ಈಗಿನ ಸುದ್ದಿ

ನಾಳೆ 'ಶಬರಿಯ ಅವಸರ', 'ಹರಿವ ತೊರೆ' ಪುಸ್ತಕ ಬಿಡುಗಡೆ

Published On :

ಬೆಂಗಳೂರು: ಅಂಕಿತ ಪುಸ್ತಕ ಪ್ರಕಾಶನಾಲಯ ಹೊರ ತರುತ್ತಿರುವ 'ಶಬರಿಯ ಅವಸರ ಮತ್ತು ಹರಿವ ತೊರೆ'ಪುಸ್ತಕ ಬಿಡುಗಡೆ ಸಮಾರಂಭ ನಾಳೆ ಬಸವನಗುಡಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನ ವಾಡಿಯ ಸಭಾಂಗಣದಲ್ಲಿ ಬೆಳಗ್ಗೆ 10.30ಕ್ಕೆ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಲೇಖಕಿ ಚೇತನಾ ತೀರ್ಥಹಳ್ಳಿಯವರ 'ಶಬರಿಯ ಅವಸರ' ಕವನ ಸಂಕಲನ ಹಾಗೂ ಕವಿ ಹೃದಯಶಿವ ಅವರ 'ಹರಿವ ತೊರೆ' ಕಿರುಗವಿತೆ ಪುಸ್ತಕಗಳು ಬಿಡುಗಡೆಗೊಳ್ಳಲಿದೆ.

ಜೊತೆಗೆ ಎಸ್. ಅನಂತನಾರಾಯಣ ಅವರು ಅನುವಾದಿಸಿರುವ ದೊಡ್ಡಕಾಡಿನಲ್ಲಿ ಪುಟ್ಟಮನೆ, ಹುಲ್ಲುಗಾವಲಿನಲ್ಲಿ ಪುಟ್ಟಮನೆ, ರೈತರ ಹುಡುಗ, ಪ್ಲಂ ನದಿಯ ತೀರದಲ್ಲಿ, ಚಳಿಯ ಸುಳಿಯಲ್ಲಿ, ಸಿಲ್ವರ್ ಲೇಕ್ ದಡದಲ್ಲಿ, ಹುಲ್ಲುಗಾವಲಿನಲ್ಲಿ ಪುಟ್ಟ ಪಟ್ಟಣ, ಆ ಸೊಗಸಿನ ಬಂಗಾರದ ದಿನಗಳು, ಹಾಗೂ ಕೆ.ಪಿ. ಈಶಾನ್ಯೆ ಅನುವಾದಿಸಿರುವ ಮೊದಲ ನಾಲ್ಕು ವರ್ಷಗಳು ಪುಸ್ತಕಗಳು ಬಿಡುಗಡೆಗೊಳ್ಳಲಿವೆ.

ಸಾಹಿತಿ ಡಾ. ಸಿದ್ಧಲಿಂಗಯ್ಯ ಅವರು ಪುಸ್ತಕ ಬಿಡುಗಡೆ ಮಾಡಲಿದ್ದು, ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಲೇಖಕ ಜೋಗಿ ಅವರು ಭಾಗವಹಿಸಲಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.