ಮೋದಿ ಬೆಂಬಲಕ್ಕೆ ನಗ್ನ 'ಕೊಡುಗೆ'

ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಬಿಂಬಿತವಾಗಿರುವ ನರೇಂದ್ರ ಮೋದಿ ಅವರಿಗೆ ಬೆಂಬಲ ವ್ಯಕ್ತಪಡಿಸಲು ನಟಿ ಮೇಘನ ಪಟೇಲ್ ಬೆತ್ತಲಾಗಿದ್ದಾರೆ!
ಇತ್ತೀಚೆಗೆ ಮಲ್ಲಿಕಾ ಶೆರಾವತ್ ಹೃದಯಪೂರ್ವಕ ಹುಟ್ಟುಹಬ್ಬದ ಶುಭಾಶಯಗಳನ್ನು ಮೋದಿ ಯವರಿಗೆ ತಲುಪಿಸಿದ್ದರೆ, ಮೇಘನ ಪಟೇಲ್ ರ ಈ 'ಘನ'ಕಾರ್ಯ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಮಿಂಚಿನಂತೆ ಸಂಚರಿಸುತ್ತಿದೆ. ಟ್ವಿಟ್ಟರ್ ನ ಈ ಚಿತ್ರದಲ್ಲಿ ಬೆತ್ತಲಾಗಿ ನಿಂತು ಮೋದಿ ಯವರ ಚಿತ್ರವನ್ನು ಎದೆಯ ಭಾಗಕ್ಕೆ ಅಡ್ಡವಾಗಿ ಹಿಡಿದುಕೊಂಡಿದ್ದಾರೆ. ಇನ್ನೊಂದು ಚಿತ್ರದಲ್ಲಿ ಕಮಲದ ಹೂವುಗಳ ಹಾಸಿಗೆಯ ಮೇಲೆ ಬೆತ್ತಲಾಗಿ ಬಿದ್ದಿರುವ ಮೇಘನ ಪಟೇಲ್ ಎದೆಗೆ ಆತುಕೊಂಡಿರುವುದು ನರೇಂದ್ರ ಮೋದಿ ಯವರ ಪೋಸ್ಟರ್. ಮತ್ತು ಅದರಲ್ಲಿ ನರೇಂದ್ರ ಮೋದಿ ಅವರಿಗೆ ಬೆಂಬಲಿಸಿ ಎಂಬ ಸಾಲುಗಳಿವೆ.
ಇದುವರೆಗೆ ಹಲವಾರು ಪಟೇಲ್ ಗಳನ್ನೂ ತಮ್ಮ ರಾಜಕೀಯ ಜೀವನದಲ್ಲಿ ಕಂಡಿರಬಹುದಾದ ಮೋದಿ ಯವರಿಗೆ ಮೇಘನ ಪಟೇಲ್ ನೀಡುತ್ತಿರುವ 'ಸಪೋರ್ಟ್' ಕಂಡು ಟ್ವಿಟ್ಟರ್ ಜೋರಾಗಿಯೇ 'ಕೂಗುತ್ತಿದೆ '. ಕೆಲ ಮಾಧ್ಯಮಗಳ ಮುಂದೆ 'ನಾನು ವಸ್ತ್ರ ಧರಿಸಿ ಫೋಟೋ ಶೂಟ್ ಮಾಡಿಸಿದ್ದೇನೆ, ಅದನ್ನು ನೀವು ಬೆತ್ತಲೆ ಅಥವಾ ಅಶ್ಲೀಲ ಎಂದು ಕರೆಯಲು ಸಾಧ್ಯವಿಲ್ಲ. ಈ ರೀತಿಯಲ್ಲಿ ನಾನು ಬಿ ಜೆ ಪಿ ಅಥವಾ ಮೋದಿಯವರಿಗೆ ನನ್ನ ಬೆಂಬಲ ನೀಡುತ್ತಿದ್ದೇನೆ ' ಎಂದು ಹೇಳಿರುವ ಮೇಘನ ಪಟೇಲ್ ಮೂಲತಃ ರೂಪದರ್ಶಿ ಮತ್ತು ಟೆಲಿವಿಷನ್ ನಟಿ. 'ಚಂದ್ರಕಾಂತ' ಧಾರಾವಾಹಿಯಲ್ಲಿ ಅಭಿನಯಿಸಿರುವ ಮೇಘನರ ಈ 'ಹಾಸಿಗೆ'ಯ ಬೆಂಬಲವನ್ನು ಪಕ್ಷ ಯಾವ ರೀತಿ ಸ್ವೀಕರಿಸುತ್ತದೆ ಎಂದು ಕಾದು ನೋಡಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


