ಈಗಿನ ಸುದ್ದಿ

ಮುಜಾಫರ್‌ನಗರ ಗಲಭೆ ಸಂತ್ರಸ್ತರು ಲಷ್ಕರೆ ಸೇರುವಂತೆ ಒತ್ತಾಯ?

Published On :

ನವದೆಹಲಿ:  ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್‌ಐ ಮುಜಾಫರ್ ನಗರದ ಕೋಮುಗಲಭೆಯನ್ನು ಬಳಸಿ ಲಾಭಗಿಟ್ಟಿಸಿಕೊಳ್ಳುವ ಹುನ್ನಾರ ನಡೆಸುತ್ತಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದು ಸರಿ ಎನಿಸುವಂತೆ ಹೊಸ ವಿಷಯವೊಂದು ಬಹಿರಂಗವಾಗಿದೆ. ಅದೇನೆಂದರೆ ಉತ್ತರ ಪ್ರದೇಶದ ಕೋಮು ಹಿಂಸಾಚಾರ ಪ್ರೇರಿತ ಪ್ರದೇಶಗಳಲ್ಲಿ ಉಗ್ರ ಸಂಘಟನೆಯಾದ ಲಷ್ಕರೆ ತೊಯ್ಬಾ  ಅಲ್ಲಿನ ಜನರನ್ನು ತಮ್ಮ ಸಂಘಟನೆಗೆ ಸೇರಲು ಪುಸಲಾಯಿಸುವ ಯತ್ನ ನಡೆಸಿದೆ ಎಂಬ ಸುದ್ದಿ ಇದೀಗ ಬೆಳಕಿಗೆ ಬಂದಿದೆ.

ಲಷ್ಕರೆ ಸಂಘಟನೆಯೊಂದಿಗೆ ನಂಟು ಹೊಂದಿದ್ದಾರೆ ಎಂಬ ಆರೋಪದಲ್ಲಿ ಇತ್ತೀಚೆಗೆ ಹರ್ಯಾಣದಲ್ಲಿ ಬಂಧನಕ್ಕೊಳಗಾಗಿರುವ ಇಬ್ಬರು ಮುಸ್ಲಿಂ ಯುವಕರು ಈ ವಿಷಯವನ್ನು ದೆಹಲಿ ಪೊಲೀಸರಿಗೆ ಹೇಳಿದ್ದಾರೆ.

ಲಷ್ಕರೆ ಸಂಘಟನೆಯ ಶಂಕಿತ ಉಗ್ರರೆಂದು ಆರೋಪವಿರುವ ಈ ವ್ಯಕ್ತಿಗಳು ಮುಜಾಫರ್ ನಗರ ಕೋಮುಗಲಭೆ ಸಂತ್ರಸ್ತರನ್ನು ಭಾರತ-ವಿರೋಧಿ ಕಾರ್ಯಗಳಿಗೆ ಬಳಸಲು ಯೋಚನೆ ನಡೆಸಿದ್ದೆವು ಎಂಬುದನ್ನು ದೆಹಲಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ.

ಅದೇ ವೇಳೆ ಮುಜಾಫರ್‌ನಗರ ಕೋಮುಗಲಭೆಯ ಸಂತ್ರಸ್ತರು ಕೂಡಾ ಲಷ್ಕರೆ ಸಂಘಟನೆಯವರು ತಮ್ಮನ್ನು ಸಂಘಟನೆಗೆ ಸೇರುವಂತೆ ಪುಸಲಾಯಿಸಿದ್ದರು ಎಂದು ಹೇಳಿದ್ದಾರೆ.

ಲಷ್ಕರೆ ಸಂಘಟನೆ ಜತೆಗೆ ಕೆಲಸ ಮಾಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಲಷ್ಕರೆ ಸಂಘಟನೆಯ ಈ ವ್ಯಕ್ತಿಗಳು ದೆಹಲಿಗೆ ತೆರಳಿ ಅಲ್ಲಿ ತಮ್ಮ ಕಾರ್ಯವನ್ನು ಮುಂದುವರಿಸಿದ್ದರು.

ಏತನ್ಮಧ್ಯೆ, ಬಂಧಿತರಾಗಿರುವ ಹಫೀದ್ ರಷೀದಿ ಮತ್ತು ಶಾಹಿದ್ ಎಂಬ ಶಂಕಿತ ಉಗ್ರರು ಮುಜಾಫರ್‌ನಗರ ಗಲಭೆ ಸಂತ್ರಸ್ತರ ಶಿಬಿರಗಳಿಗೆ ಭೇಟಿ ನೀಡಿದ್ದರು ಎಂದು ದೆಹಲಿ ಪೊಲೀಸರ ವಿಶೇಷ ದಳ ಶಂಕೆ ವ್ಯಕ್ತ ಪಡಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.