ಈಗಿನ ಸುದ್ದಿ

'ಸಿಂಧುರತ್ನ' ಸಬ್ಮೆರಿನ್ನಲ್ಲಿ ಹೊಗೆ, ಐವರು ಅಸ್ವಸ್ಥ

'ಸಿಂಧುರತ್ನ' ಸಬ್ಮೆರಿನ್ನಲ್ಲಿ ಹೊಗೆ, ಐವರು ಅಸ್ವಸ್ಥ
Published On :

ಮುಂಬೈ: ಇತ್ತೀಚೆಗೆ ಭಾರತೀಯ ನೌಕಾದಳಕ್ಕೆ ಸೇರ್ಪಡೆಯಾದ ಸಿಂಧುರತ್ನ ಜಲಾಂತರ್ಗಾಮಿ ನೌಕೆಯಲ್ಲಿ ಬುಧವಾರ ಬೆಳಗ್ಗೆ ಹೊಗೆ ಕಾಣಿಸಿಕೊಂಡಿದ್ದು, ಈ ಘಟನೆಯಲ್ಲಿ ಐವರು ನಾವಿಕರು ತೀವ್ರ ಅಸ್ವಸ್ಥರಾಗಿದ್ದಾರೆ.

ಮುಂಬೈನ ಕರಾವಳಿಯಿಂದ ಸುಮಾರು 50 ರಿಂದ 60 ಕಿ.ಮೀ ದೂರದಲ್ಲಿ ನಿಂತಿದ್ದ ಜಲಾಂತರ್ಗಾಮಿ ನೌಕೆಯಲ್ಲಿ ಸಣ್ಣ ಸ್ಫೋಟ ಕಾಣಿಸಿಕೊಂಡಿದೆ. ಇದರಿಂದಾಗಿ ಸಬ್ಮೆರಿನ್ನಲ್ಲಿ ತೀವ್ರವಾಗಿ ಹೊಗೆ ಕಾಣಿಸಿಕೊಂಡ್ದಿದ್ದು, ದಟ್ಟ ಹೊಗೆಯಿಂದಾಗಿ ಐವರು ನಾವಿಕರು ತೀವ್ರವಾಗಿ ಅಸ್ವಸ್ಥರಾಗಿದ್ದಾರೆ. ಇನ್ನುಳಿದಂತದೆ ಇಬ್ಬರು ನಾವಿಕರು ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ಕಾರ್ಯಚರಣೆ ಆರಂಭಿಸಲಾಗಿದೆ ಎಂದು ನೌಕಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.

ದಟ್ಟ ಹೊಗೆಯಿಂದಾಗಿ ತೀವ್ರ ಅಸ್ವಸ್ಥರಾಗಿದ್ದ ಐವರು ನಾವಿಕರನ್ನು ಕೂಡಲೆ ಮುಂಬೈನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸಿಂಧುರತ್ನ ಜಲಾಂತರ್ಗಾಮಿ ಸುಮಾರು 3 ಸಾವಿರ ಟನ್ ತೂಕ ಹೊಂದಿದ್ದು, ಇದನ್ನು ಯುದ್ಧೋಪಕರಣಗಳನ್ನು ಪರೀಕ್ಷಿಸಲು ಮಾತ್ರ ಬಳಸಿಕೊಳ್ಳಲಾಗುತ್ತಿತ್ತು. ಹೀಗಾಗಿ ಸಬ್ಮೆರಿನ್ನಲ್ಲಿ ಯಾವುದೇ ಯುದ್ಧ ಸಾಮಾಗ್ರಿಗಳು ಇಲ್ಲದಿದ್ದರು, ಸ್ಫೋಟ ಸಂಭವಿಸಿರುವುದು ಆಂತಕಕ್ಕೀಡು ಮಾಡಿದ್ದು, ನೌಕಸೇನೆ ತನಿಖೆಗೆ ಆದೇಶಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.