ಅಹಮದಾಬಾದ್ನಲ್ಲಿ ಟೀ ಅಂಗಡಿ ಉದ್ಘಾಟಿಸಿದ ಮೋದಿ

ಅಹಮದಾಬಾದ್: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು 'ಚಾಯ್ ಪೇ ಚರ್ಚಾ' ಎಂಬ ಶಿಬಿರಕ್ಕೆ ಚಾಲನೆ ನೀಡಿದ್ದು, ಟೀ ಅಂಗಡಿಯನ್ನು ಬುಧವಾರ ಉದ್ಘಾಟಿಸಿದ್ದಾರೆ.
ಉದ್ಘಾಟನೆ ನಂತರ ಮಾತನಾಡಿದ ಮೋದಿ ಉತ್ತಮ ರಾಷ್ಟ್ರ ನಿರ್ಮಾಣಕ್ಕೆ ಉತ್ತಮ ಆಡಳಿತ ಬೇಕು ಎಂದಿದ್ದಾರೆ.
ಬಿಜೆಪಿ 'ಚಾಯ್ ಪೇ ಚರ್ಚಾ' ಎಂಬ ಶಿಬಿರ ಪ್ರಾರಂಭಿಸಿದ್ದು, ಇಲ್ಲಿ ಜನರು ಟೀ ಕುಡಿಯುತ್ತಾ ಮೋದಿ ಅವರೊಂದಿಗೆ ನೇರವಾಗಿ ಚರ್ಚೆ ನಡೆಸಬಹುದಾಗಿದೆ.
ದೇಶದ 300 ನಗರದಲ್ಲಿ 1 ಸಾವಿರ ನಮೋ ಟೀ ಸ್ಟಾಲ್ ಸ್ಥಾಪನೆಗೆ ಚಾಲನೆ ನೀಡಿದ್ದು, ಚಾಯ್ ಪೇ ಚರ್ಚಾ ಎಂಬ ಹೆಸರಿನಿಂದ ಮೋದಿ ಟೀ ಸ್ಟಾಲ್ಗಳನ್ನು ಉದ್ಘಾಟಿಸಿದ್ದಾರೆ. ಜನತೆ ಅತಿ ಕಡಿಮೆ ಬೆಲೆ ನೀಡಿ, ಮೋದಿ ಅವರೊಂದಿಗೆ ಸಂವಾದ, ಪ್ರಶ್ನೆಗಳು, ಮತ್ತು ತಮ್ಮ ಅಭಿಪ್ರಾಯಗಳನ್ನು ನೇರವಾಗಿ ತಿಳಿಸಬಹುದಾಗಿದೆ. ಇದಕ್ಕೆ ವೀಡಿಯೋ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಬಿಜೆಪಿ ವಕ್ತಾರ ಹರ್ಷದ್ ಪಟೇಲ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


