ಈಗಿನ ಸುದ್ದಿ

'ಬೆಂಕಿಪಟ್ಣ' ಚಿತ್ರಕ್ಕೆ ವಿಜಯ್ ಧ್ವನಿ

Published On :

ಹಾಸನ: ಯುವಪ್ರತಿಭೆ ಟಿ.ಕೆ.ದಯಾನಂದ್ ನಿದರ್ೇಶನದಲ್ಲಿ ಸಕಲೇಶಪುರದ ಸುತ್ತಮುತ್ತಲಿನ ಊರುಗಳಲ್ಲಿ ಚಿತ್ರೀಕರಣ ಮುಗಿಸಿರುವ ಬೆಂಕಿಪಟ್ಣ ಚಿತ್ರವು ಹಾಡುಗಳ ಧ್ವನಿಮುದ್ರಣ ಕಾರ್ಯದಲ್ಲಿ ತೊಡಗಿಕೊಂಡಿದೆ. ಇತ್ತೀಚೆಗೆ ರಾಜೇಶ್ರಾಮನಾಥ್ ಸ್ಟುಡಿಯೋದಲ್ಲಿ ದೂರಿದೂರಿ ಮತ್ತು ಹುಟ್ಟೋದ್ಯಾಕೆ ಸಾಯೋದ್ಯಾಕೆ ಎಂಬ ಎರಡು ಹಾಡುಗಳನ್ನು 'ಜೈಹೋ' ಖ್ಯಾತಿಯ ಹಾಡುಗಾರ ವಿಜಯ್ಪ್ರಕಾಶ್ ಹಾಡಿದರು.

ಹಾಡುಗಳ ಧ್ವನಿಮುದ್ರಣದ ನಂತರ ಹೃದಯಶಿವ ಮತ್ತು ದಿನೇಶ್ಕುಮಾರ್ ಎಸ್.ಸಿ ಬರೆದಿರುವ ಹಾಡುಗಳ ಸಾಹಿತ್ಯ ಮತ್ತು ಸಂಗೀತ ನಿದರ್ೇಶಕ ಸ್ಟೀವ್ಕೌಶಿಕ್ರ ನೆಲದ ಘಮವಿರುವ ಸಂಗೀತ ಸಂಯೋಜನೆಯ ಬಗ್ಗೆ ವಿಜಯ್ಪ್ರಕಾಶ್ ಮೆಚ್ಚುಗೆಯ ಮಾತುಗಳನ್ನಾಡಿದರು.

ಕಿವಿಗಡಚಿಕ್ಕುವ ಎಲೆಕ್ಟ್ರಾನಿಕ್ ಮತ್ತು ಟೆಕ್ನೋ ಸೌಂಡ್ಗಳಿಲ್ಲದೆ ಲೈವ್ ಇನ್ಸ್ಟ್ರುಮೆಂಟ್ಸ್ ಬಳಸಿ ಸಂಯೋಜಿಸಿರುವ ಮಣ್ಣಿನ ಸಂವೇದನೆಯಿರುವ ಅದ್ಭುತ ಹಾಡುಗಳಿವು ಎಂದ ವಿಜಯ್ಪ್ರಕಾಶ್, ಚಿತ್ರದ ಹಾಡುಗಳು ಅದ್ಭುತವಾಗಿ ಮೂಡಿಬರುತ್ತಿರುವ ಬಗ್ಗೆ ಖುಷಿಯಾದರು. ಸೂಫಿ ಮತ್ತು ಜನಪದವನ್ನು ಮೊಟ್ಟಮೊದಲಬಾರಿಗೆ ಹದವಾಗಿ ಬೆರೆಸಿರುವ ಈ ಹಾಡುಗಳ ಸಂಯೋಜನೆಯು ಕೇಳುಗರಿಗೆ ಬೇರೆಯದೇ ರೀತಿಯ ಅನುಭವವನ್ನು ಕಟ್ಟಿಕೊಡುತ್ತದೆ ಎಂದು ಹರ್ಷ ವ್ಯಕ್ತಪಡಿಸಿದ ಅವರು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.  

ಚಿತ್ರದ ಮಾತಿನ ಭಾಗದ ಚಿತ್ರೀಕರಣವನ್ನು ಈಗಾಗಲೇ ಮುಗಿಸಿರುವ ಬೆಂಕಿಪಟ್ಣ ಚಿತ್ರತಂಡವು ಸದ್ಯ ಜೋನಿಹರ್ಷರ ನೇತೃತ್ವದಲ್ಲಿ ಚಿತ್ರದ ಸಂಕಲನ ಕಾರ್ಯದಲ್ಲಿ ನಿರತವಾಗಿದೆ. ಪ್ರತಾಪ್ನಾರಾಯಣ್, ಅನುಶ್ರೀ, ಅರುಣ್ಸಾಗರ್, ಪ್ರಕಾಶ್ ಬೆಳವಾಡಿ, ಶ್ವೇತಾ ಬಡಿಗೇರ್, ಬಿ.ಸುರೇಶ್, ಸಂಪತ್, ಹೊನ್ನವಳ್ಳಿಕೃಷ್ಣ ಮತ್ತಿತರರು ನಟಿಸಿರುವ ಬೆಂಕಿಪಟ್ಣ ಚಿತ್ರವು ಆದಷ್ಟು ಬೇಗ ತೆರೆಗೆ ಬರಲು ಸಜ್ಜುಗೊಳ್ಳುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.