ಸಿ ವೋಟರ್ ಸಮೀಕ್ಷೆಯಲ್ಲಿ ಬಿಜೆಪಿ ಮುಂದು

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಿ ವೋಟರ್ ಸಮೀಕ್ಷಾ ವರದಿ ಬುಧವಾರ ಬಿಡುಗಡೆಯಾಗಿದ್ದು, ಬಿಜೆಪಿ ಬಹುತೇಕ ಹೆಚ್ಚು ಸ್ಥಾನಗಳನ್ನು ಗಳಿಸುವ ಸಾಧ್ಯತೆ ಗೋಚರಿಸುತ್ತಿವೆ.
ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಆ ಪೈಕಿ ಆಡಳಿತ ರೂಢ ಕಾಂಗ್ರೆಸ್ 14 ಬಿಜೆಪಿ 11, ಜೆಡಿಎಸ್ 2, ಎಎಪಿ 1 ಸ್ಥಾನ ಗಳಿಸಲಿದೆ ಎಂದು ವರದಿಯಲ್ಲಿ ಬಹಿರಂಗವಾಗಿದೆ.
ಫ್ರೆಬ್ರವರಿ ತಿಂಗಳಲ್ಲಿ ನಡೆದ ಸಿ ವೋಟರ್ ಸಮೀಕ್ಷೆಯಲ್ಲಿ ಈ ಅಂಶ ಬಹಿರಂಗವಾಗಿದ್ದು, ಕರ್ನಾಟಕದಲ್ಲಿ ಸರ್ಕಾರ ನಡೆಸುತ್ತಿರುವ ಕಾಂಗ್ರೆಸ್ 28 ಸ್ಥಾನಗಳ ಪೈಕಿ 14 ಸ್ಥಾನಗಳನ್ನು ಗಳಿಸಿದರೆ, ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಹೆಸರನ್ನೆ ಅಸ್ತ್ರವನ್ನಾಗಿ ಬಳಸಿಕೊಂಡಿರುವ ಬಿಜೆಪಿ 11 ಸ್ಥಾನಗಳನ್ನು ಗಳಿಸಬಹುದು. ಅಲ್ಲದೆ ಪ್ರಾದೇಶಿಕ ಪಕ್ಷ ಜೆಡಿಎಸ್ ಕೇವಲ 2 ಸ್ಥಾನಗಳನ್ನು ಪಡೆಯಲಿದ್ದು, ಭ್ರಷ್ಟಾಚಾರ ಮಟ್ಟಹಾಕುವ ಭರವಸೆಯನ್ನು ಮೂಡಿಸಿ ಉದಯಿಸಿರುವ ಆಮ್ ಆದ್ಮಿ ಪಕ್ಷ ಕೇವಲ 1 ಸ್ಥಾನ ಗಳಿಸುವ ಸಾದ್ಯತೆ ಇದೆ ಎಂದು ವರದಿಯಲ್ಲಿ ತಿಳಿದು ಬಂದಿದೆ.
ಸಂಸತ್ತಿನ ಒಟ್ಟು ಬಲಾಬಲ 543 ಸ್ಥಾನಗಳಾಗಿದ್ದು, ಈ ಪೈಕಿ ಸಿ-ವೋಟರ್ ಸಮೀಕ್ಷೆಯ ಪ್ರಕಾರ ಪ್ರಮುಖ ಮೈತ್ರಿಕೂಟಗಳಾದ ಯುಪಿಎ-101 ಸ್ಥಾನಗಳನ್ನು ಗಳಿಸುವ ನಿರೀಕ್ಷೆ ಇದ್ದು, ಶತಾಗತಾಯ ಅಧಿಕಾರದ ಚುಕ್ಕಾಣಿ ಹಿಡಿಯಲೇ ಬೇಕು ಎಂದು ಕಾದಿರುವ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಮೈತ್ರಿಕೂಟ 227 ಸ್ಥಾನಗಳನ್ನು ಪಡೆಯುವ ನಿರೀಕ್ಷೆ ಇದೆ. ಅಂತೆಯೇ ತೃತೀಯ ರಂಗ ಸೇರಿದಂತೆ ಇತರೆ ಪಕ್ಷಗಳು 215 ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದೆ.
ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು 272 ಸ್ಥಾನಗಳ ಸರಳ ಬಹುಮತದ ಅವಶ್ಯಕತೆ ಇದೆ.
ಒಟ್ಟಾರೆ ಲೋಕಸಭಾ ಚುನಾವಣೆ ಕುರಿತು ಸಿ-ವೋಟರ್ ಸಂಸ್ಥೆ ನಡೆಸಿರುವ ಸಮೀಕ್ಷೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಬಹುತೇಕ ಅಧಿಕಾರದ ಗದ್ದುಗೆಯತ್ತ ದಾಪುಗಾಲ್ಲಿಟ್ಟಿದೆ. ಆದರೆ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮಾಡಬೇಕೆಂಬ ಕಾಂಗ್ರೆಸ್ ಪಕ್ಷ ಆಸೆ ಬಹುತೇಕ ಕಮರುತ್ತಿದೆ. ಅಂತೆಯೇ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿ ಅಧಿಕಾರ ರಚಿಸಿದ್ದ ಆಮ್ ಆದ್ಮಿ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಅದೇ ಮ್ಯಾಜಿಕ್ ಮಾಡುವಲ್ಲಿ ವಿಫಲವಾಗಿದೆ ಎಂದು ಹೇಳಲಾಗುತ್ತಿದೆ.
ಸಮೀಕ್ಷೆಯ ವರದಿ ಅನ್ವಯ ರಾಜ್ಯಗಳಲ್ಲಿನ ಪಕ್ಷಗಳ ಬಲಾಬಲ ಇಂತಿದೆ:
| ರಾಜ್ಯ | ಬಿಜೆಪಿ | ಕಾಂಗ್ರೆಸ್ | ಎಎಪಿ | ಜೆಡಿಎಸ್ | ಇತರೆ |
| ದೆಹಲಿ | 04 | 00 | 03 | 00 | 00 |
| ಕರ್ನಾಟಕ | 11 | 14 | 1 | 2 | 00 |
| ಮಹಾರಾಷ್ಟ್ರ | 15 | 08 | 00 | 00 | 22 |
| ತಮಿಳುನಾಡು | 00 | 01 | 00 | 00 | 37 |
| ಗುಜರಾತ್ | 22 | 04 | 00 | 00 | 00 |
| ಕೇರಳ | 1 | 7 | 00 | 00 | 12 |
| ಆಂಧ್ರಪ್ರದೇಶ | 02 | 06 | 00 | 00 | 34 |
| ಗೋವಾ | 01 | 01 | 00 | 00 | 00 |
| ಜಾರ್ಖಂಡ್ | 08 | 01 | 00 | 00 | 05 |
| ಮಧ್ಯಪ್ರದೇಶ | 24 | 05 | 00 | 00 | 00 |
| ಉತ್ತರ ಪ್ರದೇಶ | 34 | 04 | 00 | 00 | 42 |
| ಜಮ್ಮು ಮತ್ತು ಕಾಶ್ಮೀರ | 02 | 01 | 00 | 00 | 03 |
| ಹಿಮಾಚಲ ಪ್ರದೇಶ | 03 | 01 | 00 | 00 | 00 |
| ಸಿಕ್ಕಿಂ | 00 | 00 | 00 | 00 | 01 |
| ರಾಜಾಸ್ತಾನ | 21 | 04 | 00 | 00 | 01 |
| ಪಂಜಾಬ್ | 02 | 06 | 00 | 00 | 05 |
| ಮೇಘಾಲಯ | |||||
| ಹರಿಯಾಣ | 06 | 01 | 01 | 00 | 02 |
| ಛತ್ತೀಸ್ಗಡ | 08 | 03 | 00 | 00 | 00 |
| ಮಿಜೋರಾಂ | 00 | 01 | 00 | 00 | 00 |
| ತ್ರಿಪುರ | 00 | 00 | 00 | 00 | 02 |
| ನಾಗಾಲ್ಯಾಂಡ್ | 00 | 00 | 00 | 00 | 01 |
| ಒಡಿಶಾ | 12 | 07 | 00 | 00 | 00 |
| ಬಿಹಾರ | 21 | 01 | 00 | 00 | 08 |
| ಅಸ್ಸಾಂ | 05 | 07 | 00 | 00 | 02 |
| ಉತ್ತರಾಖಂಡ | 05 | 05 | 00 | 00 | 00 |
| ಪಶ್ಚಿಮ ಬಂಗಾಳ | 01 | 02 | 00 | 00 | 39 |
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


