ಈಗಿನ ಸುದ್ದಿ

ಬಾಂಗ್ಲಾ ಚುನಾವಣೆ; ಗೆಲವು ಸಾಧಿಸಿದ ಆವಾಮಿ ಲೀಗ್

Published On :

ಢಾಕಾ: ನಿರೀಕ್ಷೆಯಂತೆ ಬಾಂಗ್ಲಾದೇಶದ ಚುನಾವಣೆಯಲ್ಲಿ ಅವಾಮಿ ಲೀಗ್ ಪಕ್ಷ ವಿಜಯ ಸಾಧಿಸಿದೆ. ಬಾಂಗ್ಲಾದೇಶದ ಖಲೇದಾ ಜಿಯಾ ಅವರ ನೇತೃತ್ವದ ನ್ಯಾಷನಲ್ ಪಾರ್ಟಿಯನ್ನು ಪರಾಭವಗೊಳಿಸಿ ಅವಾಮಿ ಲೀಗ್ ಪಕ್ಷ ಮತ್ತೊಮ್ಮೆ ಗದ್ದುಗೆಗೇರಿದೆ.

ಚುನಾವಣೆ ದಿನದಂದು ಬಾಂಗ್ಲಾದಲ್ಲಿ ಬಾರೀ ಸಂಘರ್ಷ ನಡೆದಿದ್ದು, ಸುಮಾರು 21 ಜನರು ಸಾವಿಗೀಡಾಗಿದ್ದರು. ಚುನಾವಣಾ ಪೂರ್ವ ನಡೆದ ಗಲಭೆಯಲ್ಲಿ ಸಾವಿಗೀಡಾದವರು ವಿಪಕ್ಷದ ಕಾರ್ಯಕರ್ತರೇ ಆಗಿದ್ದರು.

390 ಸೀಟುಗಳಲ್ಲಿ ಅರ್ಧದಷ್ಟು ಸೀಟುಗಳಲ್ಲಿ ಅವಾಮಿ ಪಕ್ಷ ಮತ್ತು  ಮಿತ್ರ ಪಕ್ಷವಾದ ಜತೀಯ ಪಕ್ಷ ಸ್ಪರ್ಧಿಸಿದ್ದು ,ಹೆಚ್ಚಿನ ಸೀಟುಗಳಲ್ಲಿ ಜಯ ಸಾಧಿಸುವಲ್ಲಿ ಅವಾಮಿ ಪಕ್ಷ ಸಫಲವಾಗಿದೆ.

ಆದಾಗ್ಯೂ, ಚುನಾವಣಾ ಆಯೋಗವು ಅಧಿಕೃತವಾಗಿ ಫಲಿತಾಂಶವನ್ನು ಈ ಕ್ಷಣದ ವರೆಗೆ ಪ್ರಕಟಿಸದೇ ಇದ್ದರೂ, ಮಾಧ್ಯಮ ವರದಿಗಳ  ಪ್ರಕಾರ ಪ್ರಧಾನಿ ಶೇಖ್ ಹಸೀನಾ ಅವರ ಆವಾಮಿ ಲೀಗ್ ಪಕ್ಷ ಸ್ಪರ್ಧಿಸಿದ 147 ಸೀಟುಗಳಲ್ಲಿ 107ನ್ನು ಗೆದ್ದುಕೊಂಡಿದೆ.

ಅದೇ ವೇಳೆ  ಅವಾಮಿ ಲೀಗ್ ಮಿತ್ರ ಪಕ್ಷವಾದ ಜತೀಯ ಪಕ್ಷ 14 ಸೀಟುಗಳನ್ನು ಗೆದ್ದುಕೊಂಡಿದ್ದು, ಇತರ ಪಕ್ಷ ಮತ್ತು ಸ್ವತಂತ್ರ ಅಭ್ಯರ್ಥಿಗಳು 13 ಸೀಟುಗಳನ್ನು ಗಳಿಸಿಕೊಂಡಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.