ಈಗಿನ ಸುದ್ದಿ

ಬಾಲಕಿಗೆ ಬೆಂಕಿ: ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಸ್ವಾಮಿಗೆ ಲಾಠಿ ರುಚಿ

Published On :

ಅಥಣಿ: ಭಕ್ತಿಯ ಹೆಸರಿನಲ್ಲಿ ಜನರ ಮುಂದೆಯೇ ಬಾಲಕಿಗೆ ಬೆಂಕಿಯಿಟ್ಟು, ಸತ್ತವಳು ಎದ್ದು ಬರುತ್ತಾಳೆ ಎಂದು ಜನರನ್ನು ನಂಬಿಸಿ, ಪವಾಡ ಮಾಡಲು ಹೋದ ಅಥಣಿಯ ಅಪ್ಪಯ್ಯ ಸ್ವಾಮಿ ಇಂದು ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೆ ತಕ್ಷಣ ಎಚ್ಚೆತ್ತ ಪೊಲೀಸರು ಆತನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಅಥಣಿ ತಾಲೂಕಿನ ಝಂಜರವಾಡ ಮಠದ ಅಪ್ಪಯ್ಯ ಸ್ವಾಮಿ, ಮಹಾಶಿವರಾತ್ರಿ ದಿನದಂದು ಪವಾಡ ಮಾಡುವುದಾಗಿ ಹೇಳಿ, 7 ವರ್ಷದ ಬಾಲಕಿಯನ್ನು 21 ದಿನಗಳ ಕಾಲ ಒಂದು ಗುಹೆಯಲ್ಲಿ ಜೀವಂತ ಕೂಡಿ ಹಾಕಿದ್ದ. ನಿನ್ನೆ ರಾತ್ರಿ ಆ ಗುಹೆಗೆ ಬೆಂಕಿ ಹಚ್ಚಿ ಪವಾಡ ಸೃಷ್ಟಿಸಲು ಮುಂದಾಗಿದ್ದ. ಆದರೆ ವಿಷಯ ತಿಳಿದ ಸ್ಥಳೀಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಬಾಲಕಿಯನ್ನು ರಕ್ಷಿಸಿದ್ದಾರೆ. ಅಲ್ಲದೆ ಭಕ್ತಿಯ ಹೆಸರಿನಲ್ಲಿ ಬಾಲಕಿಯ ಶೋಷಣೆ ಮಾಡಿದ ಅಪ್ಪಯ್ಯ ಸ್ವಾಮಿಯನ್ನು ನಿನ್ನೆ ರಾತ್ರಿಯೇ ಬಂಧಿಸಲಾಗಿತ್ತು. ಇದೇ ವೇಳೆ ಮಠದಲ್ಲಿದ್ದ ಐವರು ಬಾಲಕಿಯರನ್ನು ಸಹ ಜಿಲ್ಲಾಡಳಿತ ವಶಕ್ಕೆ ತೆಗೆದುಕೊಂಡಿದೆ.

ಹೆಚ್ಚಿನ ವಿಚಾರಣೆಗಾಗಿ ಐಗಳಿ ಪೊಲೀಸ್ ಠಾಣೆಯಿಂದ ಮಠಕ್ಕೆ ಕರೆದೊಯ್ಯುತ್ತಿದ್ದಾಗ ಅಪ್ಪಯ ಸ್ವಾಮಿ ಕಬ್ಬಿನ ಗದ್ದೆಯೊಳಗೆ ತಪ್ಪಿಸಿಕೊಳ್ಳುವ ವಿಫಲ ಯತ್ನ ನಡೆಸಿದೆ.

ಪೊಲೀಸರು ತಕ್ಷಣ ಬಾಲಕಿ ನಿಜಲಿಂಗಮ್ಮ ದೇವಿಯನ್ನು ಅಥಣಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕಿಯನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಲಾಗಿದ್ದು, ಆಕೆ ಜ್ವರದಿಂದ ಬಳಲುತ್ತಿರುವುದಾಗಿ ಆಸ್ಪತ್ರೆಯ ವೈದ್ಯಾಧಿಕಾರಿ ಪುಸ್ಪಲತಾ ಸುಣ್ಣದಕಲ್ ಅವರು ತಿಳಿಸಿದ್ದಾರೆ.

ಇಂದು ಬೆಳಗ್ಗೆ ಬೆಳಗಾವಿ ಜಿಲ್ಲಾಧಿಕಾರಿ ಜಯರಾಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಗುಪ್ತ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ಬಾಲಕಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡುವಂತೆ ನಮ್ಮ ವೈದ್ಯರಿಗೆ ಸೂಚಿಸಿದ್ದೇವೆ. ಬಾಲಕಿ ಚೇತರಿಸಿಕೊಂಡ ನಂತರ ಆಕೆಯನ್ನು ಸರ್ಕಾರಿ ಹಾಸ್ಟೆಲ್‌ಗೆ ಸೇರಿಸಲಾಗುವುದು. ಸಂಪೂರ್ಣವಾಗಿ ಗುಣಮುಖವಾದ ಬಳಿಕ ಆಕೆಯ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.