ಈಗಿನ ಸುದ್ದಿ

ಪಿಆರ್‌ಒ ಲಕ್ಷ್ಮಣ್ ಗೆ 'ಚಾಣುಕ್ಯ' ಪ್ರಶಸ್ತಿ

ಪಿಆರ್‌ಒ ಲಕ್ಷ್ಮಣ್ ಗೆ 'ಚಾಣುಕ್ಯ' ಪ್ರಶಸ್ತಿ
Published On :

ಮುಂಬೈ: ಮಾಧ್ಯಮ ಕ್ಷೇತ್ರದಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿ(ಪಿಆರ್‌ಒ)ಯಾಗಿ ಉತ್ತಮ ಸಾಧನೆ ಮಾಡುವ ಪಿಆರ್‌ಒಗಳಿಗೆ ಭಾರತೀಯ ಸಾರ್ವಜನಿಕ ಸಂಪರ್ಕಾಧಿಕಾರಿ ಸಮಿತಿ(ಪಿಆರ್‌ಸಿಐ) ವತಿಯಿಂದ ನೀಡಲಾಗುವ ಅತ್ಯುನತ ಚಾಣುಕ್ಯ ಪ್ರಶಸ್ತಿಗೆ ನ್ಯಾಕ್ ಸಂಸ್ಥೆಯ ವಿ. ಲಕ್ಷ್ಮಣ್ ಅವರು ಭಾಜನರಾಗಿದ್ದಾರೆ.

ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ನ್ಯಾಷನಲ್ ಅಸೆಸ್ಮೆಂಟ್ ಅಂಡ್ ಅಕ್ರಿಡಿಟೇಶನ್ ಕೌನ್ಸಿಲ್(ಎನ್‌ಎಎಸಿ)ನಲ್ಲಿ ಆಂತರಿಕ ಸಂವಹನಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಲಕ್ಷಣ್ ಅವರು ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಅಸಾಧಾರಣ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಚಾಣುಕ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರತಿ ವರ್ಷ ಸಾರ್ವಜನಿಕ ಸಂಪರ್ಕಾಧಿಕಾರಿ ಕ್ಷೇತ್ರದಲ್ಲಿ ಉನ್ನತ ಕಾರ್ಯ ಸಾಧನೆ ಮಾಡಿದ ಪಿಆರ್‌ಒಗಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.

ಮುಂಬೈನ ಪ್ರೆಸ್ ಕ್ಲಬ್‌ನಲ್ಲಿ ಫೆಬ್ರವರಿ 14 ಮತ್ತು 15 ರಂದು ಪಿಆರ್‌ಸಿಐ ಆಯೋಜಿಸಿರುವ ಜಾಗತಿಕ ಸಂವಹನ ಸಮಾರಂಭದಲ್ಲಿ ಲಕ್ಷ್ಮಣ್ ಅವರಿಗೆ ಚಾಣುಕ್ಯ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.