ಜನರು ಅತೀ ಖಿನ್ನರಾಗಿರುವ ದಿನ ಇವತ್ತಂತೆ

ನ್ಯೂಯಾರ್ಕ್: ಜನವರಿ 6, ಸೋಮವಾರ ಅಂದ್ರೆ ಇವತ್ತು ಜನರು ಅತೀ ಖಿನ್ನರಾಗಿರುವ ದಿನವಂತೆ. ಅರೆ ಹೌದಾ? ಅಂತಾ ಹುಬ್ಬೇರಿಸ್ಬೇಡಿ. ಯಾಕೆಂದ್ರೆ ಹೊಸ ವರುಷದಲ್ಲಿ ಹಾಗೆ ಮಾಡ್ತೇವೆ, ಹೀಗೆ ಮಾಡ್ತೇವೆ ಎಂದು ಸಂಕಲ್ಪ ತೆಗೆದುಕೊಂಡಿರುವ ಜನರು ಇದೇ ದಿನ ತಮ್ಮ ಸಂಕಲ್ಪದ ಬಗ್ಗೆ ಮರೆತು ಬಿಡ್ತಾರೆ ಅನ್ನೋ ಸತ್ಯವನ್ನು ನ್ಯೂಯಾರ್ಕ್ನ ಸಂಶೋಧಕರು ಪತ್ತೆ ಹಚ್ಚಿದ್ದಾರೆ.
ಪ್ರೋಟೀನ್ ಪಾನೀಯ ಅಪ್ಬೀಟ್ ಈ ವಿಷಯದ ಬಗ್ಗೆ ಸಮೀಕ್ಷೆಯನ್ನು ನಡೆಸಿದ್ದು, ಕಳೆದ ಮೂರು ವರ್ಷಗಳಲ್ಲಿ ಜನವರಿ ತಿಂಗಳಲ್ಲಿ ಜನರು ಮಾಡಿದ 2 ಮಿಲಿಯನ್ ಟ್ವೀಟ್ಗಳನ್ನಾಧರಿಸಿ ಈ 'ಸತ್ಯ' ಶೋಧನೆ ಮಾಡಲಾಗಿದೆ.
ತಮ್ಮ ಲವ್ ಲೈಫಲ್ಲಿ ಸಂಕಟ ಅನುಭವಿಸುತ್ತಿರುವವರು, ಹೊಸ ಸಂಗಾತಿಗಾಗಿ ಹುಡುಕಾಟ ನಡೆಸುತ್ತಿರುವವರು ಮತ್ತು ವೃತ್ತಿಯಲ್ಲಿ ಸಂತೃಪ್ತಿ ಇಲ್ಲದೇ ಇದ್ದವರು ಈ ರೀತಿ ಸಂಕಲ್ಪವನ್ನು ಅರ್ಧದಲ್ಲೇ ಬಿಟ್ಟು ಬಿಡುತ್ತಾರೆ ಎಂಬುದು ಈ ಸಂಶೋಧನೆಯಿಂದ ಸಾಬೀತಾಗಿದೆ.
ಜನವರಿ ತಿಂಗಳ ಮೊದಲ ಸೋಮವಾರ ಜನರಿಗೆ ತಪ್ಪಿತಸ್ಥ ಭಾವನೆ ಕಾಡೋಕೆ ಶುರುವಾಗುತ್ತಂತೆ. ಇನ್ನು ಕೆಲವರಿಗೆ ಸುಸ್ತು, ಇನ್ನು ಕೆಲವರಿಗೆ ಹೊಟ್ಟೆ ಬಾಕರಂತೆ ತಿನ್ನಬೇಕು ಅಂತ ಅನಿಸುತ್ತದಂತೆ.
ರಿಲೇಷನ್ಶಿಪ್ ಎಕ್ಸ್ ಪರ್ಟ್ಗಳ ಪ್ರಕಾರ ಹಬ್ಬಗಳಲ್ಲಿ ಗುಂಡು ಪಾರ್ಟಿ ಮಾಡುವುದೂ ಮದುವೆ ಸಂಬಂಧ ಮುರಿದು ಬೀಳಲು ಕಾರಣವಾಗುತ್ತದಂತೆ. ಅಂದಹಾಗೆ ಇದೆಲ್ಲವನ್ನೂ ಹೇಳಿದ್ದು ನ್ಯೂಯಾರ್ಕ್ನ ತಜ್ಞರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


