ಈಗಿನ ಸುದ್ದಿ

ಅತ್ಯಂತ ಭ್ರಷ್ಟ ಸರ್ಕಾರಕ್ಕೆ ಪ್ರಧಾನಿ ಸಿಂಗ್ ಅಧ್ಯಕ್ಷತೆ: ಆಡ್ವಾಣಿ

ಅತ್ಯಂತ ಭ್ರಷ್ಟ ಸರ್ಕಾರಕ್ಕೆ ಪ್ರಧಾನಿ ಸಿಂಗ್ ಅಧ್ಯಕ್ಷತೆ: ಆಡ್ವಾಣಿ
Published On :

ನವದೆಹಲಿ: ಸ್ವತಂತ್ರ ಭಾರತದ ಇತಿಹಾಸದ್ದಲ್ಲೆ ಅತಿ ಭ್ರಷ್ಟ ಆಡಳಿತ ಅವಧಿ ಎಂದರೆ ಅದು ಪ್ರಧಾನಿ ಮನಮೋಹನ್ ಸಿಂಗ್ ಅವರ ಆಡಳಿತ ಕಾಲ ಎಂದು ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಅವರು ಭಾನುವಾರ ಟೀಕಿಸಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ
ಬಿಜೆಪಿ ಅಧಿಕಾರಕ್ಕೆ ಬರುವ ಮೂಲಕ ಕಳೆದೊಂದು ದಶಕದಿಂದ ಅಧಿಕಾರದಲ್ಲಿರುವ ಮನಮೋಹನ್ ಸಿಂಗ್‌ ಅವರ ಭ್ರಷ್ಟ ಸರ್ಕಾರ ಅಂತ್ಯವಾಗಲಿದ್ದು, ಇನ್ನು ದೇಶದ ಜನರು ನಿಟ್ಟುಸಿರು ಬಿಡಬಹುದು ಎಂದು ಆಡ್ವಾಣಿ ತಮ್ಮ ಬ್ಲಾಗ್‌ನಲ್ಲಿ ಬರೆದಿದ್ದಾರೆ.

ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರವನ್ನು ಕಟುವಾಗಿ ಟೀಕಿಸಿರುವ ಅವರು, ಸಂಸತ್‌ ಸದನದಲ್ಲಿ ಕಾಂಗ್ರೆಸ್‌ ಸಂಸದರು ಮತ್ತು ಕೆಲ ಸಚಿವರ ವರ್ತನೆ ಗೂಂಡ ವರ್ತನೆಯಾಗಿತ್ತು ಎಂದು ಕಿಡಿಕಾರಿದ್ದಾರೆ.

ಹಗರಣ ಮತ್ತು ವಿವಾದಗಳಲ್ಲೇ ಈ ಸರ್ಕಾರ ಕಾಲಾಹರಣ ಮಾಡಿದೆ ಎಂದು ಆಡ್ವಾಣಿ ತಮ್ಮ ಬ್ಲಾಗ್‌ನಲ್ಲಿ ಬರೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.