನು ಸೂಚಿಸಿದ್ದಾರೆಂದು ಕಾಂಗ್ರೆಸ್ ಮೂಲಗಳಿಂದ ತಿಳಿದುಬಂದಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.