ಈಗಿನ ಸುದ್ದಿ

ಎಎಪಿ 2ನೇ ಪಟ್ಟಿ ಬಿಡುಗಡೆ, ಶೀಲಾ ದಿಕ್ಷಿತ್ ಪುತ್ರನ ವಿರುದ್ಧ ಗಾಂಧಿ ಮೊಮ್ಮಗ

ಎಎಪಿ 2ನೇ ಪಟ್ಟಿ ಬಿಡುಗಡೆ, ಶೀಲಾ ದಿಕ್ಷಿತ್ ಪುತ್ರನ ವಿರುದ್ಧ ಗಾಂಧಿ ಮೊಮ್ಮಗ
Published On :

ನವದೆಹಲಿ: ಲೋಕಸಭೆ ಚುನಾವಣೆಗೆ ಸಜ್ಜಾಗಿರುವ ಆಮ್ ಆದ್ಮಿ ಪಕ್ಷ(ಎಎಪಿ) ಗುರುವಾರ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಮಗ ಸಂದೀಪ್ ದೀಕ್ಷಿತ್ ವಿರುದ್ಧ ಮಹಾತ್ಮ ಗಾಂಧಿ ಮೊಮ್ಮಗ ರಾಜ್‌ಮೋಹನ್ ಗಾಂಧಿ ಅವರನ್ನು ಕಣಕ್ಕಿಳಿಸಿದೆ.

ಮತ್ತೊಂದೆಡೆ ಹರಿಯಾಣದ ರೋಹ್ತಕ್‌ನಲ್ಲಿ ಮುಖ್ಯಮಂತ್ರಿ ಭುಪೇಂದ್ರರ್ ಸಿಂಗ್ ಹೂಡಾ ಮಗ ದಿಪೇಂದರ್ ಸಿಂಗ್ ಹೂಡಾ ವಿರುದ್ಧ ನವೀನ್ ಜೈಹಿಂದ್ ಅವರನ್ನು ಕಣಕ್ಕಿಳಿಸಲು ಎಎಪಿ ತೀರ್ಮಾನಿಸಿದೆ.

ಎಎಪಿ ತನ್ನ ಅಭ್ಯರ್ಥಿಗಳ 30 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮುಂದಿನ ಐದು ದಿನಗಳಲ್ಲಿ ದೇಶಾದ್ಯಂತ ಎಎಪಿಯ ಎಲ್ಲಾ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಎಎಪಿ ಹಿರಿಯ ನಾಯಕ ಮನೀಶ್ ಸಿಸೋಡಿಯಾ ಅವರು ತಿಳಿಸಿದ್ದಾರೆ.

ಎಎಪಿ ಇಂದು ಬಿಡುಗಡೆ ಮಾಡಿರುವ 2ನೇ ಪಟ್ಟಿಯ ವಿವರ:

ಅಭ್ಯರ್ಥಿ ಹೆಸರು                            ಕ್ಷೇತ್ರ                       
ರಾಜ್‌ಮೋಹನ್ ಗಾಂಧಿ               ದೆಹಲಿ ಪೂರ್ವ       
ಡಾ. ಧರ್ಮವೀರ್ ಭಾರ್ತಿ              ಪಾಟಿಯಾಲ
ಮೇಜರ್ ಸುರೇಂದ್ರ ಪುನಿಯ            ಶೀಕರ್
ಡಾ. ರಾಝ್‌ಭಟ್                           ಶ್ರೀನಗರ್
ಹೆಚ್. ಸಿ ಆರ್ಯ                            ಅಲ್ಮೊರ
ಡಾ. ರಾಜನ್ ಸುಶಾಂತ್                  ಕಾಂಗ್ರಾ
ಸಮೀನಾ ಖಾನ್                             ಸಾಂಗ್ಲಿ
ಭಾಗವತ್ ರಾಜ್‌ಪೂತ್                    ವಿದಿಶಾ
ಜನರಲ್ ರಾಜ್ ಕದ್ಯಾನ್                 ಜುನ್ಜುನೋ
ಅತುಲ್‌ಭಾಯ್ ಗೋವಿಂದ್‌ಭಾಯ್    ಜುನಾಘರ್  
ಬಲ್ವೀಂದರ್ ಕೌರ್                          ಕುರುಕ್ಷೇತ್ರ
ಪೂನಂ ಚಂದ್ ರಾಥಿ                        ಸಿರ್ಸಾ  
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.