ಈಗಿನ ಸುದ್ದಿ

ಲೋಕಸಭಾ ಚುನಾವಣೆ: ಎಎಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಲೋಕಸಭಾ ಚುನಾವಣೆ: ಎಎಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
Published On :

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಆಮ್ ಆದ್ಮಿ ಪಕ್ಷ(ಎಎಪಿ) ಪ್ರಥಮ ಅಭ್ಯರ್ಥಿ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ.

ದೆಹಲಿ ಮುಖ್ಯಮಂತ್ರಿ ಸ್ದಾನಕ್ಕೆ ಅರವಿಂದ್ ಕೇಜ್ರಿವಾಲ್ ರಾಜಿನಾಮೆ ನೀಡಿದ ಬಳಿಕ, ಎಎಪಿ ಲೋಕಸಭಾ ಚುನಾವಣೆಗೆ ಸಜ್ಜುಗೊಂಡಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿಯ ಘಟಾನುಘಟಿ ಸಂಸದರ ವಿರುದ್ಧ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ.

ಅಭ್ಯರ್ಥಿ ಪಟ್ಟಿ ಬಿಡುಗಡೆ ಸಂಬಂಧ ಇಂದು ಸುದ್ದಿಗೋಷ್ಠಿ ನಡೆಸಿದ ಎಎಪಿ ಮುಖಂಡ ಹಾಗೂ ಮಾಜಿ ಸಚಿವ ಮನೀಶ್ ಸಿಸೋಡಿಯಾ ಅವರು, ಕಾಂಗ್ರೆಸ್ ಹಾಗೂ ಬಿಜೆಪಿ ಘಟಾನುಘಟಿ ಸಂಸದರ ವಿರುದ್ಧ ಎಎಪಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದೆ. ಅಮೇಥಿ ಕ್ಷೇತ್ರದ ಹಾಲಿ ಸಂಸದರಾದ ರಾಹುಲ್ ಗಾಂಧಿ ವಿರುದ್ಧ ಕುಮಾರ್ ವಿಶ್ವಾಸ್‌ರನ್ನು ಹಾಗೂ ನಾಗಪುರ ಕ್ಷೇತ್ರದ ಹಾಲಿ ಬಿಜೆಪಿ ಸಂಸದ ನಿತೀನ್ ಗಡ್ಕರಿ ವಿರುದ್ಧ ಅಂಜಲಿ ದಮಾನಿಯಾ ಸ್ಪರ್ಧಿಸುತ್ತಿದ್ದಾರೆ ಎಂದರು.

ಲೂಧಿಯಾನ ಕ್ಷೇತ್ರದ ಹಾಲಿ ಸಂಸದ ಮನೀಶ್ ತಿವಾರಿ ವಿರುದ್ಧ ಹೆಚ್.ಎಸ್ ಫೂಲ್ಕಾ, ಮುಂಬೈ ದಕ್ಷಿಣ ಕ್ಷೇತ್ರದ ಹಾಲಿ ಸಂಸದ ಮಿಲಿಂದ್ ದಿಯೋರಾ ವಿರುದ್ಧ ಎಎಪಿಯ ಮೀರಾ ಸನ್ಯಾಲ್, ಚಾಂದನಿ ಚೌಕ್ ಕ್ಷೇತ್ರದ ಹಾಲಿ ಸಂಸದ ಕಪಿಲ್ ಸಿಬಲ್ ವಿರುದ್ಧ ಅಶುತೋಷ್ ಕಣಕ್ಕೆ ಇಳಿಯಲ್ಲಿದ್ದಾರೆ.

ಗುಡಗಾಂವ್ ಕ್ಷೇತ್ರದಿಂದ ಎಎಪಿ ಮುಂಖಡ ಯೋಗೇಂದ್ರ ಯಾದವ್, ಮುಂಬೈ ಈಶಾನ್ಯ ಕ್ಷೇತ್ರದಿಂದ ಮೇಧಾ ಪಾಟ್ಕರ್ ಹಾಗೂ ದೆಹಲಿ ಪಶ್ಚಿಮ ಕ್ಷೇತ್ರದಿಂದ ಜನರಲ್ ಸಿಂಗ್ ಸ್ಪರ್ಧಿಸಲ್ಲಿದ್ದಾರೆ.

ಎಎಪಿ ಅಭ್ಯರ್ಥಿಗಳ ಪಟ್ಟಿ ಇಂತಿದೆ:


ಅಭ್ಯರ್ಥಿ                                              ಕ್ಷೇತ್ರ
ಕುಮಾರ್ ವಿಶ್ವಾಸ್                             ಅಮೇಥಿ
ಅಶುತೋಷ್                                    ಚಾಂದನಿ ಚೌಕ್
ಅಂಜಲಿ ದಮಾನಿಯಾ                          ನಾಗಪುರ
ಹೆಚ್.ಎಸ್ ಫೂಲ್ಕಾ                           ಲೂಧಿಯಾನ
ಮೀರಾ ಸನ್ಯಾಲ್                              ಮುಂಬೈ ದಕ್ಷಿಣ
ಯೋಗೇಂದ್ರ ಯಾದವ್                      ಗುಡಗಾಂವ್
ಮೇಧಾ ಪಾಟ್ಕರ್                           ಮುಂಬೈ ಈಶಾನ್ಯ
ಜನರಲ್ ಸಿಂಗ್                              ದೆಹಲಿ ಪಶ್ಚಿಮ
ವಿಜಯ್ ಪಂಡ್ರೆ                                   ನಾಸಿಕ್
ಡಾ. ಜಯ ಲಾಲ್ ರಾಮ್                 ಲಾಲ್ ಗುಂಜ್
ಅಲೋಕ್ ಅಗರ್‌ವಾಲ್                       ಖಾಂಡ್ವಾ
ಲಿಂಗ್ ರಾಜ್                                  ಬರಘಾಲ್(ಒರಿಸ್ಸಾ)
ಯೋಗೇಶ್ ದಾಲ್‌ಹಿಯಾ                 ಸಹರಾನ್ ಪುರ್
ಸೋಮೇಂದ್ರ ಧಾಕಾ                        ಭಗ್ ಪಟ್
ಮುಕೇಶ್ ತ್ರಿಪಾಠಿ
ಮಾಯಂಕ್ ಗಾಂಧಿ
ಬಾಬಾ ಹರದೇವ್
ಸುಭಾಷ್ ಪಡೆ
ಖಲೀದ್ ಪರ್ವೇಜ್
ಜರ್ನಿಲ್ ಸಿಂಗ್ ಪಟ್ರಾಕರ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.