ಈಗಿನ ಸುದ್ದಿ

ಅಮೆರಿಕಾದಲ್ಲಿ ಭಾರತೀಯ ಚಿತ್ರ ಪ್ರದರ್ಶನಕ್ಕೆ ನಿರ್ಬಂಧ

ಅಮೆರಿಕಾದಲ್ಲಿ ಭಾರತೀಯ ಚಿತ್ರ ಪ್ರದರ್ಶನಕ್ಕೆ ನಿರ್ಬಂಧ
Published On :

ನವದೆಹಲಿ: ಅಮೆರಿಕಾದ ಮೇಲೆ ಮತ್ತೊಮ್ಮೆ ಒತ್ತಡ ಹೇರಲು ಮುಂದಾಗಿರುವ ಭಾರತ, ಅಮೆರಿಕಾದ ಚಿತ್ರಮಂದಿಗಳಲ್ಲಿ ಭಾರತೀಯ ಸಿನಿಮಾಗಳನ್ನು ಪ್ರದರ್ಶಿಸದಂತೆ ಅಮೆರಿಕಾದ ಭಾರತೀಯ ರಾಯಭಾರಿ ಕಚೇರಿಗೆ ಶನಿವಾರ ಸೂಚನೆ ನೀಡಿದೆ.

ಅಮೆರಿಕಾದ ಚಿತ್ರಮಂದಿರಗಳಲ್ಲಿ ಅನುಮತಿ ಇಲ್ಲದೆ ಭಾರತೀಯ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಇದನ್ನು ತಕ್ಷಣ ನಿಲ್ಲಿಸಬೇಕು. ಅಲ್ಲದೆ ಅನುಮತಿ ಇಲ್ಲದೆ ಯಾವುದೇ ಸಿನಿಮಾಗಳಕ್ಕೆ ಪ್ರದರ್ಶನಕ್ಕೆ ಅವಕಾಶ ನೀಡದಂತೆ ರಾಯಭಾರಿ ಕಚೇರಿಗೆ ನೋಟಿಸ್ ನೀಡಿದೆ. ಅಲ್ಲದೆ ಜನವರಿ 20ರೊಳಗೆ ನವಿಕೃತ ಪರವಾನಗಿ ನೀಡುವಂತೆ ಸೂಚಿಸಿದೆ.

ಭಾರತೀಯ ಉಪ ರಾಯಭಾರಿ ದೇವಯಾನಿ ಖೋಬ್ರಾಗಡೆ ಅವರಿಗೆ ಸೂಕ್ತ ನ್ಯಾಯ ಸಿಗಬೇಕು. ಅಲ್ಲದೆ ಅವರನ್ನು ಅಮೆರಿಕಾ ಕ್ಷಮಾಪಣೆ ಕೇಳಬೇಕು ಎಂದು ಭಾರತ ಪಟ್ಟುಹಿಡಿದಿದೆ.

ವೀಸಾ ವಂಚನೆ ಪ್ರಕರಣದಲ್ಲಿ ಅಮೆರಿಕಾ ಪೊಲೀಸರು ದೇವಯಾನಿ ಅವರನ್ನು ಬಂಧಿಸಿದ್ದು, ವಿಚಾರಣೆ ನೆಪದಲ್ಲಿ ಖೋಬ್ರಾಗಡೆ ಅವರನ್ನು ಹೀನಾಯವಾಗಿ ನಡೆಸಿಕೊಂಡಿದ್ದರು. ಅಲ್ಲದೆ ಆಕೆಯನ್ನು ಮಾದಕ ದ್ರವ್ಯ ವ್ಯಸನಿಗಳು, ಮತ್ತು ಕ್ರಿಮಿನಲ್‌ಗಳನ್ನು ಇರಿಸಿದ್ದ ಕೋಣೆಯಲ್ಲಿ ಇರಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.