ವಿಶೇಷ ವಿಧಾನಸಭಾ ಅಧಿವೇಶನ: ಎಎಪಿಗೆ ಹೈಕೋರ್ಟ್ ತರಾಟೆ
ನವದೆಹಲಿ: ವಿಧಾನಸಭೆಯಲ್ಲಿ ನಡೆಸಬೇಕಿದ್ದ ಅಧಿವೇಶನವನ್ನು ಬೇರೆಲ್ಲೋ ನಡೆಸಲು ನಿರ್ಧರಿಸಿರುವ ಕೇಜ್ರಿವಾಲ್ ಸರ್ಕಾರವನ್ನು ದೆಹಲಿ ಹೈಕೋರ್ಟ್ ಬುಧವಾರ ತರಾಟೆಗೆ ತೆಗೆದುಕೊಂಡಿದೆ.
ವಿಧಾನಸಭೆ ಅಧಿವೇಶನವನ್ನು ಬೇರೆಲ್ಲಾದರು ನಡೆಸುವಂತಹ ಕಾನೂನು ಇದೆಯೇ? ಎಂದು ಹೈಕೋರ್ಟ್ ಆಮ್ ಆದ್ಮಿ ಪಕ್ಷ(ಎಎಪಿ) ನೇತೃತ್ವದ ದೆಹಲಿ ಸರ್ಕಾರವನ್ನು ಇಂದು ಪ್ರಶ್ನಿಸಿದೆ.
ದೆಹಲಿ ವಿಶ್ವವಿದ್ಯಾಲಯದ ಉಪನ್ಯಾಸಕ ಕೆದರ್ ಕುಮಾರ್ ಮಂಡಲ್ ಎಂಬುವವರು ವಿಧಾನಸಭೆ ಹೊರತು ಪಡಿಸಿ ಬೇರೆ ಕಡೆ ಅಧಿವೇಶನ ನಡೆಸಲು ತೀರ್ಮಾನಿಸಿರುವ ಕೇಜ್ರಿವಾಲ್ ಸರ್ಕಾರಕ್ಕೆ ತಡೆ ಹಾಕಿ ಎಂದು ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಮೂರ್ತಿಗಳಾದ ಬಿ.ಡಿ ಅಹಮದ್ ಮತ್ತು ಸಿದ್ದಾರ್ಥ್ ಮ್ರಿದುಲ್ ಅವರನ್ನೊಳಗೊಂಡ ನ್ಯಾಯಾಪೀಠ, ವಿಧಾನಸಭೆ ಹೊರತು ಪಡಿಸಿ ಬೇರೆ ಕಡೆ ಅಧಿವೇಶನ ನಡೆಸುವಂತಹ ಕಾನೂನು ಇದೆಯೇ ಎಂದು ಪ್ರಶ್ನಿಸಿದ್ದಾರೆ.
ನ್ಯಾಯಾಲಯ ಕೇಳುವಂತಹ ಪ್ರಶ್ನೆಗಳಿಗೆ ದೆಹಲಿ ಸರ್ಕಾರ ಉತ್ತರಿಸಬೇಕಿದೆ ಎಂದ ನ್ಯಾಯಾಪೀಠ, ಭರವಸೆ ಪೂರೈಸುವ ನೆಪದಲ್ಲಿ ಕಾನೂನುನನ್ನು ದುರಪಯೋಗ ಪಡಿಸಿಕೊಳ್ಳಬಾರದು ಎಂದು ಹೇಳಿದೆ.
ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಪಕ್ಷ ಚುನಾವಣೆ ವೇಳೆ ಜನ ಲೋಕಪಾಲ್ ಮಸೂದೆಯನ್ನು ರಾಮಲೀಲಾ ಮೈದಾನದಲ್ಲಿ ಮಂಡಿಸುತ್ತೇವೆ ಎಂದು ಭರವಸೆ ನೀಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

