ಈಗಿನ ಸುದ್ದಿ

ಸಿದ್ದು ಬಜೆಟ್-2014

ಸಿದ್ದು ಬಜೆಟ್-2014
Published On :

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2014-15ನೇ ಸಾಲಿನ ರಾಜ್ಯ ಬಜೆಟ್ ಮಂಡಿಸುತ್ತಿದ್ದು, ಈ ಬಜೆಟ್ ರಾಜ್ಯದ ಸರ್ವ ಜನರ ಅಭಿವೃದ್ಧಿಯ ಆಶಯವಾಗಿದೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಅವರು ಇಂದು ಮಧ್ಯಾಹ್ನ ಸರಿಯಾಗಿ 12.30ಕ್ಕೆ  ಮುಖ್ಯಮಂತ್ರಿಯಾಗಿ ಎರಡನೇ ಹಾಗೂ ಒಟ್ಟಾರೆಯಾಗಿ ಒಂಬತ್ತನೇಯ ಬಜೆಟ್‌ನ್ನು ಮಂಡಿಸಿದ್ದಾರೆ.

ಜನರಿಗೆ ನೀಡಿದ ಬಹುತೇಕ ಭರವಸೆಗಳನ್ನು ನಾವು ಈಡೇರಿಸಿದ್ದೇವೆ. ಹಿಂದುಳಿದ ವರ್ಗದವರ ಸಾಲ ಮನ್ನಾ ಮಾಡುವ ಮೂಲಕ ಅವರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದ್ದೇವೆ. ಅಲ್ಲದೆ ಕೃಷಿಕರ ಅಭಿವೃದ್ಧಿಯೇ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಸಿದ್ದು ಹೇಳಿದರು.

ಈ ಬಾರಿಯ ಬಜೆಟ್ನ ಯೋಜನಾ ಗಾತ್ರ 65,600 ಕೋಟಿ ರುಪಾಯಿ, ಸರ್ಕಾರದ ಸಂಪನ್ಮೂಲ 57,687 ಕೋಟಿ, ಸಾರ್ವಜನಿಕ ಉದ್ಯಮಗಳ ಸಂಪನ್ಮೂಲ 7913 ಕೋಟಿ ರುಪಾಯಿ.

ಬಜೆಟ್ ಮುಖ್ಯಾಂಶಗಳು

ಒಳಾಡಳಿತ ಮತ್ತು ಸಾರಿಗೆ ಕ್ಷೇತ್ರಕ್ಕೆ 5,986 ಕೋಟಿ ರು

ಗ್ರಾಮೀಣಆಭಿವೃದ್ಧಿ ಕ್ಷೇತ್ರಕ್ಕೆ 9,361 ಕೋಟಿ ರು

ಕಂದಾಯ ಇಲಾಖೆಗೆ 4, 293 ಕೋಟಿ ರು

ಜಲ ಸಂಪನ್ಮೂಲ ಕ್ಷೇತ್ರಕ್ಕೆ 11,349 ಕೋಟಿ ರು

 ಕೃಷಿ ತೋಟಗಾರಿಕೆ ಇಲಾಖೆಗೆ 5,397 ಕೋಟಿ ರು

ಇಂಧನ ಕ್ಷೇತ್ರಕ್ಕೆ 11 , 693 ಕೋಟಿ ರು

ಶಿಕ್ಷಣ ಕ್ಷೇತ್ರಕ್ಕೆ 21, 305 ಕೋಟಿ ರುಪಾ.

ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆಗೆ 6,023 ಕೋಟಿ

ಸಮಾಜ ಕಲ್ಯಾಣ ಇಲಾಖೆಗೆ 6,475 ಕೋಟಿ ರು

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ 975 ಕೋಟಿ ರು.

ಲೋಕೋಪಯೋಗಿ ಇಲಾಖೆಗೆ 6,634 ಕೋಟಿ ರು

ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ 1,979 ಕೋಟಿ ರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.