ತೆಲುಗು ಚಿತ್ರನಟ ಉದಯ್ಕಿರಣ್ ಆತ್ಮಹತ್ಯೆ

ಹೈದರಾಬಾದ್: ತೆಲುಗು ಚಿತ್ರನಟ ಉದಯ್ ಕಿರಣ್ ಅವರು ಭಾನುವಾರ ತಡರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ.
33 ವರ್ಷದ ಉದಯ್ ಕಿರಣ್ ಅವರು ನಿನ್ನೆ ರಾತ್ರಿ ಶ್ರೀನಗರದಲ್ಲಿರುವ ತಮ್ಮ ಫ್ಲಾಟ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ನಟನನ್ನು ಕೂಡಲೇ ಅವರ ಪತ್ನಿ ವಿಶಿತಾ ಹಾಗೂ ನೆರೆ ಮನೆಯವರು ಸೇರಿ ಉದಯ್ ಕಿರಣ್ ಅವರನ್ನು ಜುಬ್ಲಿಹಿಲ್ಸ್ನಲ್ಲಿರುವ ಅಪೋಲೊ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ದಾರಿ ಮಧ್ಯಯೇ ಉದಯ್ ಕಿರಣ್ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೌಟುಂಬಿಕ ಕಾರಣವೇ ಉದಯ್ ಆತ್ಮಹತ್ಯೆಗೆ ಕಾರಣ ಎಂದು ತಿಳಿದು ಬಂದಿದ್ದು, ಘಟನೆ ನಡೆದಾಗ ಉದಯ್ ಅವರ ಪತ್ನಿ ವಿಶಿತಾ ಖಾಸಗಿ ಕೆಲಸ ನಿಮಿತ್ತ ಮಣಿಕೊಂಡಕ್ಕೆ ತೆರಳಿದ್ದರು ಎನ್ನಲಾಗಿದೆ. ಕಿರಣ್ ಫೋನ್ ಕರೆ ಸ್ವೀಕರಿಸದಿದ್ದಾಗ ಗಾಬರಿಕೊಂಡು ತಕ್ಷಣವೇ ಮನೆಗೆ ಬಂದು ನೋಡಿದರೆ ಉದಯ್ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ.
ಜ.26, 1980ರಲ್ಲಿ ಜನಸಿದ್ದ ಉದಯ್ ಕಿರಣ್ ಅವರಿಗೆ ನುವ್ವು, ನೇನು ಚಿತ್ರ ಜನಪ್ರಿಯತೆ ತಂದುಕೊಟ್ಟಿತ್ತು. 'ಮನಸಂತಾ ನುವ್ವೆ' ಚಿತ್ರ ಸೇರಿದಂತೆ ಹಲವು ಚಿತ್ರಗಳಲ್ಲಿ ಉದಯ್ ಕಿರಣ್ ಅವರು ಅಭಿನಯಿಸಿದ್ದರು. ಉದಯ್ ಅವರು ತಮಿಳು ಚಿತ್ರ 'ಪೊಯಿ' ಮತ್ತು 'ಪೆಣ್ ಸಿಂಗಂ' ಚಿತ್ರಗಳಲ್ಲೂ ಅಭಿನಯಿಸಿದ್ದರು.
2012ರ ಅಕ್ಟೋಬರ್ನಲ್ಲಿ ತಮ್ಮ ಗೆಳತಿ ವಿಶಿತಾ ಅವರೊಂದಿಗೆ ಉದಯ್ ಮದುವೆಯಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


