ಪ್ರೇಮಾ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ದ ರಾಮದಾಸ್

ಬೆಂಗಳೂರು: ಮಾಜಿ ಸಚಿವ ರಾಮದಾಸ್ ಅವರ ಪ್ರೇಮ ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದ್ದು, ಅವರು ಪ್ರೇಮಕುಮಾರಿ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಿರುವ ದೃಶ್ಯಗಳನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡಲಾಗಿದೆ.
ಮಾರ್ಚ್ 10, 2013ರಂದು ರಾಮದಾಸ್ ಅವರು ಸಚಿವರಾಗಿದ್ದ ವೇಳೆ ತಮ್ಮ ಸರ್ಕಾರಿ ಕಾರನ್ನು ಬಿಟ್ಟು, ಖಾಸಗಿ ಕಾರಿನಲ್ಲಿ ಪ್ರೇಮಕುಮಾರಿ ಅವರ ನಿವಾಸಕ್ಕೆ ತೆರಳಿ ಸುಮಾರು 1 ಗಂಟೆಯವರೆಗೆ ಮಾತುಕತೆ ನಡೆಸಿದ್ದಾರೆ.
ಪ್ರೇಮಕುಮಾರಿ ಅವರ ಮನೆಯಲ್ಲಿ ನಡೆದ ಸಂಪೂರ್ಣ 'ರಾಮಾ'ಯಣದ ವಿಡಿಯೋ ಮಾಧ್ಯಮಕ್ಕೆ ದೊರೆತ್ತಿದ್ದು, ವಿಡಿಯೋದಲ್ಲಿ ರಾಮದಾಸ್, ಪ್ರೇಮಕುಮಾರಿ ಹಾಗೂ ಪ್ರೇಮಕುಮಾರಿ ಅವರ ತಾಯಿ ಮಧ್ಯೆ ವಾಗ್ವಾದ ನಡೆಯುತ್ತಿರುವ ದೃಶ್ಯಗಳಿವೆ.
ನನ್ನ ತಾಯಿ ಮೇಲಾಣೆ, ಚಾಮುಂಡೇಶ್ವರಿ ಮೇಲಾಣೆ. ನಿನಗೇನು ನಾನು ಮೋಸ ಮಾಡಲ್ಲ, ನನ್ನನ್ನು ಬಿಟ್ಬಿಡಿ. ಈ ಯಾವುದೇ ವಿಚಾರವನ್ನು ದಯವಿಟ್ಟು ಬಹಿರಂಗಪಡಿಸಬೇಡಿ ಎಂದು ರಾಮದಾಸ್ ಅಂಗಲಾಚುತ್ತಾರೆ. ಆದರೆ ಇದಕ್ಕೆ ಸೊಪ್ಪು ಹಾಕದ ಪ್ರೇಮಕುಮಾರಿ, ತನ್ನನ್ನು ಮದುವೆಯಾಗು ಎಂದು ಪಟ್ಟು ಹಿಡಿಯುತ್ತಾಳೆ. ಒಂದು ಹಂತದಲ್ಲಿ ರಾಮದಾಸ್ ಅವರು ಬಿಕ್ಕಿ ಬಿಕ್ಕಿ ಅಳುತ್ತಾರೆ.
ಈ ವಿಡಿಯೋ ದೃಶ್ಯಗಳು ಕನ್ನಡದ ಬಹುತೇಕ ಸುದ್ದಿವಾಹಿನಿಗಳಲ್ಲಿ ಬಿತ್ತರವಾಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


