ಈಗಿನ ಸುದ್ದಿ

ಮೋದಿ ವಿರುದ್ಧ 'ಸಾಫ್ಟ್‌' ಆದ ಅಮೆರಿಕ

ಮೋದಿ ವಿರುದ್ಧ 'ಸಾಫ್ಟ್‌' ಆದ ಅಮೆರಿಕ
Published On :

ನವದೆಹಲಿ/ವಾಷಿಂಗ್ಟನ್: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ವೀಸಾ ನೀಡಲು ನಿರಾಕರಿಸುತ್ತಲೇ ಬಂದಿದ್ದ ಅಮೆರಿಕ, ಇದೀಗ ತನ್ನ ವರಸೆ ಬದಲಿಸಿದ್ದು, ಭಾರತದಲ್ಲಿರುವ ಅಮೆರಿಕಾದ ರಾಯಭಾರಿ ನ್ಯಾನ್ಸಿ ಪೋವೆಲ್ ಅವರು ಮೋದಿ ಅವರ ಭೇಟಿಗೆ ಅವಕಾಶ ಕೋರಿದ್ದಾರೆ.

ಒಂಬತ್ತು ವರ್ಷಗಳ ಕಾಲ ಮೋದಿ ಅವರಿಗೆ ಪ್ರವೇಶ ನಿರಾಕರಿಸಿದ್ದ ಅಮೆರಿಕ, ಇದೀಗ ತನ್ನ ನಿಲುವನ್ನು ಸಡಿಲಗೊಳಿಸಿದ್ದು, ಇದೇ ಗುರುವಾರ ನ್ಯಾನ್ಸಿ ಪೋವೆಲ್ ಅವರು ಮೋದಿ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಮುಂಬರುವ ಲೋಕಸಭಾ ಚುನಾವಣೆ ಹಾಗೂ ದೇಶದ ಬಗ್ಗೆ ಅವರ ದೂರದೃಷ್ಟಿ ಕುರಿತು ಮೋದಿ ಅವರೊಂದಿಗೆ ಪೋವೆಲ್ ಅವರು ಚರ್ಚಿಸಲು ಬಯಸಿದ್ದಾರೆ. ಪೋವೆಲ್ ಅವರ ಭೇಟಿಯ ಮನವಿಗೆ ಮೋದಿ ಅವರು ಸಮ್ಮತಿ ನೀಡಿದ್ದು, ಫೆಬ್ರವರಿ 13ರಂದು ಸಭೆ ನಡೆಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

2002ರ ಗುಜರಾತ್ ಹತ್ಯಾಕಾಂಡದ ಬಳಿಕ ಮೋದಿ ಬಗೆಗಿನ ನಿಲುವಿನಲ್ಲಿ ಅಮೆರಿಕ ಬದಲಾವಣೆ ಮಾಡಿಕೊಂಡಿತ್ತು. ಜೊತೆಗೆ 2005ರಿಂದಲೂ ಮೋದಿ ಅವರಿಗೆ ಅಮೆರಿಕ ವೀಸಾ ನೀಡಲು ನಿರಾಕರಿಸುತ್ತಲೇ ಬಂದಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.