ಈಗಿನ ಸುದ್ದಿ

ಯುವರ್ ಆನರ್... ನಾನು ಸತ್ಯವನ್ನೇ ಹೇಳುತ್ತೇನೆ

ಯುವರ್ ಆನರ್... ನಾನು ಸತ್ಯವನ್ನೇ ಹೇಳುತ್ತೇನೆ
Published On :

ನಮ್ಮ ಸುತ್ತಮುತ್ತಲ ಜನ, ಸ್ನೇಹಿತರು, ಹೆಚ್ಚಾಗಿ ವಿದ್ಯಾರ್ಥಿಗಳು, ತಮ್ಮ ಅತೀ ಹೆಚ್ಚಿನ ಸಮಯವನ್ನು ಪ್ರಶ್ನೆ ಮತ್ತು ಉತ್ತರಗಳ ನಡುವೆಯೇ ಕಳೆಯುತ್ತಾರೆ. ಹೀಗೆ ಬರುವ ಈ ಪ್ರಶ್ನೋತ್ತರಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಹಲವಾರು ಸ್ವಾರಸ್ಯಕರವಾದ ಪ್ರಶ್ನೋತ್ತರಗಳು ನಮ್ಮ ಮಧ್ಯೆ ಹಾದು ಹೋಗುತ್ತದೆ. ಅಂತಹ ಕೆಲವೊಂದು ಫನ್ನಿ ಪ್ರಶ್ನೋತ್ತರಗಳು ಇಲ್ಲಿವೆ. ಯಾರು, ಯಾರಿಗೆ, ಯಾವಾಗ ಹೇಳಿದರು ಎನ್ನುವುದರ ಬಗ್ಗೆ ತಲೆಕೆಡಿಸಿಕೊಳ್ಳದೆ ಸುಮ್ಮನೆ ಓದಿಕೊಳ್ಳಿ....

ಪ್ರಶ್ನೆ:- ಮೊನ್ನೆ ನಿಮ್ಮ ಮಾವ ಸತ್ತುಹೋದ್ರು ಅಂತ ರಜೆ ತಕೊಂಡ್ರಲ್ಲ?
ಉತ್ರ:- ಹೌದು!
ಪ್ರಶ್ನೆ:- ಅವರು ಇವಾಗ ಚೆನ್ನಾಗಿದ್ದಾರಾ?!!!
=
ಪ್ರಶ್ನೆ:- ಹಣ ಎಂದರೇನು?
ಉತ್ರ:-  ನಾನು ಬಡವ ಸ್ವಾಮಿ, ನನಗೆ ಅದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.
=
ಪ್ರಶ್ನೆ:- ಕಂಪ್ಯೂಟರ್ ಕಂಡು ಹಿಡಿದವನು ಯಾರು?
ಉತ್ರ - ಒಬ್ಬ ವಿಜ್ಞಾನಿ
=
ಪ್ರಶ್ನೆ:- ಹದಿನೈದು ಹಣ್ಣುಗಳ ಹೆಸರುಬರೆಯಿರಿ?
ಉತ್ರ:- ಮೂಸಂಬಿ, ಕಲ್ಲಂಗಡಿ, ಆಪಲ್ ಮತ್ತು ಒಂದು ಡಜನ್ ಬಾಳೆಹಣ್ಣು
=
ಪ್ರಶ್ನೆ:- ಪ್ರಪಂಚದಲ್ಲಿ ಒಟ್ಟು ಎಷ್ಟುದೇಶಗಳಿವೆ?
ಉತ್ರ: - ಪ್ರಪಂಚದಲ್ಲಿ ಇರೋದು ಒಂದೇ ದೇಶ, ಅದು ಭಾರತ... ಮಿಕ್ಕಿದ್ದೆಲ್ಲಾ ವಿದೇಶ.
=
ಪ್ರಶ್ನೆ:- ಈ ಛತ್ರಿ ಬಾಳಿಕೆ ಬರುತ್ತಾ?
ಉತ್ರ:- ಖಂಡಿತಾ, ಆದ್ರೆ ನೀರಿಗೆ ಹಾಕ್ಬೇಡಿ
=
ಪ್ರಶ್ನೆ:- ವಾಸ್ಕೋಡಿಗಾಮ ಭಾರತಕ್ಕೆ ಯಾಕೆ ಬಂದ?
ಉತ್ರ:- ನನ್ನ ಫೇಲ್ ಮಾಡೋಕ್ಕೆ
=
ಪ್ರಶ್ನೆ:- ಕಾಯಿಸಿದಾಗ ಘನ ವಸ್ತುವಾಗಿ ಪರಿವರ್ತನೆ ಹೊಂದುವ ದ್ರವ ಯಾವುದು?
ಉತ್ರ: - ಇಡ್ಲಿ, ದೋಸೆ
=
ಪ್ರಶ್ನೆ:- ನಿನ್ನ ಚೂಡಿದಾರ ತುಂಬಾ ಚೆನ್ನಾಗಿದೆ, ಎಲ್ಲಿ ತಕೊಂಡೆ?'
ಉತ್ರ:- ಬಟ್ಟೆ ಅಂಗಡಿಯಲ್ಲಿ!!!
=
ಪ್ರಶ್ನೆ:- ರಾವಣನಿಗೆ ಹತ್ತು ತಲೆ ಇತ್ತು ಅಂದ್ರಲ್ಲ?
ಉತ್ರ:- ಹೌದು, ಏನಿವಾಗ?
ಪ್ರಶ್ನೆ:- ಎಡಗಡೆ ಎಷ್ಟಿದೆ, ಬಲಗಡೆ ಎಷ್ಟಿದೆ?!
=
ಪ್ರಶ್ನೆ:- 1983ರ ಕ್ರಿಕೆಟ್ ವಿಶ್ವಕಪ್ ಯಾರಿಗೆ ಸಿಕ್ತು?
ಉತ್ರ: - ಗೆದ್ದವರಿಗೆ
=
ಪ್ರಶ್ನೆ:- ನನಗೂ ನಿನಗೂ ಇರುವ ವ್ಯತ್ಯಾಸವೇನು?
ಉತ್ರ:- ಒಂದೇ ಒಂದು ವ್ಯತ್ಯಾಸ. ಅದೆಂದರೆ, ನಾನು ಹುಚ್ಚನಲ್ಲ.
=
ಪ್ರಶ್ನೆ:- ಕ್ರಿಕೆಟ್ ಬಗ್ಗೆ ಅತೀ ಚಿಕ್ಕದಾದ ಒಂದು ಪ್ರಬಂಧ ಬರೆಯಿರಿ
ಉತ್ರ:- ಮಳೆ ಬಂದ ಕಾರಣ ಪಂದ್ಯವನ್ನು ರದ್ದುಗೊಳಿಸಲಾಗಿದೆ
=
ಪ್ರಶ್ನೆ:- ಈ ಸೇಬನ್ನು ಎರಡು ಭಾಗ ಮಾಡಿ ಇಬ್ಬರೂ ತಿನ್ನೋಣವೇ?
ಉತ್ರ: ಬೇಡ, ನಾಲ್ಕು ಭಾಗ ಮಾಡಿ ಎರಡೆರಡು ತಿನ್ನೋಣ, ನಂಗೆ ತುಂಬಾ ಹಸಿವಾಗ್ತಿದೆ.
=
ಪ್ರಶ್ನೆ:- ಮಹಾತ್ಮ ಗಾಂಧೀಜಿ ಸಾಯದೇ ಇದ್ದಿದ್ದರೆ?
ಉತ್ರ:- ಈಗಲೂ ಬದುಕಿರುತ್ತಿದ್ದರು.
=
ಪ್ರಶ್ನೆ:- ಕ್ಲೋರೈಡ್ ಅನ್ನು ಕಾಯಿಸಿದಾಗ ಏನಾಗುತ್ತದೆ?
ಉತ್ರ:- ಕಾಯುತ್ತದೆ.
=
ಪ್ರಶ್ನೆ:- ಮೊಗಲರು ಎಲ್ಲಿಯವರೆಗೆ ರಾಜ್ಯಭಾರ ಮಾಡಿದರು?
ಉತ್ರ:- ಸುಮಾರು 14ನೇ ಪುಟದಿಂದ 22ನೇ ಪುಟಗಳವರೆಗೆ
=
ಪ್ರಶ್ನೆ:- ನೀರಿನಿಂದ ಯಾಕೆ ಕರೆಂಟ್ ತೆಗೀತಾರೆ?
ಉತ್ರ:-ಸ್ನಾನ ಮಾಡೋವಾಗ ಶಾಕ್ ಹೊಡೆಯುತ್ತೆ ಅಂತ!
=
ಪ್ರಶ್ನೆ:- ಮಾವು ಹೆಚ್ಚಾಗಿ ಎಲ್ಲಿ ಬೆಳೆಯುತ್ತದೆ?
ಉತ್ರ:- ಮರದಲ್ಲಿ
=
ಪ್ರಶ್ನೆ:- ಭೂಮಿ ಗುಂಡಗಿದೆ ಎನ್ನುವುದನ್ನು ಹೇಗೆ ನಿರೂಪಿಸುವಿರಿ?
ಉತ್ರ:- ಭೂಮಿ ಗುಂಡಗಿದೆ ನಿಜ, ಹಾಗಂತ ನಮ್ಮೇಷ್ಟ್ರು ಹೇಳಿದ್ರು. ಅವರು ಯಾವತ್ತೂ ಸುಳ್ಳು ಹೇಳುವುದಿಲ್ಲ.
=
ಪ್ರಶ್ನೆ:- ಏಷ್ಯಾದ ಪ್ರಥಮ ಹಾಕಿ ಪಂದ್ಯ ಎಲ್ಲಿ ನಡೆಯಿತು?
ಉತ್ರ:- ಹಾಕಿ ಕ್ರೀಡಾಂಗಣದಲ್ಲಿ
=
ಪ್ರಶ್ನೆ:- ಶ್ರೀಕೃಷ್ಣ ಎಷ್ಟು ಹುಡುಗಿಯರನ್ನು ಮದ್ವೆ ಆಗಿದ್ದ?
ಉತ್ರ:- ಅವನು ಮದ್ವೆಯಾಗಿರೋರೆಲ್ಲಾ ಹುಡುಗಿಯರೇ.
=
ಪ್ರಶ್ನೆ:- ಮಾತು ಬರದವರನ್ನು ಮೂಗ ಎಂದು ಕರೆದರೆ, ಕಿವಿ ಕೇಳಿಸದವನನ್ನು ಹೇಗೆ ಕರೆಯುತ್ತಾರೆ?
ಉತ್ರ:- ಹೇಗೆ ಬೇಕಾದರೂಕರೆಯಬಹುದು, ಏಕೆಂದರೆ ಅವರಿಗೆ ಕೇಳಿಸಲ್ಲ.
=
ಪ್ರಶ್ನೆಪತ್ರಿಕೆಯೊಂದರ ಕೊನೆಯ ಪ್ರಶ್ನೆ:- ಛಾಲೆಂಜ್ ಅಂದರೆ ಏನು?
ಹರಿ ಬರೆದ ಉತ್ತರ:- ಧಮ್ ಇದ್ರೆ ಪಾಸ್ ಮಾಡಿ.

-ಪಂಚರಂಗಿ ಮಂಗಳೂರು
pancharangimanglore@gmail.com

(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555 ಸಖಿ ಖರೀದಿಗಾಗಿ http://www.magzter.com/IN/Express-Network-Private-Limited/Sakhi/Women%27s-Interest/40308 ಗೆ ಭೇಟಿನೀಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.