ಲೋಕಸಭೆಯಲ್ಲಿ ಸಂಸದರ ಜಗಳ; ಪೆಪ್ಪರ್ ಸ್ಪ್ರೇ ಬಳಕೆ , ಮೈಕ್ ಕಿತ್ತೆಸೆದು ಆಕ್ರೋಶ

ನವದೆಹಲಿ: ಗುರುವಾರ ಮಧ್ಯಾಹ್ನ 12 ಗಂಟೆಗೆ ಲೋಕಸಭೆಯಲ್ಲಿ ತೆಲಂಗಾಣ ಮಸೂದೆ ಮಂಡನೆ ಮಾಡಲು ಸಿದ್ಧತೆಯಾಗುತ್ತಿದ್ದಂತೆ ಲೋಕಸಭಾ ಕಲಾಪದಲ್ಲಿ ಸಂಸದರ ನಡುವೆ ಜಗಳವೇರ್ಪಟ್ಟಿದೆ.
ಗೃಹ ಸಚಿವ ಸುಶೀಲ್ ಶಿಂಧೆ ಅವರು ಲೋಕಸಭೆಯಲ್ಲಿ ತೆಲಂಗಾಣ ಮಸೂದೆ ಮಂಡನೆಗೆ ಮುಂದಾದಾಗ ವಿಜಯ್ವಾಡಾದ ಕಾಂಗ್ರೆಸ್ ಸಂಸದ ಎಲ್ ರಾಜಗೋಪಾಲ್ ಕರಿಮೆಣಸು ಪುಡಿ (ಪೆಪ್ಪರ್ ಸ್ಪ್ರೇ ) ಎರಚುವ ಮೂಲಕ ಲೋಕಸಭಾ ಕಲಾಪಕ್ಕೆ ಧಕ್ಕೆಯನ್ನುಂಟು ಮಾಡಿದ್ದಾರೆ.
ಪೆಪ್ಪರ್ ಸ್ಪ್ರೇ ಬಳಸಿದ ಕಾರಣ ಸಂಸದರು ಕೆಮ್ಮುತ್ತಾ, ತಮ್ಮ ಕಣ್ಣುಗಳನ್ನು ಕರವಸ್ತ್ರದಿಂದ ಮುಚ್ಚುವ ದೃಶ್ಯ ಲೋಕಸಭೆಯಲ್ಲಿ ಕಂಡು ಬಂತು. ಕೂಡಲೇ ಸಂಸತ್ನ ವೈದ್ಯರು ಅಲ್ಲಿಗೆ ಧಾವಿಸಿದ್ದಾರೆ.
ಈ ಸಂದರ್ಭದಲ್ಲಿ ನೂಕುನುಗ್ಗಲು ಸಂಭವಿಸಿದ್ದು, ರಾಜ್ಗೋಪಾಲ್ ಅವರಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.
ಇದರ ಜತೆಗೆ ಸೀಮಾಂಧ್ರದ ಸಂಸದರು ಸದನದ ಅಂಗಣಕ್ಕಿಳಿದು ಸಭಾಧ್ಯಕ್ಷರ ಮೈಕ್ರೋಫೋನ್ ಮುರಿಯಲು ಯತ್ನಿಸಿದ್ದಾರೆ.
ಈ ಜಟಾಪಟಿಯಲ್ಲಿ ಮೂವರು ಲೋಕಸಭಾ ಸಂಸದರಿಗೆ ಗಾಯಗಳಾಗಿದ್ದು ಅವರನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ.
ಪೆಪ್ಪರ್ ಸ್ಪ್ರೇ ಬಳಕೆಯ ಬಗ್ಗೆ ಪ್ರತಿಕ್ರಿಯಿಸಿದ ಟಿಎಂಸಿ ಪಕ್ಷದ ದಿನೇಶ್ ತ್ರಿವೇದಿ, ಇದು ಪ್ರಭಾಪ್ರಭುತ್ವದ ಒಳ್ಳೆಯ ಬೆಳವಣಿಗೆಯಲ್ಲ ಎಂದಿದ್ದಾರೆ.
ಮಾತ್ರವಲ್ಲದೆ ಇದರ ನಡುವೆ ಟಿಡಿಪಿ ಸಂಸದ ವೇಣುಗೋಪಾಲ ರೆಡ್ಡಿ ಅವರು ಲೋಕಸಭೆಯ ಸೆಕ್ರಟರಿ ಜನರಲ್ ಅವರ ಮೈಕ್ ಕಿತ್ತೆಸೆದು ತಮ್ಮ ಆಕ್ರೋಶ ವ್ಯಕ್ತ ಪಡಿಸಿಸಿದರು.
ಏತನ್ಮಧ್ಯೆ, ತೆಲಂಗಾಣ ಮಸೂದೆ ಮಂಡನೆಗೆ ವಿರೋಧ ವ್ಯಕ್ತವಾಗಿರುವುದರಿಂದ ಲೋಕಸಭೆ ಮತ್ತು ರಾಜ್ಯಸಭಾ ಕಲಾಪಗಳು ಇಂದು ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಬೇಕಾಗಿ ಬಂದಿತ್ತು.
ತೆಲಂಗಾಣ ಮಸೂದೆಯನ್ನು ವಿರೋಧಿಸಿ ಸೀಮಾಂಧ್ರ ಭಾಗದ ನಾಲ್ವರು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡುವ ಮೂಲಕವೂ ತಮ್ಮ ಪ್ರತಿಭಟನೆಯನ್ನು ವ್ಯಕ್ತ ಪಡಿಸಿದ್ದಾರೆ.
ಸಂಸತ್ ಕಲಾಪ ಆರಂಭವಾಗುವ ಮುನ್ನ ತೆಲಂಗಾಣ ರಚನೆ ವಿರೋಧಿ ಮತ್ತು ತೆಲಂಗಾಣ ಬೆಂಬಲಿಗರ ನಡುವೆ ಸಂಸತ್ನ ಹೊರಗೆಯೂ ಜಗಳ ನಡೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


