ಈಗಿನ ಸುದ್ದಿ

ಅಂಬಾನಿ ವಿರುದ್ಧ ಎಫ್‌ಐಆರ್ ಹಿನ್ನಲೆ ಮಸೂದೆ ಮಂಡನೆಗೆ ವಿರೋಧ: ಕೇಜ್ರಿವಾಲ್

ಅಂಬಾನಿ ವಿರುದ್ಧ ಎಫ್‌ಐಆರ್ ಹಿನ್ನಲೆ ಮಸೂದೆ ಮಂಡನೆಗೆ ವಿರೋಧ: ಕೇಜ್ರಿವಾಲ್
Published On :

ನವದೆಹಲಿ: ಉದ್ಯಮಿ ಮುಖೇಶ್ ಅಂಬಾನಿ ವಿರುದ್ಧ ಎಫ್‌ಐಆರ್ ದಾಖಲಿಸಿದ ಹಿನ್ನಲೆಯಲ್ಲಿ ಜನಲೋಕಪಾಲ ಮಸೂದೆ ಮಂಡನೆಗೆ ವಿರೋಧ ವ್ಯಕ್ತವಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶುಕ್ರವಾರ ಹೇಳಿದ್ದಾರೆ.

ಇಂದು ದೆಹಲಿಯ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಅಂಬಾನಿ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಹಿನ್ನಲೆಯಲ್ಲಿ ವಿಪಕ್ಷಗಳು ಜನಲೋಕಪಾಲ ಮಸೂದೆ ಮಂಡನೆಗೆ ವಿರೋಧ ವ್ಯಕ್ತಪಡಿಸಿವೆ. ಮುಖೇಶ್ ಅಂಬಾನಿಗಾಗಿ ಬಿಜೆಪಿ ಕಾಂಗ್ರೆಸ್ ಒಂದಾಗಿದ್ದು, ಅಂಬಾನಿ ಸಲಹೆ ಮೇರೆಗೆ ಒಗ್ಗಟ್ಟು ಪ್ರದರ್ಶಿಸುತ್ತಿದೆ ಎಂದು ಆರೋಪಿಸಿದ್ದಾರೆ.

ನಾವು ಮೊದಲ ಬಾರಿಗೆ ಗೆದ್ದು ಬಂದಿದ್ದೆವು. ದೆಹಲಿ ಜನತೆಗೆ ಮಸೂದೆ ಮಂಡನೆ ಮಾಡುವುದಾಗಿ ಭರವಸೆ ನೀಡಿದ್ದೇವು. ಆದರೆ ವಿಪಕ್ಷ ಸದಸ್ಯರ ವರ್ತನೆ ಬೇಸರ ತಂದಿದೆ ಎಂದು ಅವರು ವಿಷಾಧಿಸಿದ್ದಾರೆ.

ವಿಧಾನಸಭೆ ದೇವಾಲಯವಿದ್ದಂತೆ, ಮಂದಿರಕ್ಕೆ ಯಾರೊಬ್ಬರೂ ಅಪಮಾನ ಮಾಡಬಾರದು. ಸ್ಪೀಕರ್ ಮುಂದಿನ ಮೈಕ್ ಮುರಿಯುವುದು, ವಿಧೇಯಕದ ಪ್ರತಿ ಹರಿದು ಹಾಕುವುದು ಸರಿಯಲ್ಲ ಎಂದ ಅವರು ವಿಧಾನಸಭೆಯನ್ನು ಶಾಸಕರು ಗೌರವಿಸಬೇಕು ಎಂದು ತಿಳಿಸಿದ್ದಾರೆ.

ನನ್ನಿಂದ ಯಾರಿಗಾದರು ನೋವಾಗಿದ್ದರೇ ಕ್ಷಮಿಸಿ, ಕೆಲ ಸದಸ್ಯರ ವರ್ತನೆ ಬೇಸರ ತಂದಿದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.